Friday, August 29, 2025
HomeUncategorized'ಕಿಂಗ್' ಕೊಹ್ಲಿ 'ವಿರಾಟ' ರೂಪಕ್ಕೆ ಸಚಿನ್ ದಾಖಲೆ ಉಡೀಸ್

‘ಕಿಂಗ್’ ಕೊಹ್ಲಿ ‘ವಿರಾಟ’ ರೂಪಕ್ಕೆ ಸಚಿನ್ ದಾಖಲೆ ಉಡೀಸ್

ಬೆಂಗಳೂರು : ಕಿಂಗ್ ಕೊಹ್ಲಿ..! ಈತ ಹುಟ್ಟಿರೋದೇ ದಾಖಲೆ ಬರೆಯಲೋ? ಅಥವಾ ದಾಖಲೆ ಇರುವುದೇ ಈತನಿಗಾಗಿಯೋ ಗೊತ್ತಿಲ್ಲ. ಕೊಹ್ಲಿ ‘ವಿರಾಟ’ ರೂಪಕ್ಕೆ ಉಡೀಸ್ ಆಗದ ದಾಖಲೆಗಳಿಲ್ಲ. ಪ್ರತಿ ಪಂದ್ಯದಲ್ಲೂ ಹೊಸ ಮೈಲುಗಲ್ಲು ಸೃಷ್ಟಿಸುತ್ತಿದ್ದಾರೆ ಕಿಂಗ್ ಕೊಹ್ಲಿ.

ದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ವಿಶ್ವಕಪ್ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕೊಹ್ಲಿ ಅಬ್ಬರಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಪೀಸ್ ಪೀಸ್ ಆಯ್ತು.

ವಿರಾಟ್ ಕೊಹ್ಲಿ ವಿಶ್ವಕಪ್​ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಶ್ರೇಯಕ್ಕೆ ಪಾತ್ರರಾದರು. ಕೊಹ್ಲಿ ಏಕದಿನ ಹಾಗೂ ಟಿ-20 ಮಾದರಿಯಲ್ಲಿ ಒಟ್ಟು 2,279 ರನ್​ ಗಳಿಸಿದರು. ಈವರೆಗಿನ ಅಗ್ರ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ (2,278) ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

68ನೇ ಅರ್ಧಶತಕ

ಅಫ್ಘಾನ್ ವಿರುದ್ಧ ವಿರಾಟ್​ ಕೊಹ್ಲಿ 56 ಎಸೆತಗಳಲ್ಲಿ ಅಜೇಯ 55* ರನ್ ಗಳಿಸಿದರು. ಕೊಹ್ಲಿ ಬ್ಯಾಟ್​ನಿಂದ 6 ಬೊಂಬಾಟ್ ಬೌಂಡರಿ ಹರಿದು ಬಂದವು. ಇದು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಕೊಹ್ಲಿ ಅವರ 68ನೇ ಅರ್ಧಶತಕವಾಗಿದೆ. ಇನ್ನೂ ಆಸಿಸ್​ ವಿರುದ್ಧದ ಮೊದಲ ಪಂದ್ಯದಲ್ಲಿಯೂ ಕೊಹ್ಲಿ (85) ಅರ್ಧಶತಕ ಸಿಡಿಸಿದ್ದರು.

ದಾಖಲೆ ಬರೆದ ರೋಹಿತ್

ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಸಾಲಿನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೆ ಏರಿದ್ದಾರೆ. ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಒಟ್ಟಾರೆ 7 ಶತಕ ಗಳಿಸಿದ ಹಿಟ್​ ಮ್ಯಾನ್ ಸಚಿನ್ ತೆಂಡೂಲ್ಕರ್ (6) ಅವರ ದಾಖಲೆಯನ್ನು ಮುರಿದಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಕೇವಲ 18 ಇನ್ನಿಂಗ್ಸ್​ಗಳಲ್ಲೇ ವೇಗವಾಗಿ 1,000 ರನ್​ ಗಳಿಸಿದ್ದಲ್ಲದೆ, ಅತಿ ಹೆಚ್ಚು ಸಿಕ್ಸರ್​ಗಳಲ್ಲೂ (554 ಸಿಕ್ಸರ್) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments