Thursday, August 28, 2025
HomeUncategorizedಪಿಯು ಸಮಿತಿಯಿಂದ ರೋಹಿತ್​ ಚಕ್ರತೀರ್ಥ ಔಟ್ : ಬಿ.ಸಿ ನಾಗೇಶ್

ಪಿಯು ಸಮಿತಿಯಿಂದ ರೋಹಿತ್​ ಚಕ್ರತೀರ್ಥ ಔಟ್ : ಬಿ.ಸಿ ನಾಗೇಶ್

ಬೆಂಗಳೂರು : ಬಹು ವಿವಾದ ಸೃಷ್ಟಿಸಿರುವ ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ಚಿಂತಕ ರೋಹಿತ್​ ಚಕ್ರತೀರ್ಥ ಅವರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ತಿಳಿಸಿದ್ದಾರೆ.

ಬಸವಣ್ಣ ಪಠ್ಯ‌ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪ ಅವರು ನೀಡಿದ ಪಠ್ಯವನ್ನೇ ಮುಂದುವರೆಸಲಿದ್ದೇವೆ. ಅದರಲ್ಲಿರೋ ಬಗ್ಗೆ ಯಾರಿಗೂ ಆಕ್ಷೇಪ ಇಲ್ಲ. ಹಾಗಾಗಿ ಬರಗೂರು ಪಠ್ಯಪುಸ್ತಕ ಸಮಿತಿ ನೀಡಿದ ಬಸವಣ್ಣ ಪಠ್ಯ ಮುಂದುವರೆಯಲಿದೆ. ಅಂಬೇಡ್ಕರ್ ಪಠ್ಯ ಸೇರಿದಂತೆ ಇತರೆ ಪಠ್ಯಗಳಲ್ಲಿರೋ ಲೋಪಗಳನ್ನೂ ಸರಿಪಡಿಸುತ್ತೇವೆ ಎಂದರು.

ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿರುವ ಕಾರಣ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಅಧ್ಯಾಯ 4.2ರ ಹೊಸ ಧರ್ಮಗಳ ಉದಯ ಪಠ್ಯಭಾಗದ ಪರಿಷ್ಕರಣೆ ಈ ಮೊದಲು ಸರ್ಕಾರ ಮುಂದಾಗಿತ್ತು. ಪಠ್ಯ ಪರಿಷ್ಕರಣೆ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥ ಅವರಿಗೆ ವಹಿಸಲಾಗಿತ್ತು. ಶಾಲೆಗಳ ಪಠ್ಯದ ಪರಿಷ್ಕರಣೆ ವಿವಾದ ಹಿನ್ನೆಲೆಯಲ್ಲಿ ‘ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ಕೈಬಿಡಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಯಾವುದೇ ಆದೇಶ ಹಿಂಪಡೆದಿಲ್ಲ. ಒಂದೇ ಒಂದು ಪಾಠ ಪರಿಷ್ಕರಣೆಗೆ ಸಮಿತಿ ಮಾಡೋದು ಬೇಡ ಅಂತ. ಇವರನ್ನ ನೇಮಕ ಮಾಡಲಾಗಿತ್ತು. ಇಲ್ಲದಿರುವವರ ಕೈಯಿಂದ ಪಠ್ಯ ಪರಿಷ್ಕರಣೆ ಮಾಡಲಾಗಲ್ಲ. ಈಗ ಯಾವುದೇ ಪರಿಷ್ಕರಣೆ ಮಾಡಲ್ಲ. ಪಿಯುಸಿ ಪಠ್ಯ ಎತಾವತ್ತಾಗಿ ಇರಲಿದೆ. ಈಗ ಪಠ್ಯ ಪುಸ್ತಕ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಹಾಗಾಗಿ ಅವರಿಂದ ಪಠ್ಯ ಪರಿಷ್ಕರಣೆ ಮಾಡಿಸಲ್ಲ. ಪ್ರತೀ ತಿಂಗಳು ಶಿಕ್ಷಣ ಹಾಗೂ ಶಿಕ್ಷಣ ಆಸಕ್ತರ ಬಗ್ಗೆ ಸಭೆ ನಡೆಯಲಿದೆ. ದೇಶದ ಪುನರ್ ನಿರ್ಮಾಣ ಕಾರ್ಯಕ್ಕೆ ಹೊರಟಿದ್ದೇವೆ. ಶಿಕ್ಷಣ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಿದೆ ಎಂದು ತಿಳಿಸಿದ್ದರು

RELATED ARTICLES
- Advertisment -
Google search engine

Most Popular

Recent Comments