Tuesday, September 16, 2025
HomeUncategorizedಮೇಕೆದಾಟು ಪ್ರದೇಶಕ್ಕೆ ಚಾಮರಾಜನಗರ ಡಿಸಿ ಭೇಟಿ

ಮೇಕೆದಾಟು ಪ್ರದೇಶಕ್ಕೆ ಚಾಮರಾಜನಗರ ಡಿಸಿ ಭೇಟಿ

ಚಾಮರಾಜನಗರ: ಚಾಮರಾಜನಗರ ಹಾಗೂ ರಾಮನಗರದ ನಡುವೆ ಇರುವ ಮೇಕೆದಾಟು ಪ್ರದೇಶಕ್ಕೆ ನಗರದ ಡಿಸಿ ಚಾರುಲತಾ ಸೋಮಲ್ ಭೇಟಿ ಮಾಡಿ ಅಲ್ಲಿನ ಪ್ರದೇಶವನ್ನು ವೀಕ್ಷಿಸಿದ್ದಾರೆ.

ಚಾಮರಾಜನಗರ ಹಾಗೂ ರಾಮನಗರ ಗಡಿಯೇ ಕಾವೇರಿ ನದಿ ಆಗಿದ್ದು ಮೇಕೆದಾಟಿಗೆ ಭೇಟಿ ಕೊಟ್ಟು ಜಿಲ್ಲೆಯ ಗಡಿ, ಸಂಗಮ, ಪಾಲಾರ್, ಹೊಗೆನಕಲ್ ಜಲಪಾತದ ಸ್ಥಳಗಳನ್ನು ಭೂಪಟದಲ್ಲಿ ನೋಡಿ ಮಾಹಿತಿಯನ್ನು ಕಾವೇರಿ ವನ್ಯಜೀವಿಧಾಮದ ಎಸಿಎಫ್ ಅಂಕರಾಜು ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಮೇಕೆದಾಟು ಆಣೆಕಟ್ಟು ಯೋಜನೆ ಸಂಬಂಧವೇನು ಡಿಸಿ ಭೇಟಿ ಕೊಟ್ಟಿರಲಿಲ್ಲ, ಹನೂರು ತಾಲೂಕಿನ ಗಾಣಿಗಮಂಗಲಕ್ಕೆ ಭೇಟಿ ಕೊಟ್ಟ ಬಳಿಕ ಜಿಲ್ಲೆಯ ಗಡಿಭಾಗವನ್ನು ನೋಡಲು ಬಂದರು ಎಂದು ಅಂಕರಾಜು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಗಾಣಿಗ ಮಂಗಲದಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ

RELATED ARTICLES
- Advertisment -
Google search engine

Most Popular

Recent Comments