Monday, August 25, 2025
Google search engine
HomeUncategorizedಎಚ್ಚರಿಕೆ: ಮತ್ತೆ ಕೋವಿಡ್​ ಪ್ರಕರಣ ಏರಿಕೆ!

ಎಚ್ಚರಿಕೆ: ಮತ್ತೆ ಕೋವಿಡ್​ ಪ್ರಕರಣ ಏರಿಕೆ!

ಕೇರಳ: ಏಷ್ಯಾ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ದಿಢೀರ್ ಏರಿಕೆಯಾಗುತ್ತಿದೆ ಪ್ರಮುಖವಾಗಿ ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಕೋವಿಡ್ ಗಣನೀಯ ಏರಿಕೆಯಾಗಿದ್ದು, ಮಾಸ್ಕ್ ಸೇರಿದಂತೆ ಇತರ ಮಾರ್ಗಸೂಚಿಗಳು ಜಾರಿಯಾಗಿದೆ.

ಇದೀಗ ಭಾರತದಲ್ಲೂ ಕೋವಿಡ್ ಪ್ರಕರಣ ಏರಿಕೆಯಾಗಿದೆ. ಪ್ರಮುಖವಾಗಿ ಕೇರಳದಲ್ಲಿ ಶೇಕಡಾ 90 ರಷ್ಟು ಪ್ರಕರಣ ದಾಖಲಾಗಿದೆ. ನವೆಂಬರ್ ತಿಂಗಳಲ್ಲಿ ಕೇರಳದಲ್ಲಿ 450 ಕೋವಿಡ್ ಪ್ರಕರಣ ದಾಖಲಾಗಿತ್ತು. ಆದರೆ, ಡಿಸೆಂಬರ್ ತಿಂಗಳ 15ರವರೆಗೆ 825 ಕೋವಿಡ್ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲ ಈ ತಿಂಗಳಲ್ಲಿ ಕೋವಿಡ್‌ಗೆ ಇಬ್ಬರು ಬಲಿಯಾಗಿದ್ದಾರೆ. ಬಹುತೇಕ ಕೋವಿಡ್ ಪ್ರಕರಣಗಳು ಆಸ್ಪತ್ರೆ ದಾಖಲಾಗಿರುವ ರೋಗಿಗಳಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ: KSRTC ಟ್ರೇಡ್ ಮಾರ್ಕ್ ವಿವಾದ ಅಂತ್ಯ: ಕರ್ನಾಟಕಕ್ಕೆ ಜಯ

ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗುವ ರೋಗಿಗಳನ್ನು H1N1 ಹಾಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಈ ಪೈಕಿ ಬಹುತೇಕ ರೋಗಿಗಳ H1N1 ನೆಗಟೀವ್ ವರದಿ ಬಂದಿದ್ದರೆ, ಕೋವಿಡ್ ಪಾಸಿಟೀವ್ ಆಗಿದೆ. ಕೋವಿಡ್ ಮೂರು ಅಲೆಗಳ ಬಳಿಕವೂ ಭಾರತದಲ್ಲಿ ಹವಾಮಾನ ಬದಲಾದಂತೆ ಕೋವಿಡ್ ಕಾಣಿಸಿಕೊಂಡಿದೆ. ಈ ಬಾರಿ ಡಿಸೆಂಬರ್ ತಿಂಗಳ ಆರಂಭದಲ್ಲೇ ಕೇರಳದಲ್ಲಿ 2 ಸಾವು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments