Wednesday, September 17, 2025
HomeUncategorized'ಗ್ರಾಮ‌ ಪಂಚಾಯತ್ ಚುನಾವಣೆಗೆ ಮಂಗಳಮುಖಿ‌ ನಾಮಪತ್ರ ಸಲ್ಲಿಕೆ'

‘ಗ್ರಾಮ‌ ಪಂಚಾಯತ್ ಚುನಾವಣೆಗೆ ಮಂಗಳಮುಖಿ‌ ನಾಮಪತ್ರ ಸಲ್ಲಿಕೆ’

ಕೊಪ್ಪಳ: ಈ ಬಾರಿ ಗ್ರಾಮ‌ ಪಂಚಾಯತ್ ಚುನಾವಣೆ ಕಣ ಬಾರಿ ರಂಗೇರಿದೆ. ಅಭ್ಯರ್ಥಿಗಳ ಹರಾಜು, ಅವಿರೋಧ ಆಯ್ಕೆ, ಅದು ಇದು ಅಂತಾ ಒಂದಿಲ್ಲೊಂದು ಕಾರಣಕ್ಕೆ 2020 ಗ್ರಾಮ ಪಂಚಾಯತಿ ಚುನಾವಣೆ ಬಾರಿ ಸದ್ದು ಮಾಡುತ್ತಿದೆ. ಇನ್ನೂ ಈ ಲಿಸ್ಟ್ ಇದೀಗ ಮತ್ತೊಂದು ಸೇರ್ಪಡೆ ತೃತಿಯ ಲಿಂಗ ಅಂದರೆ ಮಂಗಳ ಮುಖಿಯೊಬ್ಬರು ಗ್ರಾಮ‌ ಪಂಚಾಯತ ಚುನಾವಣೆಗೆ ನಾಮ ಪತ್ರ ಸಲ್ಲಿಸಿ ಬಾರಿ ಸದ್ದು ಮಾಡಿದ್ದಾರೆ.. ಹೌದು ಕೊಪ್ಪಳದ ಕಾರಟಗಿ ತಾಲೂಕಿನ ಸಿದ್ದಾಪುರ  ಹೋಬಳಿಯ ಬೆನ್ನೂರು ಗ್ರಾಮದ 1ನೇ ವಾರ್ಡ ನಲ್ಲಿ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮಂಗಳಮುಖಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದ್ದು,  ಚುನಾವಣೆ ಕಣದಲ್ಲಿ ಬಹಳಷ್ಟು  ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಸಾಮಾನ್ಯ ವಿಶೇಷವೆಂದರೆ ಬೆನ್ನೂರು ಗ್ರಾಮದಲ್ಲಿ ಜಮುನಾ ಎಂಬ ಮಂಗಳಮುಖಿ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದು ಕುತೂಹಲ ಕೆರಳಿಸಿದೆ.

 ನಾಮಪತ್ರ ಸಲ್ಲಿಸಿ ಮಾತನಾಡಿದ ಜಮುನಾ ಇಂದು ಮಂಗಳಮುಖಿಯರು ಎಲ್ಲಾ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದು, ಗ್ರಾಮದ ಅಭಿವೃದ್ಧಿಗಾಗಿ ನಾನು ಕೂಡ ಸೇವೆ ಸಲ್ಲಿಸುತ್ತೇನೆ.  ಸಾಕಷ್ಟು ಜನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನಗೆ ಬೆಂಬಲ ನೀಡಿದ್ದು, ಈ ಸಾರಿ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ತಿಳಿಸಿದ್ದಾರೆ. ಈ ವೇಳೆ ಗ್ರಾಮದ ಕನಕರಾಯ ನಾಯಕ,  ಯಮನೂರ ದರೋಜಿ, ಯಮನೂರ ಕೋಟೆಪ್ಪ ಸೇರಿ ಮುಂತಾದವರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments