Thursday, September 11, 2025
HomeUncategorized14 ವರ್ಷಗಳಿಂದ ಪಾದರಕ್ಷೆ ಧರಿಸದೆ ಓಡಾಡುತ್ತಿದ್ದ ಅಭಿಮಾನಿ ಕಾಲಿಗೆ ಶೂ ತೊಡಿಸಿದ ಮೋದಿ

14 ವರ್ಷಗಳಿಂದ ಪಾದರಕ್ಷೆ ಧರಿಸದೆ ಓಡಾಡುತ್ತಿದ್ದ ಅಭಿಮಾನಿ ಕಾಲಿಗೆ ಶೂ ತೊಡಿಸಿದ ಮೋದಿ

ನವದೆಹಲಿ: ಹರಿಯಾಣ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಭಿಮಾನಿಯೊಬ್ಬನ ಕಾಲಿಗೆ ಸ್ವತಃ ತಾವೇ ಶೂ ತೊಡಿಸಿದ್ದು. 14 ವರ್ಷಗಳಿಂದ ಪಾದರಕ್ಷೆ ಧರಿಸದೆ ಅಭಿಮಾನಿಯೊಬ್ಬನ ಪ್ರತಿಜ್ಞೆ ಈಡೇರಿಸಿದ್ದಾರೆ.

ವಿಶ್ವದ ಪ್ರಭಾವಿ ನಾಯಕರಲ್ಲಿ ಅಗ್ರಗಣ್ಯರಾಗಿರುವ ಮೋದಿಗೆ ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಪಕ್ಷದ ಹೊರತಾಗಿಯೂ ಅಪಾರ ಅಭಿಮಾನಿ ಬಳಗ, ಬೆಂಬಲಿಗರ ಸಮೂಹವೇ ಇದೆ. ಸೋಶಿಯಲ್ ಮೀಡಿಯಾದಲ್ಲೂ ಅಷ್ಟೇ ದೊಡ್ಡ ಯುವ ಸಮೂಹವೇ ಮೋದಿಯವರನ್ನು ಫಾಲೋ ಮಾಡ್ತಿದೆ. ಆದರೆ ಇಲ್ಲೊಬ್ಬ ಮೋದಿಯವರ ಅಪ್ಪಟ ಅಭಿಮಾನಿಯೊಬ್ಬ 2011ರಲ್ಲಿ ಮೋದಿ ಪ್ರಧಾನಿಯಾಗುವವರೆಗೆ ಚಪ್ಪಲಿ ಧರಿಸಲ್ಲ, ಬರಿಗಾಲಿನಲ್ಲೇ ನಡೆಯುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು. ಅದರಂತೆ ನಮೋ 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು. ಇದೀಗ ಪ್ರಧಾನಿ ಮೋದಿ ಅಭಿಮಾನಿಯ ಶಪಥವನ್ನು ಅಂತ್ಯಗೊಳಿಸಿದ್ದಾರೆ.

ಇದನ್ನೂ ಓದಿ :ಜಾತಿ ಜಾತಿ ಅಂತ ಮಂಗ್ಯಾಗಳ ತರ ಕಿತ್ತಾಡೋದು ಬಿಡಿ, ಹಿಂದುಗಳಾಗಿ ಜಾತಿಗಣತಿ ನೋಡಿ: ಪ್ರತಾಪ್​ ಸಿಂಹ

ಹರಿಯಾಣದ ಕೈತಾಲ್‌ನ ರಾಂಪಾಲ್ ಕಶ್ಯಪ್ ಎಂಬ ವ್ಯಕ್ತಿಯು 2011ರಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗುವವರೆಗೆ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ನಡೆಯುವ ಪ್ರತಿಜ್ಞೆ ಮಾಡಿದ್ದರು. ಅದರಂತೆ ಮೋದಿ ಅವರು 2014ರಲ್ಲಿ ಪ್ರಧಾನಮಂತ್ರಿಯಾದ ನಂತರವೂ ರಾಂಪಾಲ್ ತಮ್ಮ ಪ್ರತಿಜ್ಞೆಯನ್ನು ಮುಂದುವರಿಸಿದ್ದರು.

ಆದರೆ ನೆನ್ನೆ ಪ್ರಧಾನಿ ಮೋದಿ ಹರಿಯಾಣದಲ್ಲಿ ರಾಂಪಾಲ್​ ಕಶ್ಯಪ್​ರನ್ನು ಭೇಟಿಯಾಗಿ. ಸ್ವತಃ ಅವರೇ ಅಭಿಮಾನಿಗೆ ಒಂದು ಜೊತೆ ಶೂ ನೀಡಿದ್ದಾರೆ. ಈ ವೇಳೆ ರಾಂಪಾಲ್​ರನ್ನು ಉದ್ದೇಶಿಸಿ ಮಾತನಾಡಿದ ಮೋದಿ ‘ನಿಮ್ಮ ಸಮರ್ಪಣೆ ಮತ್ತು ಪ್ರೀತಿ ನನಗೆ ಶಕ್ತಿ ನೀಡುತ್ತದೆ ಎಂದು ಹೇಳಿದರು.

ರಾಂಪಾಲ್ ಕಶ್ಯಪ್, ತಮ್ಮ ಪ್ರತಿಜ್ಞೆಯ ಬಗ್ಗೆ ಮಾತನಾಡುತ್ತಾ, “ಮೋದಿಜೀ ಅವರು ದೇಶದ ಒಳಿತಿಗಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿಂದ ನಾನು ಈ ಪ್ರತಿಜ್ಞೆ ಮಾಡಿದ್ದೆ. ಇಂದು ಅವರ ಕೈಯಿಂದ ಶೂ ತೊಡುವುದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣ,” ಎಂದು ಭಾವುಕರಾಗಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments