Saturday, August 30, 2025
HomeUncategorizedಲಿವ್​ ಇನ್​ನಲ್ಲಿದ್ದ ಸಂಗಾತಿಯನ್ನು ಕೊಂದು ಮಂಚದ ಬಾಕ್ಸ್​ನಲ್ಲಿ ಬಚ್ಚಿಟ್ಟ ಖದೀಮ

ಲಿವ್​ ಇನ್​ನಲ್ಲಿದ್ದ ಸಂಗಾತಿಯನ್ನು ಕೊಂದು ಮಂಚದ ಬಾಕ್ಸ್​ನಲ್ಲಿ ಬಚ್ಚಿಟ್ಟ ಖದೀಮ

ಫರಿದಾಬಾದ್​ : ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಆಕೆಯ ಶವವನ್ನು ಮಂಚದ ಬಾಕ್ಸ್​ನಲ್ಲಿ ಬಚ್ಚಿಟ್ಟಿದ್ದು. ಕೊಲೆ ಮಾಡಿದ ವಿಷಯವನ್ನು ತನ್ನ ಅಜ್ಜಿಗೆ ತಿಳಿಸಿದ್ದಾನೆ. ಇದನ್ನು ಆತನ ಅಜ್ಜಿ ಪೊಲೀಸರಿಗೆ ತಿಳಿಸಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸರನ್ ಪೊಲೀಸ್ ಠಾಣೆ ಪ್ರದೇಶದ ಜವಾಹರ್ ಕಾಲೋನಿಯಲ್ಲಿರುವ ಮನೆಯೊಂದರಲ್ಲಿ ಘಟನೆ ನಡೆದಿದ್ದು. ಮೃತ ಮಹಿಳೆ ಸೋನಿಯಾ (45) ಕಳೆದ 10 ವರ್ಷದಿಂದ ಜಿತೇಂದ್ರ ಎಂಬ ವ್ಯಕ್ತಿಯೊಂದಿಗೆ ಲಿವ್​ ಇನ್​ ರಿಲೇಶನ್​​ನಲ್ಲಿದ್ದಳು. ಆದರೆ ಜಿತೇಂದ್ರ ಆಕೆಯನ್ನು ಕೊಲೆ ಮಾಡಿ ಆಕೆಯ ಶವವನ್ನು ಮಂಚದ ಬಾಕ್ಸ್​​ನಲ್ಲಿ ಮುಚ್ಚಿಟ್ಟಿದ್ದಾನೆ.

ಇದನ್ನೂ ಓದಿ:ಭಾರತದಲ್ಲಿ ಪಾಕಿಸ್ತಾನದ 16 ಪ್ರಮುಖ ಯೂಟ್ಯೂಬ್​ ಚಾನೆಲ್​ಗಳು ಬ್ಯಾನ್​

ಕೊಲೆ ಮಾಡಿದ ನಂತರ ತನ್ನ ಅಜ್ಜಿಯ ಬಳಿಗೆ ಹೋಗಿ ಆ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಯುವಕನ ಅಜ್ಜಿ ಕೂಡಲೇ ಸರನ್​ ಪೊಲೀಸರಿಗೆ ಮಾಹಿತಿ ನೀಡಿದ್ದಳು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮನೆಯ ಬೀಗ ಮುರಿದು ಒಳಗೆ ಹೋಗಿ, ಹಾಸಿಗೆಯಿಂದ ಶವವನ್ನು ಹೊರತೆಗೆದರು. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಆರೋಪಿ ಜಿತೇಂದ್ರನ ಸೈಕಲ್​ ಮೇಲೆ ಬಟ್ಟೆ ಮಾರಾಟ ಮಾಡುತ್ತಿದ್ದು. ಕೆಲ ವರ್ಷಗಳ ಹಿಂದೆ ಆತನ ಪತ್ನಿ ಮರಣ ಹೊಂದಿದ್ದಳು. ಈತನಿಗೆ ಇಬ್ಬರು ಮಕ್ಕಳು ಇದ್ದರು. ಪತ್ನಿಯ ಮರಣದ ಜವಾಹರ್ ಕಾಲೋನಿಯ ಬದ್ಖಾಲ್ ಕಾಲೋನಿಯ ನಿವಾಸಿ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸಲು ಪ್ರಾರಂಭಿಸಿದರು.

ಇದನ್ನೂ ಓದಿ :ವಿದ್ಯಾರ್ಥಿ ಮೊಬೈಲ್​ನಲ್ಲಿ ನೂರಾರು ಸರಸ ಸಲ್ಲಾಪದ ವಿಡಿಯೋ: ಹಿಡಿದು ಥಳಿಸಿದ ಹಿಂದೂ ಕಾರ್ಯಕರ್ತರು

ಶನಿವಾರ ಸಂಜೆ, ಜಿತೇಂದ್ರ ಸುಂದರಿ ದೇವಿಯ ಮನೆಗೆ ಹೋಗಿ ಸೋನಿಯಾಳನ್ನು ಕೊಂದಿರುವುದಾಗಿ ಹೇಳಿದ್ದಾನೆ. ಇದಾದ ನಂತರ ಅವರು ಸರನ್ ಪೊಲೀಸ್ ಠಾಣೆಗೆ ಹೋಗಿ ಶರಣಾಗುವುದಾಗಿ ಹೇಳಿದ್ದ. ಆದರೆ, ಆತ ಪೊಲೀಸ್ ಠಾಣೆಗೆ ಬರಲಿಲ್ಲ. ಮೊಮ್ಮಗನ ಮಾತು ಕೇಳಿ ಸುಂದರಿ ದೇವಿಗೆ ನಡುಕ ಶುರುವಾಗಿತ್ತು. ಕೂಡಲೇ ಸರನ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸುಂದರಿ ದೇವಿಯನ್ನು ತಮ್ಮೊಂದಿಗೆ ಕರೆದುಕೊಂಡು ಆರೋಪಿಗಳ ಮನೆಗೆ ಹೋಗಿದ್ದರು.

ಪೊಲೀಸರು ಮನೆ ಮಾಲೀಕ ಸುರೇಂದ್ರ ಅವರನ್ನು ಕರೆಸಿ ಬೀಗ ಮುರಿದರು. ಇದಾದ ನಂತರ, ಒಳಗೆ ಹೋದಾಗ, ಕೋಣೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಪೊಲೀಸರು ಹಾಸಿಗೆ ತೆರೆದಾಗ, ಸೋನಿಯಾಳ ದೇಹವು ತುಂಬಾ ಕೆಟ್ಟ ಸ್ಥಿತಿಯಲ್ಲಿ ಬಿದ್ದಿತ್ತು. ಪೊಲೀಸರು ವಿಧಿವಿಜ್ಞಾನ ತಂಡವನ್ನೂ ಸ್ಥಳಕ್ಕೆ ಕರೆಸಿದ್ದಾರೆ. ಅವರಿಬ್ಬರಿಗೆ ಪರಿಚಯವಾಗಿದ್ಹೇಗೆ, ಕೊಲೆ ಮಾಡಲು ಕಾರಣವೇನು ಎಲ್ಲಾ ವಿಚಾರಗಳ ಕುರಿತು ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments