Monday, August 25, 2025
Google search engine
HomeUncategorizedಗುಡ್ ನ್ಯೂಸ್ : ಪಿಎಂ ಕಿಸಾನ್ ಸಹಾಯಧನ ಶೇ.50ರಷ್ಟು ಹೆಚ್ಚಳ?

ಗುಡ್ ನ್ಯೂಸ್ : ಪಿಎಂ ಕಿಸಾನ್ ಸಹಾಯಧನ ಶೇ.50ರಷ್ಟು ಹೆಚ್ಚಳ?

ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ನಗದು ಸಹಾಯಧನವನ್ನು ಹೆಚ್ಚಿಸುವ ಬಗ್ಗೆ ಕೇಂದ್ರವು ಯೋಚಿಸುತ್ತಿದೆ ಎಂದು ತಿಳಿದುಬಂದಿದೆ.

ರೈತರಿಗೆ ವಾರ್ಷಿಕ 6 ಸಾವಿರ ರೂ. ನೆರವು ನೀಡಲಾಗುತ್ತಿದೆ. ಈ ಮೊತ್ತವನ್ನು ರೈತರ ಖಾತೆಗೆ ತಲಾ 2 ಸಾವಿರ ರೂ.ಗಳಂತೆ 3 ಕಂತುಗಳಲ್ಲಿ (ಜಮಾ) ವರ್ಗಾಯಿಸಲಾಗುತ್ತಿದೆ. ಈ ಹಣವನ್ನು ಶೇ.50ರಷ್ಟು ಹೆಚ್ಚಿಸಲು ಕೇಂದ್ರ ಮುಂದಾಗಿದೆ ಎಂದು ವರದಿಯಾಗಿದೆ.

ಸಹಾಯಧನ ಹೆಚ್ಚಳದ ಪ್ರಸ್ತಾವನೆಯು ಪ್ರಧಾನಿ ಕಾರ್ಯಾಲಯದ ಮುಂದೆ ಇವೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇನ್ನೂ, ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯನ್ನು 2018ರ ಫೆಬ್ರವರಿ 1ರಂದು ಜಾರಿಗೆ ತಂದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments