Monday, August 25, 2025
Google search engine
HomeUncategorizedಮಾರ್ಕೆಟ್​ಗೆ ಎಂಟ್ರಿಕೊಟ್ಟ ವಿಘ್ನನಿವಾರಕ ; ಈ ಬಾರಿ ಬಾಡಿಗೆ ಸಿಗಲಿರುವ ಗಣೇಶ

ಮಾರ್ಕೆಟ್​ಗೆ ಎಂಟ್ರಿಕೊಟ್ಟ ವಿಘ್ನನಿವಾರಕ ; ಈ ಬಾರಿ ಬಾಡಿಗೆ ಸಿಗಲಿರುವ ಗಣೇಶ

ಬೆಂಗಳೂರು : ಹಬ್ಬ ಒಂದು ತಿಂಗಳು ಇರುವಾಗಲೇ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ವಿಘ್ನನಿವಾರಕ ಗಣಪ. 

ಗೌರಿ-ಗಣೇಶ ಹಬ್ಬ ಅಂದ್ರೆ ಸಾಕು ಕಿರಿಯರಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಸಂಭ್ರಮ. ಮೋದಕ ಪ್ರಿಯ ಗಣಪನನ್ನ ಕೂರಿಸೋಕೆ ಪ್ರತಿ ಏರಿಯಾಗಳಲ್ಲಿ ಈಗಾಗ್ಲೇ ಸಿದ್ಧತೆಗಳು ಆರಂಭವಾಗಿದ್ದು, ವಿಶೇಷವಾಗಿ ಈ ಭಾರಿ ಗಣೇಶನ ಮೂರ್ತಿಗಳು ಬಾಡಿಗೆ ರೂಪದಲ್ಲಿ ದೊರೆಯುತ್ತವೆ. ಈ ಹಿಂದೆ ಪಿ.ಓ.ಪಿ ಗಣೇಶಗಳಿಗೆ ಬ್ರೇಕ್ ಹಾಕಿದ್ದ ಸರ್ಕಾರ. ಆದರೆ ಈ ಭಾರಿ ಪಿ ಓ ಪಿ ಗಣೇಶಗಳನ್ನು ಬಾಡಿಗೆ ಕೊಡಲು ಪ್ಲಾನ್ ಮಾಡಿಕೊಂಡಿರುವ ಮಾಲೀಕರು.

ಹಬ್ಬ ಇನ್ನು ಒಂದು ತಿಂಗಳು ಇರುವಾಗಲೇ ಮಾರುಕಟ್ಟೆಗಳಲ್ಲಿ 8 ರಿಂದ 10 ಅಡಿ ಎತ್ತರದ ಗಣಪನ ಮೂರ್ತಿಗಳು ಸಜ್ಜಾಗಿ ನಿಂತಿವೆ. ಅಷ್ಟೇ ಅಲ್ಲ ಗಣಪನ ಮೂರ್ತಿಗಳು 2 ಸಾವಿರದಿಂದ 20 ಸಾವಿರ ರೂಗಳ ವರೆಗೆ ಸಿಗುತ್ತಿರುವ ವಿಘ್ನವಿನಾಶಕ.

ಇದನ್ನು ಓದಿ : ಪ್ರಕಾಶ್ ರೈ ಒಬ್ಬ ಮೂರ್ಖ : ಕೌರವ ಪಾಟೀಲ್

ಪಿಓಪಿ ಗಣೇಶಗಳಿಗೆ ದಿನಕ್ಕೆ 2 ಸಾವಿರದಿಂದ 10 ಸಾವಿರ ರೂಪಾಯಿ ವರೆಗೆ ಬಾಡಿಗೆ ಇರುವುದರಿಂದ, ಬಾಡಿಗೆ ಪಡೆಯುವವರು ಮೂರ್ತಿಯ ಅಸಲು ಮೊತ್ತವನ್ನು ಠೇವಣಿ ಕೊಡಬೇಕು. ಅಷ್ಟೇ ಅಲ್ಲದೆ ಗಣಪನನ್ನು ಎಷ್ಟು ದಿನಕ್ಕೆ ಬೇಕೋ ಅಷ್ಟು ದಿನಗಳ ಬಾಡಿಗೆ ಮೊತ್ತವನ್ನು ಮುಂಗಡವಾಗಿ ನೀಡಬೇಕು. ಬಳಿಕ ಸಂಚಾರ ವೆಚ್ಚವನ್ನು ತೆಗೆದುಕೊಂಡು ಹೋಗುವ ಗ್ರಾಹಕರೇ ನೀಡಬೇಕು.

ಬಾಡಿಗೆ ಪಡೆದ ಗಣೇಶನ ವಿಸರ್ಜನೆ ಹೇಗೆ?

ಪಿ ಓ ಪಿ ಗಣೇಶನ ಜೊತೆ ಒಂದು ಜೊತೆ ಮಣ್ಣಿನ ಮೂರ್ತಿಯನ್ನು ಕೂಡ ಕೊಡಲಿರುವ ಮಾಲೀಕರು. ಈ ಹಿನ್ನೆಲೆ ಮಣ್ಣಿನ ಗಣಪತಿಗಳನ್ನು ವಿಸರ್ಜನೆ ಮಾಡಿ, ಬಳಿಕ ಪಿಓಪಿ ಗಣೇಶಗಳನ್ನು ಮಾಲೀಕರಿಗೆ ವಾಪಸ್ ಮಾಡಬೇಕು. ಈ ರೀತಿಯ ವಿಶೇಷ ರೀತಿಗಳಲ್ಲಿ ಹಾಗೂ ವಿಭಿನ್ನ ರೀತಿಗಳಲ್ಲಿ ಪ್ಲಾನ್ ಮಾಡಿಕೊಂಡಿರುವ ಮಾಲೀಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments