Friday, August 29, 2025
HomeUncategorizedಕಾಂಗ್ರೆಸ್​ ಶಾಸಕ ಬಾಲಕೃಷ್ಣ ವಿರುದ್ದ 1600 ಕೋಟಿ ಭೂಕಬಳಿಕೆ ಆರೋಪ : ಲೋಕಾಯುಕ್ತಕ್ಕೆ ದೂರು !

ಕಾಂಗ್ರೆಸ್​ ಶಾಸಕ ಬಾಲಕೃಷ್ಣ ವಿರುದ್ದ 1600 ಕೋಟಿ ಭೂಕಬಳಿಕೆ ಆರೋಪ : ಲೋಕಾಯುಕ್ತಕ್ಕೆ ದೂರು !

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಕಾಂಗ್ರೆಸ್ ಶಾಸಕನ ಪ್ರಭಾವಕ್ಕೆ ಒಳಗಾಗಿ ಸರ್ಕಾರಿ ಅಧಿಕಾರಿಗಳು ಖಾಸಗಿ ಬಿಲ್ಡರ್​ಗೆ ಭೂ ಕಬಳಿಕೆ ಮಾಡಿಕೊಟ್ಟಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದ್ದು . ಈ ಬಗ್ಗೆ ಲೋಕಯುಕ್ತಕ್ಕೆ ದೂರು ಕೂಡಾ ದಾಖಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಕೆಂಗೇರಿ ಉತ್ತರ ಹಳ್ಳಿ ರಸ್ತೆಯ ಮದ್ಯದಲ್ಲಿ ಇರೋ ಸರ್ಕಾರಿ ಜಾಗ ಸರ್ವೆ ನಂಬರ್ 69 ರಲ್ಲಿ ಸುಮಾರು 37 ಎಕರೆ ಜಾಮೀನಿನನ್ನು ಕಾಂಗ್ರೇಸ್ ಶಾಸಕನ ಪ್ರಭಾವಕ್ಕೆ ಒಳಗಾಗಿ ಖಾಸಗಿ ಬಿಲ್ಡರ್ ಭೂ ಕಬಳಿಕೆ ಮಾಡಿ ಜಾಗವನ್ನು ಮಾರಾಟ ಮಾಡದೋಕ್ಕೆ ಮುಂದಾಗಿದ್ದಾರೆ ಅಂತ ಬಿಜೆಪಿ ಮುಖಂಡ ಎನ್ ಅರ್ ರಮೇಶ್ ಅರೋಪ ಮಾಡಿ ದಾಖಲೆ ಸಮೇತ ಲೋಕಯುಕ್ತಗೆ ದೂರು ಸಲ್ಲಿಸಿ ತನಿಖೆ ಮಾಡಬೇಕು ಅಂತ ಮನವಿ ಮಾಡಿದ್ದಾರೆ.

ಕೆಂಗೇರಿ ಬಳಿಯ ಸರ್ವೆ ನಂಬರ್ 69 ರಲ್ಲಿ 193 ಎಕರೆ ಭೂಮಿಯನ್ನು ಹಿಂದೆ ಎಸ್ ಸಿ..ಎಸ್ ಟಿ ಜನಾಂಗಕ್ಕೆ ಸರ್ಕಾರ ಉಚಿತವಾಗಿ ನೀಡಿತ್ತು.. ತದನಂತರ 1999 ರಲ್ಲಿ ಜಮೀನಿನ ಕೆಲ ಮಾಲೀಕರು ಸಾವನ್ನಪ್ಪಿದ್ರು..ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಸಂಸ್ಥೆಯ ಬಿಲ್ಡರ್ ಸುರೇಂದ್ರ ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣರ  ಕೃಪಕಟಾಕ್ಷದಿಂದ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಇಡೀ ಜಾಗವನ್ನು ಮಾರಾಟಕ್ಕೆ ಇಟ್ಟಿದ್ದಾನೆ ಅಂತ ಬಿಜೆಪಿ ಮುಖಂಡ ಅರೋಪ ಮಾಡಿದ್ದಾರೆ..

1999 ರಲ್ಲಿ ಈ ಭೂಮಿಯನ್ನು ಸರ್ಕಾರದ ಸೇಲ್ ಪರ್ಮಿಷನ್ ಪಡೆಯದೆ ಲೇಔಟ್ ಮಾಡಿ ಅನೇಕರಿಗೆ ಸ್ವತ್ತನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ..ಇತ್ತ 37 ಎಕರೆ ಭೂಮಿಯನ್ನು ಕಬಳಿಕೆ ಮಾಡೋದಕ್ಕೆ ಸ್ಥಳೀಯ ಕಂದಾಯ ಅಧಿಕಾರಿಗಳು..ರಾಜ್ಯದ ಕೆಲ ಪ್ರಭಾವಿ ರಾಜಕಾರಣಿಗಳು ಕೈಜೊಡಿಸಿದ್ದಾರೆ..ಸದ್ಯ ಇದರ ಮಾರುಕಟ್ಟೆ ಬೆಲೆ ಸುಮಾರು 1600 ಕೋಟಿಗೂ ಹೆಚ್ಚಿದೆ.. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಜಾಗವನ್ನು ಅಕ್ರಮವಾಗಿ ಕಬಳಿಕೆ ಮಾಡಿ ಈಗ ಮತ್ತೆ ಉಳಿದ ಭೂಮಿ ಯನ್ನು ಮಾರಾಟ ಮಾಡೋದಕ್ಕೆ ಮುಂದಾಗಿದ್ದಾರೆ..ಇದಕ್ಕೆ ಮಾಗಡಿ ಶಾಸಕ ಬಾಲಕೃಷ್ಣ ರವರ ಒತ್ತಡ ಇದೆ.. ಇದರಿಂದ ಈ ಅಕ್ರಮ ದಲ್ಲಿ ಬಾಗಿಯಾಗಿರೋ ಭ್ರಷ್ಟ ಅಧಿಕಾರಿಗಳು ನೂರಾರು ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ. ಇದರಿಂದ ಈ ಪ್ರಕರಣವನ್ನ ಸಿಎಂ ಸಿದ್ದರಾಮಯ್ಯ ನವರು CBI ತನಿಖೆಗೆ ವಹಿಸ ಬೇಕು ಅಂತ NR ರಮೇಶ್ ಆಗ್ರಹಿಸಿದ್ದಾರೆ.

ಸರ್ಕಾರಿ ಜಾಗವನ್ನು ರಕ್ಷಿಸ ಬೇಕಾದ ಅಧಿಕಾರಿಗಳು. ರಾಜಕಾರಣಿಗಳೆ ಈ ರೀತಿ ಸರ್ಕಾರದ ಜಾಗವನ್ನು ಕಬಳಿಸಿ.ನಕಲಿ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡುತ್ತಿರೋದು ನೋಡುದ್ರೆ ..ಮುಂದೊಂದು ದಿನ ವಿಧಾನಸೌಧವನ್ನು ಮಾರಾಟ ಮಾಡಲ್ಲ ಅನ್ನೋದು ಎನು ಗ್ಯಾರಂಟಿ ಅನ್ನೋ ಪ್ರಶ್ನೆ ಕಾಡ್ತಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments