Friday, August 29, 2025
HomeUncategorizedನಾವು ತಪ್ಪು ಮಾಡಿದರೆ ಕಪಾಳಕ್ಕೆ ಹೊಡೆದು ಬುದ್ದಿಹೇಳಿ : ಸಾ.ರಾ ಮಹೇಶ್​

ನಾವು ತಪ್ಪು ಮಾಡಿದರೆ ಕಪಾಳಕ್ಕೆ ಹೊಡೆದು ಬುದ್ದಿಹೇಳಿ : ಸಾ.ರಾ ಮಹೇಶ್​

ಮೈಸೂರು: ಮಾಜಿ ಶಾಸಕ ಸಾ.ರಾ‌.ಮಹೇಶ್ ಸುದ್ದಿಗೋಷ್ಟಿ ನಡೆಸಿದ್ದು ಜೆಡಿಎಸ್​ ವಿರುದ್ದ ಮಾತನಾಡುತ್ತಿರುವ ಶಾಸಕರಿಗೆ ಟಾಂಗ್​ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಏಳು ಬೀಳುಗಳು ಸಹಜ ಎಂದಿರುವ ಸಾ.ರಾ ಮಹೇಶ್​. ಕೆಳಗಿದ್ದವರು ಮೇಲಕ್ಕೆ ಹೋಗಬೇಕು ಅದೇ ರೀತಿ ಮೇಲಿದ್ದವರು ಕೆಳಗೆ ಬರಲೆ ಬೇಕು ಎಂದು ಹೇಳಿದರು.

ಜೆಡಿಎಸ್​ ಕೂಡ ಒಡೆದ ಮನೆಯಂತಾಗಿದ್ದು ಜೆಡಿಎಸ್​ ಶಾಸಕರು ಪಕ್ಷ ತೊರೆದು ಬೇರೆ ಪಕ್ಷಗಳ ಕಡೆ ಮುಖ ಮಾಡುತ್ತಾರೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಸುದ್ದಿಯಾಗುತ್ತಿದೆ. ಇದರ ನಡುವೆ ಸುದ್ದಿ ಗೋಷ್ಟಿ ಮಾಡಿ ಮಾತನಾಡಿದ ಮಾಜಿ ಶಾಸಕ ಸಾ.ರಾ ಮಹೇಶ್​​ ‘ ಚನ್ನಪಟ್ಟಣ ಉಪ ಚುನಾವಣೆಗೆ ನಾವು ಸಿದ್ದತೆ ಮಾಡಿಕೊಂಡಿರಲಿಲ್ಲ.ಆರಂಭದಲ್ಲಿ ನಿಖಿಲ್ ಸ್ಪರ್ಧಿಸಲು ಮುಂದಾಗಿರಲಿಲ್ಲ‌. ಸ್ಥಳೀಯವಾಗಿಯೇ ಏಳೆಂಟು ಮಂದಿ ಆಕಾಂಕ್ಷಿಗಳಿದ್ದರು. ಆದರೆ ಕೊನೆಗೆ ಅವರೆ ನಿಖಿಲ್​​ ನಿಲ್ಲುವಂತೆ ಒತ್ತಾಯಿಸಿದರು. ಹಾಗಾಗಿ ನಿಖಿಲ್​ ಸ್ಪರ್ಧೆ ಮಾಡಿದರು ಎಂದು ಹೇಳಿದರು.

ಆದರೆ ನಿಖಿಲ್​ ಸೋತಿದ್ದರು ಕೂಡ ಯುವ ನಾಯಕನಾಗಿ ಹೊರಹೊಮ್ಮಿದ್ದಾರೆ. ಅನೇಕರು ಚುನಾವಣೆ ಸೋತ ಮೇಲೆ ಜೆಡಿಎಸ್​ ನಿರ್ನಾಮವಾಗುತ್ತದೆ ಎಂದು ಕಾಂಗ್ರೆಸ್​ ನಾಯಕರು ಭ್ರಮೆಯಲ್ಲಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್​ನವರು ಅವರ ಅಕ್ರಮಗಳನ್ನು ಮುಚ್ಚಿಕೊಂಡಿದ್ದಾರೆ. ದೇವೇಗೌಡರ ಜೊತೆಗೆ ಪ್ರಾಮಾಣಿಕ ಕಾರ್ಯಕರ್ತರು ಇರುವವರೆಗೂ ಜೆಡಿಎಸ್ ಪಕ್ಷವನ್ನು ಯಾರು ಕೂಡ ಕೊಂಡುಕೊಳ್ಳಲು ಸಾಧ್ಯವಿಲ್ಲ.ನಾವು ಹಿರಿಯರನ್ನು ನಾಯಕರು ಎಂದು ಒಪ್ಪಿಕೊಂಡಿದ್ದೇವೆ. ನಾನು ತಪ್ಪು ಮಾಡಿದರೆ ಕಪಾಲಕ್ಕೆ ಒಡೆದು ಬುದ್ದಿಹೇಳಿ.
ಆದರೆ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಹೇಳಬೇಡಿ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸರಿಮಾಡಿ.
ಈ ಮಾತನ್ನು ನಮ್ಮ ಪಕ್ಷದ ಹಿರಿಯ ನಾಯಕರಾದ ಜಿ ಟಿ ದೇವೇಗೌಡರಿಗೇ ಹೇಳುತ್ತಿದ್ದೇನೆ ಎಂದು ಜೆಡಿಎಸ್​ ಕಾರ್ಯಧ್ಯಕ್ಷ ಸಾರಾ ಮಹೇಶ್​ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ನಮಗೆ ಹೊಡೆಯುವ ಅಧಿಕಾರ ಜಿಟಿ. ದೇವೇಗೌಡರಿಗೆ ಇದೆ. ಅವರು ನಮ್ಮ ಪ್ರಶ್ನಾತೀತ ನಾಯಕರು ಎಂದು ನಾವು ಒಪ್ಪಿಕೊಂಡಿದ್ದೇವೆ ಹಾಗೂ ಇಂದಿಗೂ ಅದೇ ಭಾವನೆಯಲ್ಲಿದ್ದೇವೆ. ಆದರೆ ಅವರು ನಮ್ಮ ಮೇಲೆ ಅವಹೇಳನ ಮಾಡುತ್ತಿರುವುದು ಸರಿಯಲ್ಲ. ಎಂದು ಜಿಟಿ. ದೇವೇಗೌಡರ ಇತ್ತೀಚಿನ ಹೇಳಿಕೆಗೆ ಕುಟುಕಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments