Saturday, August 23, 2025
Google search engine
HomeUncategorizedನಗ್ನ ‌ಚಿತ್ರಗಳಿವೆ ಎಂದು‌ ಬೆದರಿಕೆ, ವೃದ್ಧ ದಂಪತಿ ಆತ್ಮಹ*ತ್ಯೆಗೆ ಶರಣು !

ನಗ್ನ ‌ಚಿತ್ರಗಳಿವೆ ಎಂದು‌ ಬೆದರಿಕೆ, ವೃದ್ಧ ದಂಪತಿ ಆತ್ಮಹ*ತ್ಯೆಗೆ ಶರಣು !

ಬೆಳಗಾವಿ : ಅಪರಿಚಿತ ಖದೀಮರು ವೃದ್ದ ದಂಪತಿಗಳಿಗೆ ಕರೆ ಮಾಡಿ, ನಿಮ್ಮ ನಗ್ನ ವಿಡಿಯೋಗಳನ್ನು ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದು. ಇದರಿಂದ ಭಯಗೊಂಡ ವೃದ್ದ ದಂಪತಿಗಳಿಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹೌದು.. ಬೆಳಗಾವಿ ಜಿಲ್ಲೆಯ ಖಾನಾಪುರ ‌ತಾಲೂಕಿನ ಬೀಡಿ ಗ್ರಾಮದಲ್ಲಿ ‌ಹೃದಯವಿದ್ರಾವಕ ಘಟನೆ ನಡೆದಿದೆ. ಮೃತರನ್ನು 83 ವರ್ಷದ ಡಿಯಾಗೋ ನಜರತ್​ ಮತ್ತು 79 ವರ್ಷದ ಪಾವಿಯಾ ನಜರತ್​ ಎಂದು ಗುರುತಿಸಲಾಗಿದೆ. ಮೃತ ಡಿಯಾಗೋ ನಜರತ್​ ನಿವೃತ್ತ ರೈಲ್ವೇ ಉದ್ಯೋಗಿಯಾಗಿದ್ದರು. ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದ ದಂಪತಿಗಳಿಗೆ ಕಳೆದೊಂದು ತಿಂಗಳಿಂದ ಸೈಬರ್​ ಖದೀಮರು ಬೆನ್ನು ಬಿದ್ದಿದ್ದರು.

ಇದನ್ನೂ ಓದಿ :ಮಯನ್ಮಾರ್​ನಲ್ಲಿ ಭಾರೀ ಭೂಕಂಪ, 7.2ರಷ್ಟು ತೀವ್ರತೆ ದಾಖಲು..!

ವಿಡಿಯೋ ಕಾಲ್​ ಮಾಡಿ ತಮ್ಮನ್ನು ಪೊಲೀಸರು ಎಂದು ಹೇಳಿಕೊಂಡಿದ್ದ ಖದೀಮರು, ನಿಮ್ಮ ನಗ್ನ ಚಿತ್ರಗಳಿವೆ ಎಂದು ಬೆದರಿಕೆ ಹಾಕಿದ್ದರು. ಜೊತೆಗೆ ಕೇಳಿದಷ್ಟು ಹಣ ಕೊಡದಿದ್ದರೆ ನಿಮ್ಮ ವಿಡಿಯೋಗಳನ್ನು ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಬೆದರಿದ ವೃದ್ದ ದಂಪತಿಗಳು ಖದೀಮರ ಅಕೌಂಟ್​ಗೆ 6 ಲಕ್ಷ ಹಣ ವರ್ಗಾವಣೆ ಮಾಡಿದ್ದರು. ಆದರೆ ಇಷ್ಟಕ್ಕೇ ಸುಮ್ಮನಾಗದ ಖದೀಮರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಇದರಿಂದ ಬೇಸತ್ತಾ ವೃದ್ದ ಮಹಿಳೆ ಪಾವಿಯಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ನೋಡಿದ ಪತಿ ಡಿಯಾಗೋ ಚಾಕುವಿನಿಂದ ಕೈ, ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ವ ಸಹಾಯ ಸಂಘದ ಮಹಿಳೆಯೊಬ್ಬರು ಮೃತದೇಹಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಿಮ್ಸ್​ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments