Monday, September 15, 2025
HomeUncategorizedಊರೊಳಗೆ ಕರಡಿ ಪ್ರತ್ಯಕ್ಷ.. ಆತಂಕದಲ್ಲಿ ಹಳ್ಳಿಜನ !!

ಊರೊಳಗೆ ಕರಡಿ ಪ್ರತ್ಯಕ್ಷ.. ಆತಂಕದಲ್ಲಿ ಹಳ್ಳಿಜನ !!

ಬಳ್ಳಾರಿ : ಬಳ್ಳಾರಿಯ ಕೊಟ್ಟುರು ತಾಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಕರಡಿಯೊಂದು ಕಾಣಿಸಿಕೊಂಡಿದೆ. ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕರಡಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಗ್ರಾಮದಲ್ಲಿನ ಜನ ಕರಡಿ ದಾಳಿಗೆ ಒಳಗಾಗುವ ಭಯಕ್ಕೆ ಬಿದ್ದಿದ್ದಾರೆ.

ಹ್ಯಾಳ್ಯಾ ಗ್ರಾಮದ ದಾನಪ್ಪ ಎನ್ನುವವರ ಜಮೀನಿನಲ್ಲಿ ಕರಡಿ ಕಾಣಿಸಿದೆ. ಮೋತಿಕಲ್ ತಾಂಡಾ, ಲೊಟ್ಟಿನಕೆರೆ ಸೇರಿದಂತೆ ಸುತ್ತಲಿನ ನಾಲ್ಕೈದು ಗ್ರಾಮಗಳಲ್ಲೂ ಸಹ ಕರಡಿ ಸಂಚರಿಸಿದ್ದು ಜನ ಹೊಲಗದ್ದೆ ಕೆಲಸಗಳಿಗೆ ತೆರಳುಲು ಹಿಂದೇಟು ಹಾಕುತ್ತಿದ್ದಾರೆ.

ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಸಹ ಇಲಾಖೆಯ ಯಾವುದೇ ಸಿಬ್ಬಂದಿ ಸಹ ಕ್ರಮ ಕೈಗೊಂಡಿಲ್ಲ. ಕರಡಿಯನ್ನು ಬೋನಿಗೆ ಬೀಳಿಸಿ ದರೋಜಿ ಕರಡಿ ಧಾಮಕ್ಕೆ ಸೇರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಎಲ್ಲೆಂದರಲ್ಲಿ ಓಡಾಡುತ್ತಿರುವ ಕರಡಿ ಗ್ರಾಮಗಳಿಗೆ ನುಗ್ಗಿ ಪುಂಡಾಟ ಮೆರೆಯುವ ಮುನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು. ಇಲ್ಲವೆಂದರೆ ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಅರಣ್ಯ ಅಧಿಕಾರಿಗಳೇ ಹೊಣೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಅರುಣ್ ನವಲಿ ಪವರ್ ಟಿವಿ ಬಳ್ಳಾರಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments