Sunday, August 24, 2025
Google search engine
HomeUncategorizedಲಿಂಗಾಯತ ಶಾಸಕರಿಗೆ ಅಷ್ಟು ಧಮ್ ಇಲ್ಲ : ಶಾಸಕ ಯತ್ನಾಳ್

ಲಿಂಗಾಯತ ಶಾಸಕರಿಗೆ ಅಷ್ಟು ಧಮ್ ಇಲ್ಲ : ಶಾಸಕ ಯತ್ನಾಳ್

ವಿಜಯಪುರ : ಅಲ್ಪಸಂಖ್ಯಾತರ ತುಷ್ಠೀಕರಣ, ಅವರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬುದು ಇದೆ. ಲಿಂಗಾಯತ ಹೆಚ್ಚು ಶಾಸಕರು ಬಂದ್ರೂ, ಅಲ್ಲಿನ ಲಿಂಗಾಯತ ಶಾಸಕರಿಗೆ ಅಷ್ಟು ಧಮ್‌ ಇಲ್ಲ. ಧೈರ್ಯ ಮಾಡೋದಿಲ್ಲ ಎಂದು ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಆರ್ ಪಾಟಿಲ್ ಆಳಂದ ಮಾತಾಡಿದ್ರು, ಮತ್ತೆ ಸುಮ್ಮನಾದ್ರು. ರಾಯರೆಡ್ಡಿ ಮಾತಾಡಿದ್ರು, ಸುಮ್ಮನಾದ್ರು. ಮಾತನಾಡಬೇಕು, ನಮ್ಮಂಗ ಮಾತಾಡಿದ್ರೆ ಯಾಕೆ ಕೊಡೊದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಶಾಮನೂರು ಶಿವಶಂಕರಪ್ಪನವರು ಸೋನಿಯಾ ಗಾಂಧಿ ಬಳಿ ಹೋಗಬೇಕು. ಇಲ್ಲದಿದ್ರೆ ಮುಂಬರು ಲೋಕಸಭಾ ಚುನಾವಣೆಯಲ್ಲಿ ನಮ್ಮ ಜನ ಪಾಠ ಕಲಿಸ್ತಾರೆ ಅಂತ ಹೇಳಬೇಕು. ಮಾತಾಡಿ ಕೊಡಿಸಬೇಕು ನೊಡೋಣ. ವಯಸ್ಸಾಗಿದೆ ಆದ್ರೂ ಇಷ್ಟಾದ್ರೂ ಮಾತಾಡ್ತಾರೆ ಅಂದ್ರೆ ಅವರೇ ಚಲೋ (ಇಷ್ಟಾದ್ರೂ ಧ್ವನಿ‌ ಎತ್ತುತ್ತಾರೆ) ಅಂತಿವಿ‌ ನಾವು ಎಂದು ತಿಳಿಸಿದ್ದದಾರೆ.

ಶಾಮನೂರು ಹೇಳಿದ್ದು ಸತ್ಯ

ಈ ಸರ್ಕಾರದಲ್ಲಿ ಲಿಂಗಾಯತರ ಕಡೆಗಣನೆ ಆಗಿದೆ. ಈ ಸಲ ಲಿಂಗಾಯತರು ಅವರಿಗೆ ಸಪೋರ್ಟ್ ಮಾಡಿದ್ದಾರೆ ಅಂತಲೇ ಅವರಿಗೆ 135 ಸೀಟ್ ಬಂದಿವೆ. ಆದರೆ, ಶಾಮನೂರು ಶಿವಶಂಕರಪ್ಪನವರು ಹೇಳಿದ್ದು ಸತ್ಯ ಇದೆ. ಸತ್ಯವಾದ ಮಾತು ಹೇಳಿದ್ದಾರೆ, ಅದನ್ನು ನಾನು ಸ್ವಾಗತಿಸುತ್ತೇನೆ. ಲಿಂಗಾಯತ ಅಧಿಕಾರಿಗಳಿಗೆ ಅವಮಾನಕಾರಿಯಾಗಿದೆ. ಯಾವೊಬ್ಬ ಡಿಸಿ ಇಲ್ಲ, ಎಸ್​ಪಿ ಇಲ್ಲ, ಉನ್ನತ ಅಧಿಕಾರದಲ್ಲಿ ಯಾರೂ ಇಲ್ಲ. ಎಲ್ಲರನ್ನೂ ಮೂಲೆಗುಂಪು ಮಾಡಿದ್ದಾರೆ ಎಂದು ಕುಟುಕಿದ್ದಾರೆ.

ಸಿಎಂ ಕಚೇರಿಯಲ್ಲ ಅವರದ್ದೇ ಆಗಿದೆ

ಇದಕ್ಕೆ ಮುಖ್ಯ ಕಾರಣ ಅಂದ್ರೆ ಮೊದಲನೇಯದ್ದು ಹಿಂದೂ ವಿರೋಧಿ, ಎರಡನೇಯದ್ದು ಲಿಂಗಾಯತ ವಿರೋಧಿ. ಅಲ್ಪಸಂಖ್ಯಾತ, ಮುಸ್ಲಿಂ ಅಧಿಕಾರಿಗಳೆಲ್ಲ ಒಳ್ಳೆ ಒಳ್ಳೆ ಪೋಸ್ಟ್​ಗೆ ಬಂದಿದ್ದಾರೆ. ಹಣಕಾಸು ಕಾರ್ಯದರ್ಶಿಯಿಂದ ಹಿಡಿದು, ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕಚೇರಿಯಲ್ಲ ಅವರದ್ದೇ ಆಗಿದೆ. ಕಮಿಷನರ್ ಸೇರಿದಂತೆ ಎಲ್ಲ ಒಳ್ಳೆಯ ಹುದ್ದೆಗಳೆಲ್ಲ ಅವರಿಗೆ ಕೊಟ್ಟಿದ್ದಾರೆ ಎಂದು ಶಾಸಕ ಯತ್ನಾಳ್ ಚಾಟಿ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments