Wednesday, September 10, 2025
HomeUncategorizedಜಾತಿ ಜನಗಣತಿ ವರದಿಯನ್ನು ಒಪ್ಪಿಕೊಳ್ಳಲ್ಲ: ಕಾಂಗ್ರೆಸ್​ ಶಾಸಕ ರವಿ ಗಣಿಗ

ಜಾತಿ ಜನಗಣತಿ ವರದಿಯನ್ನು ಒಪ್ಪಿಕೊಳ್ಳಲ್ಲ: ಕಾಂಗ್ರೆಸ್​ ಶಾಸಕ ರವಿ ಗಣಿಗ

ಮಂಡ್ಯ : ಜಾತಿ ಜನಗಣತಿ ವರದಿ ಜ್ವಾಲೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯಗಳು ಈ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಏರುತ್ತಿವೆ. ಇದೀಗ ಆಡಳಿತ ಪಕ್ಷದ ಶಾಸಕ ರವಿ ಗಣಿಗ ಹೇಳಿಕೆ ನೀಡಿದ್ದು. ಈ ಜಾತಿಗಣತಿಯನ್ನು ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ರವಿ ಗಣಿಗ “ಜಾತಿ ಜನಗಣತಿ ಸರ್ವೆ ಮಾಡಲು ನನ್ನ ಮನೆಗೆ ಯಾರೂ ಬಂದಿಲ್ಲ. ಈ ಜಾತಿಗಣತಿಯನ್ನು ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲಾ. ಈ ಕುರಿತು ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಒಕ್ಕಲಿಗರು ಒಂದು ಕೋಟಿಗೂ ಅಧಿಕ ಜನರಿದ್ದಾರೆ. ಈ ಜಾತಿಗಣತಿಯನ್ನು ದಯವಿಟ್ಟು ಪರಿಶೀಲನೆ ಮಾಡಬೇಕು.

ಇದನ್ನೂ ಓದಿ :ಜಾತಿ ಜನಗಣತಿ ವರದಿಗೆ ವಿರೋಧ; ಒಕ್ಕಲಿಗರಿಂದ ತೀವ್ರ ಹೋರಾಟದ ಎಚ್ಚರಿಕೆ

ನನ್ನ ಮನೆಯಲ್ಲೆ ಜಾತಿಗಣತಿ ಮಾಡಲು ಯಾರೂ ಬಂದಿಲ್ಲ. ಈ ರೀತಿ ತುಂಬ ಪ್ರಸಂಗಗಳು ಇವೆ. ಸರ್ಕಾರದ ಸಮಸ್ಯೆಯಲ್ಲಾ ಇದು ಸರ್ವೆ ಮಾಡಿದವರ ಸಮಸ್ಯೆ‌. ನನ್ನೆಲ್ಲಾ‌ ಕೆಲಸ ಬಿಟ್ಟು ಡಿಸಿಎಂ ಕರೆದಿರುವ ಸಭೆಗೆ ಹೋಗ್ತಿದ್ದೇನೆ. ಮುಂದೆ ಏನ್ ಮಾಡಬೇಕು ಅಂತ ನಮ್ಮ ಸಮಾಜದ ಮಂತ್ರಿಗಳು, ಶಾಸಕರು, ಮಠಾದೀಶರು ತೀರ್ಮಾನ ಮಾಡಲಿದ್ದಾರೆ. ಒಕ್ಕಲಿಗರು ಎಷ್ಟಿದ್ದಾರೆ ಎಂದು ಮತ್ತೆ ರೀ ಸರ್ವೆ ಮಾಡಲಿ. ಕಾಂತರಾಜು ವರದಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲಾ ಎಂದು ಕಾಂಗ್ರೆಸ್​ ಶಾಸಕರೇ ವರದಿಗೆ ಅಸಮಧಾನ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments