Friday, August 29, 2025
HomeUncategorizedಅನೈತಿಕ ಸಂಬಂಧ: ಪತ್ನಿ, ಪ್ರಿಯಕರನನ್ನು ಕೊಚ್ಚಿ ಕೊಲೆ ಮಾಡಿದ ಗಂಡ

ಅನೈತಿಕ ಸಂಬಂಧ: ಪತ್ನಿ, ಪ್ರಿಯಕರನನ್ನು ಕೊಚ್ಚಿ ಕೊಲೆ ಮಾಡಿದ ಗಂಡ

ಕಲಬುರಗಿ : ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಗಳನ್ನು 22 ವರ್ಷದ ಸೃಷ್ಟಿ ಮತ್ತು 23 ವರ್ಷದ ಖಾಜಪ್ಪ ಎಂದು ಗುರುತಿಸಲಾಗಿದೆ.

ಏನಿದು ಘಟನೆ..!

ಕೊಲೆಯಾದ ಸೃಷ್ಟಿ ಕಳೆದ ಮೂರು ವರ್ಷಗಳ ಹಿಂದೆ ಮಾದನಹಿಪ್ಪರಗಾ ಗ್ರಾಮದ ಶ್ರೀಮಂತ ಜೊತೆ ಸಪ್ತಪದಿ ತುಳಿದಿದ್ದಳು. ಕೃಷಿ ಕೂಲಿ ಕೆಲಸ ಮಾಡ್ತಿದ್ದ ಗಂಡ ಶ್ರೀಮಂತ ದಿನದಲ್ಲಿ ಬಹುತೇಕ ಸಮಯ ಬೇರೆಬೇರೆಯವರ ಜಮೀನಿನಲ್ಲಿ ಕಳೆಯುತ್ತಿದ್ದನು. ಇತ್ತ ಪತ್ನಿ ಸೃಷ್ಟಿ ಗ್ರಾಮದ ಲೈಬ್ರರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದ ಖಾಜಪ್ಪ ಎಂಬಾತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಅದರಂತೆ ನಿನ್ನೆ ಸೃಷ್ಟಿ ಗಂಡ ಶ್ರೀಮಂತ ಕೆಲಸದ ಮೇಲೆ ಬೇರೆ ಊರಿಗೆ ತೆರಳಿದ್ದನು. ಗಂಡ ಊರಿಗೆ ತೆರಳುತ್ತಿದ್ದಂತೆ ಸೃಷ್ಟಿ, ರಾತ್ರಿ ಖಾಜಪ್ಪನಿಗೆ ಕಾಲ್ ಮಾಡಿ ಮನೆಗೆ ಬಾ ಅಂತಾ ಕರೆದಿದ್ದಾಳೆ. ತಕ್ಷಣ ಖಾಜಪ್ಪ ಸ್ನೇಹಿತ ಬೈಕ್ ತೆಗೆದುಕೊಂಡು ಹೋಗಲು ಸಜ್ಜಾಗಿದ್ದಾನೆ. ಇದನ್ನೂ ಓದಿ:ಸೂಕ್ಷ್ಮ ಮಾಹಿತಿಯನ್ನ ಪಾಕ್​ಗೆ ರವಾನಿಸುತ್ತಿದ್ದ ಐಎಸ್​ಐ ಏಜೆಂಟ್​​ ಬಂಧನ

ಆದರೆ ಸೃಷ್ಟಿ ಮನೆಗೆ ದಿಢೀರ್ ಅಂತಾ ಹೋದರೆ ಯಾರಾದರೂ ನೋಡಿದ್ರೆ ಕಷ್ಟ ಅಂತಾ. ಜೆಸ್ಕಾಂ ಸಿಬ್ಬಂದಿಗಳಿಗೆ ಕರೆ ಮಾಡಿ, ಇಲ್ಲಿ ಟ್ರಾನ್ಸ್‌ಫಾರಂಗೆ ಬೆಂಕಿ ಬಿದ್ದಿದೆ. ತಕ್ಷಣ ಕರೆಂಟ್ ತೆಗೆಯಿರಿ ಅಂತಾ ಹೇಳಿದ್ದಾನೆ. ಆಗ ವಿದ್ಯುತ್ ಕಡಿತವಾಗುತ್ತಲೇ ಖಾಜಪ್ಪ ಬೈಕ್ ಮೇಲೆ ನೇರವಾಗಿ ಸೃಷ್ಟಿ ಮನೆಗೆ ಬಂದಿದ್ದಾನೆ. ಈ ವೇಳೆ ಮನೆ ಮುಂದೆ ಬೈಕ್ ನಿಂತಿರೋದನ್ನ ಕಂಡು ಅಕ್ಕಪಕ್ಕದವರು ಶ್ರೀಮಂತ್‌ಗೆ ಕಾಲ್ ಮಾಡಿದ್ದಾರೆ. ತಕ್ಷಣ ಶ್ರೀಮಂತ ಮನೆ ಹತ್ತಿರ ಬಂದು ಮನೆ ಹೊರಗಡೆ ಲಾಕ್ ಮಾಡಿದ್ದಾನೆ. ಸ್ವಲ್ಪ ಸಮಯದ ಬಳಿಕ ಲಾಕ್ ತೆರೆದ ಶ್ರೀಮಂತ್, ಮನೆಯಿಂದ ಪತ್ನಿ ಸೃಷ್ಟಿ ಮತ್ತು ಖಾಜಪ್ಪ ಹೊರಬಂದಿದ್ದಾರೆ. ಈ ವೇಳೆ ಕೊಡಲಿಯಿಂದ ಪತ್ನಿ ಸೃಷ್ಟಿ ಹಾಗೂ ಖಾಜಪ್ಪನನ್ನ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ :ಸೋನು ನಿಗಮ್​ ಒಬ್ಬ ಸಾಂಸ್ಕೃತಿಕ ಭಯೋತ್ಪಾದಕ: ಕರವೇ ನಾರಯಣ ಗೌಡ

ಇನ್ನೂ ಘಟನ ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು, ಎಫ್‌ಎಸ್‌ಎಲ್(FSL) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಎಸ್ಪಿ ಶ್ರೀನಿವಾಸುಲು, ಪ್ರಾಥಮಿಕ ಮಾಹಿತಿ ಪ್ರಕಾರ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪತ್ನಿ ಸೃಷ್ಟಿ ಹಾಗೂ ಖಾಜಪ್ಪನನ್ನ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಜೋಡಿ ಕೊಲೆ ಮಾಡಿ ಪರಾರಿಯಾಗಿರೋ ಶ್ರೀಮಂತನ ಬಂಧನಕ್ಕೆ ಬಲೆ ಬೀಸಲಾಗಿದೆಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments