ಬೆಂಗಳೂರು : ಗುಜರಾತ್ ಟೈಟಾನ್ಸ್ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಭಾರತ ತಂಡದ ಯಂಗ್ ಗನ್ ಶುಭ್ಮನ್ ಗಿಲ್ ಅವರನ್ನು ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಟ್ರೇಡ್ ಮಾಡಿದ ನಂತರ ಗಿಲ್ಗೆ ನಾಯಕತ್ವ ನೀಡಲಾಗಿದೆ. ಅಲ್ಲದೇ, ಕ್ಯಾಪ್ಸನ್ ಕಾಲಿಂಗ್ ಎಂಬ ಶೀರ್ಷಿಕೆಯಲ್ಲಿ ತಂಡ್ ಆಡಳಿತ ಮಂಡಳಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.
ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯ
ಗುಜರಾತ್ ಟೈಟಾನ್ಸ್ ನಾಯಕತ್ವ ವಹಿಸಿಕೊಂಡಿರುವ ಬಗ್ಗೆ ಶುಭ್ಮನ್ ಗಿಲ್ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಅಧ್ಬುತ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ನನ್ನ ಮೇಲೆ ನಂಬಿಕೆ ಇಟ್ಟು ನಾಯಕತ್ವದ ಜವಾಬ್ದಾರಿ ನೀಡಿದ ಆಡಳಿತ ಮಂಡಳಿಗೆ ಧನ್ಯವಾದಗಳು. ತಂಡವನ್ನು ಮುನ್ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಶುಭ್ಮನ್ ಗಿಲ್ ಟ್ವಿಟ್ವರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
? CAPTAIN GILL reporting!
??????? ??????? ???? is ready to lead the Titans in the upcoming season with grit and exuberance ?
Wishing you only the best for this new innings! ?#AavaDe pic.twitter.com/PrYlgNBtNU
— Gujarat Titans (@gujarat_titans) November 27, 2023