Friday, August 29, 2025
HomeUncategorizedಸ್ಪೀಕರ್​ ಖಾದರ್​ ಜೊತೆಗೆ ನನಗೂ ಬೆದರಿಕೆ ಕರೆಗಳು ಬರುತ್ತಿವೆ: ಸಿಎಂ ಸಿದ್ದರಾಮಯ್ಯ

ಸ್ಪೀಕರ್​ ಖಾದರ್​ ಜೊತೆಗೆ ನನಗೂ ಬೆದರಿಕೆ ಕರೆಗಳು ಬರುತ್ತಿವೆ: ಸಿಎಂ ಸಿದ್ದರಾಮಯ್ಯ

ಮಂಡ್ಯ : ಬೀದರ್​ನಲ್ಲಿ ನೆನ್ನೆ ಮಾಧ್ಯಮದೊಂದಿಗೆ ಮಾತನಾಡಿದ್ದ ಸ್ಪೀಕರ್ ಯು.ಟಿ ಖಾದರ್ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರು ಕೂಡ ತಮಗೂ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದು. ಈ ಕುರಿತು ತನಖೆ ನಡೆಸಲು ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.

ನಿಷೇಧಿತ ಪಿಎಫ್​ಐ ಸಂಘಟನೆಯಿಂದ ಬೆದರಿಕೆ ಕರೆಗಳು ಬರುತ್ತಿರುವ ವಿಚಾರವಾಗಿ ಮಾತನಾಡಿದ ಯು.ಟಿ ಖಾದರ್ ‘ನನಗೂ ಬೆದರಿಕೆ ಕರೆಗಳು ಬರುತ್ತಿವೆ. ರಾಜ್ಯದಲ್ಲಿ ಎನ್​ಐಎ ಕಛೇರಿ ಸ್ಥಾಪನೆ ಮಾಡಲಿ ಎಂದು ಹೇಳಿದ್ದರು. ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಸಿಎಂ ‘ನನಗೂ ಬೆದರಿಕೆ ಕರೆಗಳು ಬರುತ್ತವೆ, ಬಂದಿವೆ.
ಸ್ಪೀಕರ್‌‌ಗೆ ಬಂದ ಬೆದರಿಕೆ ಕರೆ ಬಗ್ಗೆ ಪತ್ತೆ ಹಚ್ಚಿ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಇತ್ತೀಚೆಗೆ ಸಚಿವ ರಾಜಣ್ಣ ಅವರಿಗೆ ಹನಿಟ್ರ್ಯಾಪ್​ ನಡೆಸಿದ್ದು ಬೆಳಕಿಗೆ ಬಂದಿದ್ದು. ರಾಜ್ಯ ಸರ್ಕಾರದ ಸಚಿವರು ಹೆದರಿಕೆಯ ನಡುವೆ ಆಡಳಿತ ನಡೆಸುವಂತಾಗಿದೆ. ಇದನ್ನೂ ಓದಿ :SSLC ಪರೀಕ್ಷೆ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ, ಉಡುಪಿ ಟಾಪ್​, ಕಲಬುರಗಿ ಲಾಸ್ಟ್​

ಸುಹಾಸ್​ ಶೆಟ್ಟಿ ಹತ್ಯೆ ಕುರಿತು ಸಿಎಂ ಮಾತು..!

ಮಂಗಳೂರಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್​ ಹತ್ಯೆ ವಿಚಾರವಾಗಿ ಮಾತನಾಡಿದ ಸಿಎಂ.’ಈ ಹತ್ಯೆ ಯಾಕೆ ನಡೆದಿದೆ ಗೊತ್ತಿಲ್ಲ. ಮೃತ ವ್ಯಕ್ತಿ ರೌಡಿಶೀಟರ್ ಅಂತ ಹೇಳುತ್ತಿದ್ದಾರೆ. ಹಂತಕರು ಯಾರೇ ಆಗಿದ್ರು ಕೂಡಲೇ ಕ್ರಮ ಆಗಬೇಕು. ಶೀಘ್ರ ಆರೋಪಿಗಳ ಪತ್ತೆಗೆ ಕ್ರಮವಹಿಸಬೇಕು. ಇಂತಹ ಘಟನೆಗಳಿಗಾಗಿಯೇ ಬಿಜೆಪಿಯವರು ಕಾಯುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ಸುಹಾಸ್​ ಶೆಟ್ಟಿ ಹತ್ಯೆಯಲ್ಲಿ ಪೊಲೀಸ್​ ಇಲಾಖೆಯ ಕೈವಾಡ: ಆರ್​. ಅಶೋಕ್​

ಪಹಲ್ಗಾಮ್‌ ದಾಳಿ ವೇಳೆ 26 ಜನ ಮೃತಪಟ್ಟರು‌. ಪಹಲ್ಗಾಮ್‌‌ಗೆ ಪ್ರಧಾನಮಂತ್ರಿ ಹೋಗಿದ್ದಾರಾ? ಆ ಘಟನೆಗೆ ಭದ್ರತಾ ವೈಫಲ್ಯ ಕಾರಣ ಅಲ್ಲವಾ? ನೂರಾರು ಪ್ರವಾಸಿಗರು ಹೋಗುವ ಜಾಗದಲ್ಲಿ ಪೊಲೀಸರು ಇಲ್ಲ, ಸೆಕ್ಯೂರಿಟಿ ಕೂಡ ಇಲ್ಲ ಎಂದು ಬಿಜೆಪಿಯವರ ಮೇಲೆ ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments