ಅದಿತಿ ಪ್ರಭುದೇವ್… ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ಸ್ಟಾರ್ ನಟಿ. ಬಹು ನಿರೀಕ್ಷಿತ ಗಾಳಿಪಟ-2ಗೆ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ. ಅವರೀಗ ಗಾಳಿಪಟ -2ನಿಂದ ಹೊರಬಂದಿದ್ದಾರೆ.
ಈ ಸಿನಿಮಾ ನಾಯಕಿಯರಲ್ಲಿ ಬದಲಾವಣೆಯಾಗಿದೆ. ಅದಿತಿ ಪ್ರಭುದೇವ್ ಹಾಗೂ ನಟಿ ಸೋನಲ್ ಮಂಡೋರಿಯಾ ಇಬ್ಬರೂ ಗಾಳಿಪಟ-2ನಲ್ಲಿ ನಟಿಸುತ್ತಿಲ್ಲ. ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಮತ್ತು ಪವನ್ ಕುಮಾರ್ ನಟಿಸುತ್ತಿರುವ ಗಾಳಿಪಟ-2ಗೆ ಅದಿತಿ ಪ್ರಭುದೇವ್, ಸೋನಲ್ ಮಂಡೋರಿಯೋ, ಅದಿತಿ ಪ್ರಭುದೇವ್, ಶರ್ಮಿಳಾ ಮಂಡ್ರೆ ನಾಯಕಿಯರೆನ್ನಲಾಗಿತ್ತು. ಸದ್ಯ ಅದಿತಿ ಮತ್ತು ಸೋನಲ್ ಹೊರಬಂದಿದ್ದಾರೆ. ಶರ್ಮಿಳಾ ಅಭಿನಯಿಸಲಿದ್ದಾರೆ. ಮಲೆಯಾಳಂ ನಟಿ ಸಂಯುಕ್ತ ಮೆನನ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ‘ಪಡ್ಡೆ ಹುಲಿ’, ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಖ್ಯಾತಿಯ ನಟಿ ನಿಶ್ಚಿತಾ ನಾಯ್ಡು ಪ್ರಮುಖಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪ್ರೊಡ್ಯೂಸರ್ ಕೂಡ ಬದಲಾಗಿದ್ದಾರೆ. ಮಹೇಶ್ ದಾನವನ್ನವರ್ ಬದಲಿಗೆ ರಮೇಶ್ ರೆಡ್ಡಿ ಬಂಡವಾಳ ಹಾಕುತ್ತಿದ್ದಾರೆ. ಹಾಗೆಯೇ ಎಲ್ಲರಿಗೂ ಗೊತ್ತೇ ಇರುವಂತೆ ಯೋಗರಾಜ್ ಭಟ್ಟರು ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಗಾಳಿಪಟ-2 ಟೀಮಿಂದ ಹೊರಬಂದ ಸ್ಟಾರ್ ನಟಿ..!
RELATED ARTICLES
Recent Comments
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


