Tuesday, August 26, 2025
Google search engine
HomeUncategorizedಶೆಟ್ಟರ್ ಕೇಸ್ ಬೇರೆ, ಸವದಿ ಕೇಸ್ ಬೇರೆ : ಸತೀಶ್ ಜಾರಕಿಹೊಳಿ

ಶೆಟ್ಟರ್ ಕೇಸ್ ಬೇರೆ, ಸವದಿ ಕೇಸ್ ಬೇರೆ : ಸತೀಶ್ ಜಾರಕಿಹೊಳಿ

ಬೆಳಗಾವಿ : ಜಗದೀಶ್ ಶೆಟ್ಟರ್ ಕೇಸ್ ಬೇರೆ, ಲಕ್ಷ್ಮಣ ಸವದಿ ಕೇಸ್ ಬೇರೆ. ಒಂದೊಂದು ಕೇಸ್ ಹೋಲಿಸಲು ಆಗುವುದಿಲ್ಲ ಬೇರೆ ಬೇರೆ ಇರುತ್ತೆ. ಡಾಕ್ಟರ್ ಬಳಿ ಒಬ್ಬೊಬ್ಬರದ್ದು ಕೇಸ್ ಪೇಪರ್ ಬೇರೆ ಬೇರೆ ಇರ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದರು.

ಸವದಿ ಬಿಜೆಪಿಗೆ ಸೇರ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಅವರು ಬೆಳಗಾವಿಯಲ್ಲಿ ಮಾತನಾಡಿದರು. ಯಾರೂ ಪಕ್ಷ ಬಿಡುವುದಿಲ್ಲ, ಅವರು ಶಾಸಕರು ಇದ್ದಾರೆ. ಎಲ್ಲಿಯೂ ಹೋಗುವುದಿಲ್ಲ, ನಮ್ಮ ಪಕ್ಷದ ಪರವಾಗಿ ಸವದಿ ಇದ್ದಾರೆ ಎಂದು ತಿಳಿಸಿದರು.

ಲಕ್ಷ್ಮಣ ಸವದಿ ಅವರಿಗೆ ಮಂತ್ರಿ ಸ್ಥಾನದ ಆಫರ್ ವಿಚಾರವಾಗಿ ಮಾತನಾಡಿ, ಇನ್ನು ಟೈಮ್ ಇದೆ, ಒಳ್ಳೆಯವರಿಗೆ ಅವಕಾಶ ಇದೆ. ಅವರಿಗೆ ಸಾಮಾರ್ಥ್ಯ ಇದೆ, ಒಳ್ಳೆಯ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಸಿಗುವಂತ ಅವಕಾಶಗಳು ಮುಂದಿನ ಕಾಲದಲ್ಲಿ ಇವೆ. ಇಲ್ಲಾ ಅಂತ ಹೇಳಲು ಆಗುವುದಿಲ್ಲ ಎಂದು ಹೇಳಿದರು.

2 ಕ್ಷೇತ್ರ ಗೆಲ್ಲಲು ಪ್ರಯತ್ನ ಮಾಡುತ್ತೇವೆ

ಬೆಳಗಾವಿ, ಚಿಕ್ಕೋಡಿ ಲೋಕಸಭೆಗೆ ಹೆಸರು ಕೊಟ್ಟಿದ್ದೇವೆ. ಅಂತಿಮವಾಗಿ ನಮ್ಮ ಹೈಕಮಾಂಡ್ ತೀರ್ಮಾನ ಮಾಡಬೇಕು. ಗಿರೀಶ್ ಸೊನ್ವಾಲ್ಕರ್ ಅಥವಾ ಮೃಣಾಲ್ ಇಬ್ಬರಲ್ಲಿ ಹೈಕಮಾಂಡ್ ತೀರ್ಮಾನ ಮಾಡಬೇಕು. ಇನ್ನೊಂದು ಸುತ್ತಿನ ಚರ್ಚೆ ಸಿಎಂ ಜೊತೆಗೆ ಆಗಬೇಕು ನೋಡೋಣ. ಪ್ರಕಾಶ್ ಹುಕ್ಕೇರಿ ನಿಲ್ಲುವುದಿಲ್ಲ ಅಂದಾಗ ನಿಲ್ತಾರೆ. ನಿಲ್ತೇವಿ ಅಂದಾಗ ನಿಲ್ಲಲ್ಲ, ಆ ಡಿಕೋಡ್ ನಮಗೆ ಗೊತ್ತಿದೆ. ಅವರು ಏನೂ ಹೇಳ್ತಾರೆ ಅದರ ವಿರುದ್ಧ ಮಾಡ್ತಾರೆ. ಎರಡು ಕ್ಷೇತ್ರ ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಧ್ವಜಗಳ ಹಾವಳಿವೂ ಬಂದ್ ಆಗಬೇಕು

ರಾಜ್ಯದಲ್ಲಿ ಧ್ವಜ ದಂಗಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲವೂ ಬಂದ್ ಆಗಬೇಕು, ಧ್ವಜಗಳ ಹಾವಳಿವೂ ಬಂದ್ ಆಗಬೇಕು. ಅಭಿವೃದ್ಧಿ ಆಗಬೇಕು, ಸಮಾನತೆ ಬರಬೇಕು ಎಂದು ಸತೀಶ್ ಜಾರಕಿಹೊಳಿ‌ ಅಭಿಪ್ರಾಯಪಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments