Tuesday, September 9, 2025
HomeUncategorizedಇನ್ಮುಂದೆ ಮೂರು ವರ್ಷದ ಮಕ್ಕಳಿಗೂ ಹಾಫ್‌ ಟಿಕೆಟ್‌..!

ಇನ್ಮುಂದೆ ಮೂರು ವರ್ಷದ ಮಕ್ಕಳಿಗೂ ಹಾಫ್‌ ಟಿಕೆಟ್‌..!

ಬೆಂಗಳೂರು: ಈ ಹಿಂದೆ KSRTC ಬಸ್‌ಗಳಲ್ಲಿ ಆರು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣದ ವ್ಯವಸ್ಥೆಯಿತ್ತು. 6-12 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅರ್ಧ ಟಿಕೆಟ್‌ ನೀಡಲಾಗುತ್ತಿತ್ತು. ಈಗ ವಯಸ್ಸನ್ನು ಆಧರಿಸಿ ಟಿಕೆಟ್‌ ಪಡೆಯುತ್ತಿಲ್ಲ. ಬದಲಿಗೆ ಮಗುವಿನ ಎತ್ತರ ಆಧರಿಸಿ ಟಿಕೆಟ್‌ ನೀಡಲಾಗುತ್ತದೆ. ಮಗು ಮೂರು ಅಡಿ ಎತ್ತರವಿದ್ದು, ವಯಸ್ಸು ಇನ್ನೂ ಎರಡು ಅಥವಾ ಮೂರು ವರ್ಷವೇ ಆಗಿರಲಿ. ಅಂತಹ ಪೋಷಕ ಪ್ರಯಾಣಿಕರಿಂದ ಅರ್ಧ ಟಿಕೆಟ್‌ನ ಹಣ ಪಡೆದು ಟಿಕೆಟ್‌ ಕೊಡಲಾಗುತ್ತಿದೆ. ಇಂಥದೊಂದು ವ್ಯವಸ್ಥೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ(KSRTC) ಸಂಸ್ಥೆ ಜಾರಿಗೆ ತಂದಿದೆ.

ಅದುವಲ್ಲದೇ, ಮಕ್ಕಳ ಎತ್ತರ ನೋಡಲು ಬಸ್‌ನ ಮಧ್ಯದಲ್ಲಿರುವ ಸರಳುಗಳ ಮೇಲೆ ಎರಡು ಕಡೆ (3 ಅಡಿ, 4 ಅಡಿ) ಬಣ್ಣದಲ್ಲಿ ಗುರುತು ಮಾಡಲಾಗಿದೆ. ಯಾರು ಟಿಕೆಟ್‌ ತೆಗೆದುಕೊಳ್ಳಲು ನಿರಾಕರಿಸುತ್ತಾರೋ ಅಂತಹವರ ಮಕ್ಕಳನ್ನು ಸರಳಿಗೆ ನಿಲ್ಲಿಸಿ, ಎತ್ತರ ನೋಡಿ ಟಿಕೆಟ್‌ ನೀಡಲಾಗುತ್ತೆ . ಇನ್ನು ಇದು ಸಾಕಷ್ಟು ಬಡ ಪ್ರಯಾಣಿಕರಿಗೆ ಆರ್ಥಿಕವಾಗಿ ಹೊರೆಯಾಗಿದೆ. 3 ವರ್ಷದ ಮಕ್ಕಳಿಗೆ ಟಿಕೆಟ್ ಅನಗತ್ಯ ಅಂತ ಇಂತಹ ಆದೇಶ ವಾಪಸ್ ಪಡೆಯಬೇಕು ಅಂತ ಆಗ್ರಹಿಸಿದ್ದಾರೆ.

ಒಟ್ಟಾರೆ ದೂರದ ಊರುಗಳಿಗೆ ಪ್ರಯಾಣ ಮಾಡುವವರಿಗೆ ಈ ಹಾಫ್ ಟಿಕೆಟ್ ಹೊರೆಯಾಗಿದೆ. ಅಸ್ಟೇ ಅಲ್ಲ. ಇತ್ತೀಚೆಗೆ ಬಸ್‌ಗಳಲ್ಲಿ ಪ್ಯಾಸೆಂಜರ್ಸ್ ಫ್ರೆಂಡ್ಲಿ’ ವಾತಾವರಣವಿಲ್ಲದಂತಾಗಿದೆ ಅಂತಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments