Friday, August 29, 2025
HomeUncategorizedಸರ್ಜಿಕಲ್​ ಸ್ಟ್ರೈಕ್ ಮಾಡೋದು ಬಿಟ್ಟು, ಯೂಟ್ಯೂಬ್​ ಚಾನೆಲ್​ ಬ್ಯಾನ್​ ಮಾಡ್ತಾವ್ರೆ: ಪ್ರಿಯಾಂಕ್​ ಖರ್ಗೆ

ಸರ್ಜಿಕಲ್​ ಸ್ಟ್ರೈಕ್ ಮಾಡೋದು ಬಿಟ್ಟು, ಯೂಟ್ಯೂಬ್​ ಚಾನೆಲ್​ ಬ್ಯಾನ್​ ಮಾಡ್ತಾವ್ರೆ: ಪ್ರಿಯಾಂಕ್​ ಖರ್ಗೆ

ಬೆಂಗಳೂರು : ಸಚಿವ ಪ್ರಿಯಾಂಕ ಖರ್ಗೆ ಕೇಂದ್ರ ಸರ್ಕಾರದ ಜಾತಿಗಣತಿ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದು. ‘ಕೇಂದ್ರ ಸರ್ಕಾರ ಪಹಲ್ಗಾಮ್​ ದಾಳಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಇದನ್ನ ತಂದಿದ್ದಾರೆ. ವಿಷಯವನ್ನ ಡೈವರ್ಟ್​ ಮಾಡೊದಕ್ಕೆ ಇದನ್ನ ಮಾಡ್ತಿದ್ದಾರೆ. ಪಾಕಿಸ್ತಾನದ ವಿರುದ್ದ ಆ್ಯಕ್ಷನ್​ ತಗೋಳ್ತಿಲ್ಲಾ.  ಭಾಷಣದ ಮೂಲಕ ಲವ್​ ಲೆಟರ್​ ಬರೆಯೋದನ್ನ ನಿಲ್ಲಿಸಬೇಕು ಎಂದು ಹೇಳಿದರು.

ಜಾತಿ ಗಣತಿ ಬಗ್ಗೆ ಪ್ರಿಯಾಂಕ ಖರ್ಗೆ ಮಾತು..!

ಬಿಜೆಪಿಯವರು ಜಾತಿಗಣತಿಯಿಂದ ಹಿಂದೂ ಸಮಾಜ ಹೊಡೆಯುತ್ತೆ ಅಂತಿದ್ದರು. ಆದರೆ ಈಗ ಜಾತಿಗಣತಿಯಿಂದ ಸಾಮಾಜಿಕ ನ್ಯಾಯ ಸಿಗುತ್ತೆ ಅಂತ ಹೇಳ್ತಿದ್ದಾರೆ. ಆದರೆ ಜಾತಿಗಣತಿ ಮತ್ತೆ ಧ್ವನಿ ಎತ್ತಿದ್ದು ಕಾಂಗ್ರೆಸ್​. 2023ರಲ್ಲಿ ಪ್ರಧಾನಿಗೆ ಎಐಸಿಸಿ ಅಧ್ಯಕ್ಷರು ಪತ್ರ ಬರೆದಿದ್ದರು. ಆದರೆ ಅಂದು ಪ್ರಧಾನಿ ಇದನ್ನು ಹೀಯಾಳಿಸಿದ್ದರು. ಇರೋದು ಕೇವಲ ನಾಲ್ಕೆ ಜಾತಿ ‘ಬಡವರು, ಮಹಿಳೆಯರು, ರೈತರು, ಯುವಕರು ಮಾತ್ರ ಅಂದಿದ್ದರು. ಜಾತಿ ಗಣತಿ ಅರ್ಬನ್​ ನಕ್ಸಲ್​ ಯೋಚನಗಳು ಅಂತಿದ್ದರು, ಆದರೆ ಇಂದು ಬಿಜೆಪಿಗರೆ ಅರ್ಬನ್​ ನಕ್ಸಲ್​ಗಳಾಗಿದ್ದಾರೆ.

ಇದನ್ನೂ ಓದಿ:ಶಿವಾನಂದ ಪಾಟೀಲ್ ಕೊಟ್ಟ​ ರಾಜೀನಾಮೆ ಅನರ್ಹ, ಇದನ್ನ ಸ್ವೀಕರಿಸಲ್ಲ: ಯು,ಟಿ ಖಾದರ್​

ಮದ್ಯಪ್ರದೇಶದ ಬಿಜೆಪಿಯವರು ನಾವು ಜಾತಿ ಗಣತಿ ಮಾಡಲ್ಲ ಅಂತ ಹೇಳಿದ್ರು. ಜಾತಿ ಜನಗಣತಿ ಬ್ರಿಟಿಷ್ ಪಾಲಿಸಿ, ಅದು ಒಡೆದು ಆಳುವ ನೀತಿ ಅಂತ ರಾಜಸ್ಥಾನದ ಸಿಎಂ ಹೇಳಿದ್ರು. ಆದರೆ ಇಂದು ಬಿಜೆಪಿಗರೆ ಇದಕ್ಕೆ ಕೈ ಹಾಕಿದ್ದಾರೆ.  ತೇಜಸ್ವಿ ಸೂರ್ಯ ಮೋದಿ ಮಾಸ್ಟರ್ ಸ್ಟ್ರೋಕ್​ಗೆ ಸ್ವಾಗತ ಅಂದಿದ್ದಾರೆ. ಸಿದ್ದರಾಮಯ್ಯ ಜಾತಿಗಣತಿ ಮೂಲಕ ಹಿಂದೂಗಳನ್ನ ಒಡೆಯುತ್ತಿದ್ದಾರೆ ಅಂತ ಹೇಳಿದ್ರು. ಆದರೆ ಇದೀಗ ಅವರೇ ಜಾತಿಗಣರಿ ಮಾಡಲು ಮುಂದಾಗಿದ್ದಾರೆ.

ಪಹಲ್ಗಾಮ್​ ವಿಷಯ ಡೈವರ್ಟ್ ಮಾಡಲು ಜಾತಿಗಣತಿ ತಂದಿದ್ದಾರೆ..!

ಕೇಂದ್ರ ಸರ್ಕಾರ ಪಹಲ್ಗಾಮ್​ ದಾಳಿಯನ್ನ ಮರೆಮಾಚಲು ಈ ಜಾತಿಗಣತಿ ಎಂಬ ವಿಷಯ ತಂದಿದ್ದಾರೆ. ಜನ ಸಾಮಾನ್ಯರು ಈ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ. ಅದಕ್ಕೆ ಇದನ್ನ ಮಾಡಿದ್ದಾರೆ, ಡಿಫೆನ್ಸ್​ ಮಿನಿಸ್ಟರ್ ರಾಜನಾಥ್​ ಸಿಂಗ್​, ಜೇಮ್ಸ್​ ಬಾಂಡ್​ ಅಜಿತ್​ ಧೋವಲ್​ ಇದ್ದಾಗ ಇಂತ ಘಟನೆ ಏಕಾಯ್ತು ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಪ್ರಧಾನಿ ಮೋದಿ ಏನಾದ್ರು ಆ್ಯಕ್ಷನ್​ ತಗೋತಾರೆ ಅನ್ನೋ ನಂಬಿಕೆ ಇತ್ತು. ಆದರೆ ಅವರು 8 ದಿನದಿಂದ ಮೀಟಿಂಗ್​ ಮಾಡ್ತಿದ್ದಾರೆ. ಅವರು ಭಾಷಣಗಳ ಮೂಲಕ ಪಾಕಿಸ್ತಾನಕ್ಕೆ ಲವ್​ ಲೆಟರ್​ ಬರೆಯೋದನ್ನ ನಿಲ್ಲಿಸಬೇಕು ಎಂದು ಹೇಳಿದರು.

ಇದನ್ನೂ ಓದಿ :ಭೀಕರ ಅಪಘಾತ: ಆಂಬ್ಯುಲೆನ್ಸ್​ ಡಿಕ್ಕಿಯಾಗಿ ಓರ್ವ ಸಾ*ವು, ಇಬ್ಬರಿಗೆ ಗಂಭೀರ ಗಾಯ

ಮುಂದುವರಿದು ಮಾತನಾಡಿದ ಪ್ರಿಯಾಂಕ ಖರ್ಗೆ ‘ಟ್ರಂಪ್​ ಭಾರತದ ಜೊತೆ ಇದ್ದಾರೆ ಅನ್ನುತ್ತಿದ್ದರು, ಆದರೆ ಇದನ್ನು ಟ್ರಂಪ್​ ಖಂಡಿಸಿದ್ದಾರಾ. ಪಾಕಿಸ್ತಾನದ ಮೇಲೆ ಸರ್ಜಿಕಲ್​ ಸ್ಟ್ರೈಕ್​ ಮಾಡೋದು ಬಿಟ್ಟು 16 ಯೂಟ್ಯೂಬ್​ ಚಾನೆಲ್​ ಬ್ಯಾನ್​ ಮಾಡಿದ್ದಾರೆ. ಬಾಲಾಕೋಟ್​ ಏರ್​ಸ್ಟ್ರೈಕ್​, ಸರ್ಜಿಕಲ್​ ಸ್ಟ್ರೈಕ್​ ಬಗ್ಗೆ ಇನ್ನು ಮಾಹಿತಿ ಕೊಟ್ಟಿಲ್ಲ. ಪಹಲ್ಗಾಮ್​ ದಾಳಿಯ ಬಗ್ಗೆ ಆರ್​ಎಸ್​ಎಸ್​ಗೆ ಮೊದಲು ಹೇಳ್ತಾರೆ. ಮೋದಿಗೆ ಈಗಾಗಲೇ ಭಯ ಶುರುವಾಗಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments