Monday, August 25, 2025
Google search engine
HomeUncategorizedಭ್ರಷ್ಟಚಾರದಲ್ಲಿ ವರ್ಲ್ಡ್​ಕಪ್​ ಇಟ್ಟರೆ ಕಾಂಗ್ರೆಸ್​ ಸರ್ಕಾರ ಗೆಲ್ಲುತ್ತೆ : ಸಿ.ಟಿ. ರವಿ

ಭ್ರಷ್ಟಚಾರದಲ್ಲಿ ವರ್ಲ್ಡ್​ಕಪ್​ ಇಟ್ಟರೆ ಕಾಂಗ್ರೆಸ್​ ಸರ್ಕಾರ ಗೆಲ್ಲುತ್ತೆ : ಸಿ.ಟಿ. ರವಿ

ಬಳ್ಳಾರಿ : ಮಾಜಿ ಸಚಿವ ಸಿ.ಟಿ.ರವಿ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ರಾಜ್ಯದಲ್ಲಿ ನವೆಂಬರ್ 13 ಕ್ಕೆ ಉಪಚುನಾವಣೆ ನಡೆಯಲಿದ್ದು. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ 

ರಾಜ್ಯ ಕಾಂಗ್ರೇಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಸಿ.ಟಿ.ರವಿ ಕಾಂಗ್ರೆಸ್​ ಸರ್ಕಾರ ಭ್ರಷ್ಟಚಾರದಲ್ಲಿ ತೊಡಗಿದೆ. ಒಂದು ವೇಳೆ ಭ್ರಷ್ಟಚಾರದಲ್ಲಿ ವರ್ಲ್ಡ್ ಕಪ್ ಇಟ್ರೇ ಕಾಂಗ್ರೇಸ್ ಗೆಲ್ಲುತ್ತೆ.ಈ ಬಾರಿಯ ಲೋಕಸಭಾ
ಚುನಾವಣೆಗೆ ವಾಲ್ಮೀಕಿ ನಿಗಮದ ದುಡ್ಡು ಬಳಕೆ ಆಗಿದೆ, ವಾಲ್ಮಿಕಿ ನಿಗಮದ ಹಣದಲ್ಲಿ ಸಚಿವರು ಲ್ಯಾಂಬೋರ್ಗಿನಿ ಕಾರ್ ಖರೀದಿ ಮಾಡಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸಿ.ಟಿ.ರವಿ ಎಸ್​ಇಪಿ ಮತ್ತು ಟಿಎಸ್​ಪಿ ಹಣ 20 ಸಾವಿರದ ಮೂನ್ನೂರು ಕೋಟಿ ದುರ್ಬಳಕೆ ಮಾಡಿಕೊಂಡಿದ್ದಾರೆ.ಅಬಕಾರಿ ಶುಲ್ಕ , ನೋಂದಾಣಿ ಶುಲ್ಕ, ಪೇಟ್ರೋಲಿಯಂ ಪ್ರಾಡಕ್ಟ್​ಳ ಮೇಲೆ ಎರಡು ಬಾರಿ ಸೆಸ್​​ ಏರಿಕೆ ಮಾಡಿದ್ದಾರೆ. ಕೇವಲ ಇಲ್ಲಿಗೆ ನಿಲ್ಲಿಸದೆ ಹಾಲಿಂದ ಅಲ್ಕೋಹಾಲ್ ವರೆಗೂ ಬೆಲೆ ಏರಿಕೆ ಮಾಡಿದೆ ಎಂದು ಸರ್ಕಾರದ ನಡೆಯನ್ನು ಕಟುವಾಗಿ ವಿರೋಧಿಸಿದರು.

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ  ರೈತರ ಆತ್ಮಹತ್ಯೆ ವಿಚಾರದಲ್ಲಿ ಕರ್ನಾಟಕದಲ್ಲಿ ದಾಖಲೆ ಮಾಡಿದೆ. ಕೇವಲ 18 ತಿಂಗಳಲ್ಲಿ ಸುಮಾರು ಎರಡು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆ್ಗೆ
ಮುಖ್ಯಮಂತ್ರಿಗಳ ಮೇಲೆ ಮೂಡ ಆರೋಪ ಬಂದಾಗಿನಿಂದಲೂ ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ
ಇದರ ಲಾಭವನ್ನು ಕಾಂಗ್ರೇಸ್ ಇತರೆ ಜನಪ್ರತಿನಿಧಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ನಿಸ್ಸಹಾಯಕರಾಗಿದ್ದಾರೆ. ಜನರ ಹಿತ ಮರೆತ ಕಾಂಗ್ರೇಸ್ ಪಕ್ಷಕ್ಕೆ ಶಿಕ್ಷೆಯಾಗಬೇಕು ಎಂದು ಹೇಳಿದರು.

ಸರ್ಕಾರ ಗ್ಯಾರಂಟಿ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ ಆದರೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಸರಿಯಾಗಿ ಬರುತ್ತಿಲ್ಲ, ಹತ್ತು ಕೆಜಿ ಅಕ್ಕಿ ನೀಡುತ್ತಿಲ್ಲ ಸರಿಯಾಗಿ ಹಣವನ್ನು ನೀಡುತ್ತಿಲ್ಲ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುತ್ತಿಲ್ಲ, ಶಕ್ತಿಯೋಜನೆಯಿಂದ ಸಾರಿಗೆ ವ್ಯವಸ್ಥೆ ಹಾಳಾಗಿದೆ ದೂರದೃಷ್ಠಿಯ ಯಾವೊಂದು ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲ. ಜನರಹಿತ ಮರೆತ ಸರ್ಕಾರದ ವಿರುದ್ದ ಜನರಿಗೆ ಅರಿವು ಮೂಡಿಸುವ ಕಾರ್ಯವಾಗುತ್ತೆ, ದಾರಿ ತಪ್ಪಿರುವ ಕಾಂಗ್ರೇಸ್ ಗೆ ಪಾಠ ಕಲಿಸುವ ಕಾರ್ಯವನ್ನು ಜನರು ಮಾಡಿದ್ದಾರೆ  ಎಂದು ಹೇಳಿದರು.

ಲ್ಯಾಂಡ್ ಜಿಹಾದ್ ಗೆ ಬಲಪಡಿಸಲು ವಕ್ಫ್​ ಬೋರ್ಡ್ ಕಾಯ್ದೆ ಜಾರಿಗೆ ತಂದಿದ್ದಾರೆ.  ಇದರಿಂದ ಆಸ್ತಿ ಕಳೆದುಕೊಂಡವನು ನ್ಯಾಯಲಯಕ್ಕೆ ಹೋಗುವಹಾಗಿಲ್ಲ, ವಕ್ಫ್​ ಟ್ರಬ್ಯನಲ್​ಗೆ  ಹೋಗಬೇಕು ಇದು ಯಾ ರೀತಿ ಇದೆ ಎಂದರೆ  ತೋಳನ ಹತ್ತಿರ ಹೋಗಿ ಕುರಿಮರಿ ನ್ಯಾಯ ಕೇಳಿದಂತೆಯಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ರಾಜಕೀಯ ಕೊನೆಗಾಲದಲ್ಲಿಯಾದ್ರು ಸತ್ಯದ ಪರ ಧ್ವನಿಯಾಗಿಲ್ಲ, ಮಾಡಿರುವ ಪಾಪವಾದ್ರು ತೊಳೆದುಕೊಳ್ಳವ ಕಾರ್ಯ ಮಾಡಲಿ ಒಂದು ಸಾರಿ ವಕ್ಫ್ ಪ್ರಾಪರ್ಟಿ ಎಂದು ಘೋಸಿಸಿದರೇ ಅದು ಅಲ್ಲಾನ ಪ್ರಾಪರ್ಟಿ ಎಂದು ಸಚಿವ ಜಮೀರ್ ಅಹಮ್ಮದ್ ರಂದು ಉದ್ದಟತನದಿಂದ ಹೇಳ್ತಾರೆ ಕಾಂಗ್ರೇಸ್ ಒಲೈಕೆ ರಾಜಕಾರಣ ಬಿಟ್ರೇ ಮತ್ತೇನು ಮಾಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments