Saturday, August 23, 2025
Google search engine
HomeUncategorizedಭಾರತ ರತ್ನ ರೇಸ್​ನಲ್ಲಿ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಮತ್ತು ರತನ್​ ಟಾಟ !

ಭಾರತ ರತ್ನ ರೇಸ್​ನಲ್ಲಿ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಮತ್ತು ರತನ್​ ಟಾಟ !

ದೆಹಲಿ: ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಈ ಭಾರಿ ಯಾರು ಸ್ವೀಕರಿಸುತ್ತಾರೆ ಎಂದು ಅನೇಕ ಊಹಾಪೋಹಗಳು ಹರಿದಾಡುತ್ತಿದ್ದು. ಈ ವರ್ಷ ಪ್ರಶಸ್ತಿ ಪುರಸ್ಕೃತರಲ್ಲಿ ಉನ್ನತ ರಾಜಕಾರಣಿಗಳೂ ಇರಬಹುದು. ಗಣರಾಜ್ಯೋತ್ಸವದಂದು ಬಿಡುಗಡೆಯಾಗುವ ಪಟ್ಟಿಯಲ್ಲಿ ಅಚ್ಚರಿಯ ಅಂಶವೂ ಇರಬಹುದು.

ಭಾರತ ರತ್ನ ಪ್ರಶಸ್ತಿಗೆ ಅನೇಕ ಹೆಸರುಗಳು ಚಾಲ್ತಿಯಲ್ಲಿದ್ದು, ಕೈಗಾರಿಕೋದ್ಯಮಿ ರತನ್ ಟಾಟಾ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಅಕ್ಟೋಬರ್​ನಲ್ಲಿ ರತನ್​ ಟಾಟಾ ಅವರು ನಿಧನರಾದಾಗ ಅವರಿಗೆ ಭಾರತ ರತ್ನ ನೀಡಲಾಗುತ್ತದೆ ಎಂಬ ಬೇಡಿಕೆ ಕಂಡು ಬಂದಿತ್ತು.ಈ ಕುರಿತು ಮಹರಾಷ್ಟ್ರ ಕ್ಯಾಬಿನೆಟ್​ ಕೂಡ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ನಿರ್ಣಯ ಅಂಗೀಕರಿಸಿತ್ತು.

ಇದನ್ನೂ ಓದಿ :ಶಸ್ತ್ರಾಸ್ತ್ರ ತಯಾರಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ : 8 ಮಂದಿ ಸಾ*ವು !

ಜೊತೆಗೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ರಿಗೂ ಕೂಡ ಮರಣೋತ್ತರ ಭಾರತ ರತ್ನ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಮನಮೋಹನ್​ ಸಿಂಗ್​ರು ಡಿಸೆಂಬರ್ 26ರಂದು ದೆಹಲಿಯ ಏಮ್ಸ್​ನಲ್ಲಿ ಕೊನೆಯುಸಿರೆಳೆದಿದ್ದರು. ಇವರು ನಿಧನರಾದ ಸಂದರ್ಭದಲ್ಲಿಯೂ ಇವರ ಸಾಧನೆಯನ್ನು ಗಮನಿಸಿ ಇವರಿಗೆ ಭಾರತ ರತ್ನ ನೀಡಬೇಕು ಎಂದು ಘೋಷಣೆಗಳು ಕೇಳಿಬಂದಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments