Wednesday, August 27, 2025
Google search engine
HomeUncategorizedಕ್ಯಾಲೀಪೋರ್ನಿಯಾದಲ್ಲಿ ಕಾಡ್ಗಿಚ್ಚು : 8 ಸಾವಿರ ಮನೆಗಳು ನಾಶ, ಸಾವಿರಾರು ಜನರ ಸ್ಥಳಾಂತರ !

ಕ್ಯಾಲೀಪೋರ್ನಿಯಾದಲ್ಲಿ ಕಾಡ್ಗಿಚ್ಚು : 8 ಸಾವಿರ ಮನೆಗಳು ನಾಶ, ಸಾವಿರಾರು ಜನರ ಸ್ಥಳಾಂತರ !

ವಾಷಿಂಗ್ಟನ್‌: ಅಮೆರಿಕದ ಕ್ಯಾಲೀಪೋರ್ನಿಯಾದ ಲಾಸ್​ ಏಂಜಲೀಸ್​ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಪ್ರಮಾಣದ ಹಾನಿಯುಂಟು ಮಾಡಿದೆ ಎಂದು ಮಾಹಿತಿ ದೊರೆತಿದೆ. ಈಗಾಗಲೇ ಕ್ಯಾಲಿಪೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಅಮೆರಿಕ ದೇಶದಲ್ಲಿ 2024ರ ಆರಂಭದಿಂದಲೂ ಕಾಡ್ಗಿಚ್ಚಿನ ಆರ್ಭಟ ಮೇರೆ ಮೀರಿದೆ. ಕಾಡ್ಗಿಚ್ಚಿನ ಹಾವಳಿಗೆ ಕೆಂಗಟ್ಟರಿವ ಕ್ಯಾಲಿಫೋರ್ನಿಯಾದಲ್ಲಿ ಇದೀಗ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು. ಸಾವಿರಾರು ಜನರನ್ನು ಸ್ಥಳಾಂತರ ಮಾಡಿದ್ದಾರೆ. ಎಲ್​.ಎ ಫೆಸಿಫಿಕ್​ ಪಾಲಿಸೇಡ್ಸ್​ ಪ್ರದೇಶದಲ್ಲಿ ಸ್ಫೋಟಗೊಂಡ ಕಾಡ್ಗಿಚ್ಚು , ಕಳೆದ ಎರಡು ದಿನಗಳಿಂದ ಆರ್ಭಟಿಸುತ್ತಿದೆ. 

ಇದನ್ನೂ ಓದಿ :ಅಕ್ರಮ ಸಂಬಂಧದ ಅನುಮಾನ : ಲಿವಿಂಗ್​ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆ ಮತ್ತು ಆಕೆಯ ಮಗಳ ಕೊ*ಲೆ !

ಸಾವಿರಾರು ಎಕರೆ ಕೃಷಿ ಭೂಮಿ ಮತ್ತು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಆವರಿಸಿದ್ದು. ಈ ಬೆಂಕಿ ಜನವಸತಿ ಪ್ರದೇಶಕ್ಕೂ ಆವರಿಸಿದೆ. ಲಾಸ್​ ಏಂಜಲೀಸ್​ನಲ್ಲಿರುವ ಮನೆಗಳು ಸೇರಿದಂತೆ ಒಟ್ಟು 35 ಸಾವಿರ ಮನೆಗಳಿಗೆ ಹಾನಿಯಾಗುವಾ ಸಂಭವವಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸುಮಾರು 8 ಸಾವಿರ ಮನೆಗಳು ಈ ಅಗ್ನಿಗೆ ಆಹುತಿಯಾಗಿದೆ ಎಂದು ಮಾಹಿತಿ ದೊರೆತಿದೆ.

ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಒಟ್ಟು 17,459 ಎಕರೆ ಪ್ರದೇಶದಲ್ಲಿ ಕಾಡ್ಗಿಚ್ಚು ಆವರಿಸಿದ್ದು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾವಿರಾರು ಜನರನ್ನು ಸ್ಥಳಾಂತರ ಮಾಡಿದ್ದಾರೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದು. ಈ ಭಾಗದಲ್ಲಿ ದಟ್ಟವಾದ ಹೊಗೆ ಆವರಿಸಿ, ಆಕಾಶವು ಕಿತ್ತಳೆ ಬಣ್ಣಕ್ಕೆ ತಿರುಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments