Tuesday, September 16, 2025
HomeUncategorized1800 ಗಿಡ ವೃಕ್ಷಾರೋಪನ‌ ಮಾಡಿದ‌ ಚಿಕ್ಕೋಡಿ ಅರಣ್ಯ ಇಲಾಖೆ

1800 ಗಿಡ ವೃಕ್ಷಾರೋಪನ‌ ಮಾಡಿದ‌ ಚಿಕ್ಕೋಡಿ ಅರಣ್ಯ ಇಲಾಖೆ

ಚಿಕ್ಕೋಡಿ: ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ಅರಣ್ಯಿಲಾಖೆಯಿಂದ ಇಂದು 1800 ಗಿಡ ವೃಕ್ಷಾರೋಪನ ಮಾಡಲಾಗಿದೆ. ಚಿಕ್ಕೋಡಿಯ ಪ್ರಸಿದ್ಧ ಚಿಂಚನಿ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಚಿಕ್ಕೋಡಿ ಅರಣ್ಯ ಇಲಾಖೆ, ಗ್ರಾಮ ಪಂಚಾಯತಿ ಚಿಂಚನಿ ಸಂಯುಕ್ತಾಶ್ರಯದಲ್ಲಿ ಚಿಕ್ಕೋಡಿ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಜರುಗಿದ ಶ್ರೀ ಅಲ್ಲಮಪ್ರಭು ಸ್ವಾಮಿಗಳ ಜನ್ಮದಿನದ ನಿಮಿತ್ಯ ತೋರಣಹಳ್ಳಿ ರಸ್ತೆ ಮಾರ್ಗದ ಶ್ರೀ ಮಠದ ಭೂಮಿಯಲ್ಲಿ 1800 ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗೌರವ ಸತ್ಕಾರ ಸ್ವೀಕರಿಸಿದರು.

ಅರಣ್ಯ ಇಲಾಖೆಯ ಸಹಯೋಗದಲ್ಲಿ ಮಾವು, ಸಿತಾಫಲ, ಪೇರಲದಂತಹ ಹತ್ತು ಹಲವು ೧೮೦೦ ಹಣ್ಣಿನ ಗಿಡ ನೆಡಲಾಗಿದೆ. ಭಾರತದಲ್ಲಿ ಅಗತ್ಯಕ್ಕೆ ತಕ್ಕಷ್ಟು ಇಂದು ಕಾಡು ಉಳಿದಿಲ್ಲ. ವಿದೇಶದಲ್ಲಿ ೨೫ ಪ್ರತಿಶತ ಕಾಡಿಗೆ ಒತ್ತು ನೀಡಲಾಗುತ್ತದೆ.ಸಂಪತ್ಭರಿತ ನಾಡಿಗೆ ಕಾಡು, ಅರಣ್ಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಗಿಡ, ಮರಗಳ ನಾಶ ಆದಷ್ಟು ಮನುಕುಲಕ್ಕೆ ಹಾನಿ, ಆನಿಟ್ಟಿನಲ್ಲಿ ಪರಿಸರ ಉಳಿಸಿ ಬೆಳೆಸಿ ಎಂದು ಅಲ್ಲಮಪ್ರಭು ಶೀಗಳು ಹೇಳಿದರು.‌

ಚಿಕ್ಕೋಡಿಯ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ,ಡಿ.ಎಫ್.ಓ ಸುನಿತಾ ನಿಂಬರಗಿ. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಪ್ರಶಾಂತ ಗೌರಾಣಿ ಸೇರಿದಂತೆ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು.

RELATED ARTICLES
- Advertisment -
Google search engine

Most Popular

Recent Comments