Friday, August 29, 2025
HomeUncategorizedಗೌರಿ ಖಾನ್ ಒಡೆತನದ ರೆಸ್ಟೋರೆಂಟ್​ನಲ್ಲಿ ನಕಲಿ ಪನ್ನೀರ್ ಬಳಕೆ ? ಶಾರುಕ್​ ಪತ್ನಿ ಮೇಲೆ ಗಂಭೀರ...

ಗೌರಿ ಖಾನ್ ಒಡೆತನದ ರೆಸ್ಟೋರೆಂಟ್​ನಲ್ಲಿ ನಕಲಿ ಪನ್ನೀರ್ ಬಳಕೆ ? ಶಾರುಕ್​ ಪತ್ನಿ ಮೇಲೆ ಗಂಭೀರ ಆರೋಪ

ಶಾರುಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್  ಹಲವು ರೀತಿಯ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನ್ ಮಾಡುತ್ತಾರೆ. ಅವರು ರೆಸ್ಟೋರೆಂಟ್ ಉದ್ಯಮವನ್ನೂ ನಡೆಸುತ್ತಿದ್ದಾರೆ. ಅವರು ಮುಂಬೈನ ಬಾಂದ್ರಾದಲ್ಲಿ ‘ಟೋರಿ’ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಸಾವಿರಾರು ರೂಪಾಯಿ ಬಿಲ್ ಹಾಕುವ ಈ ರೆಸ್ಟೋರೆಂಟ್​ನಲ್ಲಿ ಕಲಬೆರೆಕೆ ಫುಡ್​ ಬಳಕೆ ಮಾಡುತ್ತಿರುವ ಆರೋಪ ಎದುರಾಗಿದೆ.

2024ರಲ್ಲಿ ಉದ್ಘಾಟನೆಯಾದ ಈ ಐಶಾರಾಮಿ ರೆಸ್ಟೊರೆಂಟ್‌ನಲ್ಲಿ 500 ರೂಪಾಯಿಯಿಂದ ಹಿಡಿದು 5000 ರೂಪಾಯಿಯವರೆಗೆ ಇಲ್ಲಿ ಊಟಕ್ಕೆ ದರವನ್ನು ನಿಗದಿ ಮಾಡಲಾಗಿದೆ. ಮುಂಬೈನ ಖಾರ್ ವೆಸ್ಟ್‌ನ ಪಾಲಿ ಹಿಲ್‌ ರೋಡ್‌ನಲ್ಲಿರುವ ಈ ರೆಸ್ಟೊರೆಂಟ್‌ನಲ್ಲಿ 30 ML ಟಕೀಲಾ ಕುಡಿಯಬೇಕು ಅಂದರೆ ಜೇಬಿನಲ್ಲಿ 7500 ರೂಪಾಯಿ ಹಣ ಇರಬೇಕು. ಮೆನು ನೋಡಿದರೆ ಸಾಕು ತಲೆ ತಿರುಗಿ ಬೀಳಬೇಕು. ಆದರೂ ಇಂತಹ ಐಶಾರಾಮಿ ರೆಸ್ಟೊರೆಂಟ್‌ಗೆ ದಿನನಿತ್ಯ ಹಲವಾರು ಜನ ಹೋಗುತ್ತಾರೆ. ದುಡ್ಡನ್ನು ನೀರಿನಂತೆ ಖರ್ಚು ಮಾಡಿ ಬರುತ್ತಾರೆ.ಅದೇ ಜನರ ಪ್ರಾಣದ ಜೊತೆ ಗೌರಿ ಖಾನ್​ ಚೆಲ್ಲಾಟವಾಡುತ್ತಿದ್ದಾರೆ.

ಇದನ್ನೂ ಓದಿ :ನಾಯಿ ಖರೀದಿಸಲು ಹಣ ಕೊಡಲಿಲ್ಲ ಎಂದು ವೃದ್ದ ತಾಯಿಯನ್ನು ಕೊಂದ ಮಗ

ಯೂಟ್ಯೂಬರ್ ಸಾರ್ಥಕ್ ಸಚ್‌ದೇವ ಮೊನ್ನೆ ಮೊನ್ನೆ ರಿಯಾಲಿಟಿ ಚೆಕ್ ಮಾಡಿದ್ದಾರೆ. ಸ್ಟಾರ್‌ಗಳ ಒಡೆತನದ ರೆಸ್ಟೋರೆಂಟ್‌ಗಳಿಗೆ ತೆರಳಿ ಅಲ್ಲಿನ ಆಹಾರದ ಗುಣಮಟ್ಟವನ್ನು ಪರೀಕ್ಷೆ ಮಾಡಿದ್ದಾರೆ. ಆ ಪೈಕಿ ಗೌರಿಯ ಟೋರಿ ಕೂಡ ಒಂದು. ಟೋರಿಯ ಒಳಗೆ ಹೋದ ಸಾರ್ಥಕ್ ನಾಲಿಗೆಗೆ ರುಚಿ ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾದ ಪನೀರ್‌ನ ಆರ್ಡರ್ ಮಾಡಿದ್ದಾರೆ. ಆ ನಂತರ ಪನೀರ್‌ ತುಂಡಿನ ಮೇಲೆ ಅಯೋಡಿನ್ ಟಿಂಚರ್‌ನ ಹನಿಗಳನ್ನು ಹಾಕಿದ್ದಾರೆ. ಆಗ ಪನ್ನೀರ್‌ ತುಂಡಿನ ಬಣ್ಣ ಬದಲಾಗಿದೆ. ಪನೀರ್ ನೀಲಿ ಬಣ್ಣಕ್ಕೆ ತಿರುಗಿದೆ.

ಸಾರ್ಥಕ್ ಅವರು ಮೊದಲು ವಿರಾಟ್ ಕೊಹ್ಲಿ ಒಡೆತನದ ಹೋಟೆಲ್​ಗೆ ತೆರಳಿದ್ದಾರೆ. ಆ ಬಳಿಕ ಶಿಲ್ಪಾ ಶೆಟ್ಟಿ, ಬಾಬಿ ಡಿಯೋಲ್ ಒಡೆತನದ ರೆಸ್ಟೋರೆಂಟ್​ಗಳಲ್ಲೂ ಪನ್ನೀರ್​ನ ಪರಿಶೀಲಿಸಿದ್ದಾರೆ. ಇಲ್ಲಿ ಒರಿಜಿನಲ್ ಪನೀರ್ ಸಿಕ್ಕಿದೆ. ಆದರೆ, ಗೌರಿ ಖಾನ್ ಒಡೆತನದ ಟೋರಿ ರೆಸ್ಟೋರೆಂಟ್​ನಲ್ಲಿ ನಕಲಿ ಅಥವಾ ಕಳಪೆ ಗುಣಪಟ್ಟದ ಪನ್ನೀರ್ ಸಿಕ್ಕಿದೆ.

ಇದನ್ನೂ ಓದಿ :ಮುಸ್ಲಿಂರಿಗೆ ಹಂದಿ ಕಂಡ್ರೆ ಆಗಲ್ಲ, ಯಾಕೆಂದರೆ ಅವರು ಹಂದಿ ತರ ಮಕ್ಕಳನ್ನ ಹುಟ್ಟಿಸ್ತಾರೆ: ಪ್ರಮೋದ್ ಮುತಾಲಿಕ್​

ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಗೌರಿ ಖಾನ್ ತಂಡಲೇ ಕೂಡಲೇ ಡ್ಯಾಮೇಜ್ ಆದ ಇಮೇಜ್ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಸಾರ್ಥಕ್ ಸಚದೇವ್ ಅವರ ವಿಡಿಯೋ ಕೆಳಗೆ ಸ್ಪಷ್ಟನೆಯನ್ನು ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟೋರಿ ತಂಡ ಸೋಯಾ ಆಧಾರಿತ ಪದಾರ್ಥಗಳನ್ನು ಹೊಂದಿರುವುದರಿಂದ ಪನೀರ್ ಬಣ್ಣ ಬದಲಾಗಿದೆ, ಅಯೋಡಿನ್ ಪರೀಕ್ಷೆ ಪನೀರ್‌ ಅಸಲಿ-ನಕಲಿ ಎಂದು ತಿಳಿಯುವುದಿಲ್ಲ ಎಂಬ ವಾದವನ್ನು ಮಂಡಿಸಿದೆ.   ಇದೀಗ ಗೌರಿ ಖಾನ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಸಮರ ಶುರುವಾಗಿದೆ ಕಲಬೆರಕೆ ಆಹಾರವನ್ನು ಪೂರೈಸುವ ಮೂಲಕ ಗೌರಿ ಖಾನ್ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶವನ್ನು ಅನೇಕರು ಹೊರ ಹಾಕುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments