ರಾಯಚೂರು : ಇನ್ಸಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನ ಹಿಂದೆ ಹೋದ ಯುವತಿಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದ್ದು. ಚಾಮರಾಜನಗರದ ಅನುಪಮ ಎಂಬಾಕೆ ಪ್ರಿಯಕರನ ಹಿಂದೆ ಹೋಗಿ ಸಾವಿನ ಮನೆ ಸೇರಿದ್ದಾಳೆ. ಹಾಗದರೆ ಏನಿದು ಘಟನೆ ಅಂತೀರ ಈ ವರದಿ ನೋಡಿ.
ಇತ್ತೀಚೆಗೆ ಹದಿ ಹರೆಯದ ಯುವಕ ಯುವತಿಯರಿಗೆ ಅದೇನಾಗಿದೆಯೋ ಗೊತ್ತಿಲ್ಲ. ಮೊಬೈಲ್ ಗೀಳಿಗೆ ಬಿದ್ದು, ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿ ಬದುಕನ್ನೇ ನರಕ ಮಾಡ್ಕೊಳ್ತಿದ್ದಾರೆ. ಇದು ಕೂಡ ಅಂತದ್ದೇ ಒಂದು ಸ್ಟೋರಿ. ಚಾಮರಾಜನಗರದ ಕೊಳ್ಳೇಗಾಲದ ಸೋಮನಾಥ ನಗರದ ನಿವಾಸಿಯಾಗಿದ್ದ ಅನುಪಮ ಬೆಂಗಳೂರಿಗೆ ಓದುಲು ಎಂದು ಬಂದಿದ್ದಳು. ಆದರೆ ಓದುವ ಬರಲಿಗೆ ಮೊಬೈಲ್ ಗೀಳಿಗೆ ಬಿದ್ದಿದ್ದ ಅನುಪಮ ಸೋಷಿಯಲ್ ಮೀಡಿಯದಲ್ಲಿ ನಾಗರಾಜ್ ಎಂಬ ಯುವಕನನ್ನು ಪರಿಚಯ ಮಾಡಿಕೊಂಡಿದ್ದಳು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಇದನ್ನೂ ಓದಿ :ಜೀನಿ ಮಾಲೀಕ ದಿಲೀಪ್ ವಿರುದ್ದ ಅತ್ಯಾಚಾರ ಯತ್ನ ಆರೋಪ: ಬಂಧನ ಸಾಧ್ಯತೆ
ಅತ್ತ ನಾಗರಾಜ್ ಕೂಡ ಅನುಪಮಳ ಮೇಲೆ ಮೋಹಗೊಂಡಿದ್ದನು. ಬಣ್ಣ ಬಣ್ಣದ ಮಾತನಾಡಿ ಆಕೆಯನ್ನು ಬಲೆಗೆ ಬೀಳಿಸಿಕೊಂಡಿದ್ದನು. ಮದುವೆಯಾಗುವುದಾಗಿ ನಂಬಿಸಿ ಸ್ವಗ್ರಾಮವಾದ ರಾಯಚೂರಿನ ಬೂದಿಹಾಳಕ್ಕೆ ಕರೆದೊಯ್ದಿದ್ದನು. ಕರೆದೊಯ್ದ ನಂತರ ಆಕೆಯನ್ನು ಮದುವೆ ಮಾಡಿಕೊಂಡಿದ್ದನು. ಇತ್ತ ಅನುಪಮ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಆಕೆಯನ್ನು ಹುಡುಕಿಕೊಡಬೇಕು ಎಂದು ಮನವಿ ಮಾಡಿದ್ದರು.
ಪೊಲೀಸರು ತನಿಖೆ ಕೈಗೊಂಡಾಗ ಅನುಪಮ ರಾಯಚೂರಿನಲ್ಲಿ ಇದ್ದಾಳೆ ಎಂದು ತಿಳಿದು ಬಂದಿತ್ತು. ಹೇಗಾದರೂ ಮಾಡಿ ಮಗಳನ್ನ ಕರೆದುಕೊಂಡು ಬರಬೇಕೂ ಎಂದು ಪೋಷಕರು ರಾಯಚೂರಿಗೆ ಹೋಗಿದ್ದರು. ಆದರೆ ಮಗಳು ಬರಲು ಒಪ್ಪದ ಕಾರಣ ಬರಿಗೈಲಿ ವಾಪಾಸಾಗಿದ್ದರು. ಆದರೆ ಇದಾದ ಕೆಲ ದಿನಗಳ ನಂತರ ಅನುಪಮ ಇಲ್ಲಿ ನನಗೆ ತೊಂದರೆಯಾಗುತ್ತಿದೆ, ನನನ್ನು ಇಲ್ಲಿ ಸಾಯಿಸುತ್ತಾರೆ ಎಂದು ಪೋಷಕರಿಗೆ ಮೆಸೆಜ್ ಮಾಡಿದ್ದಳು. ಆದರೆ ಪೋಷಕರು ಮಗಳ ಕೃತ್ಯದಿಂದ ಸಿಟ್ಟಾಗಿ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.
ಇದನ್ನೂ ಓದಿ :ಕಾಶ್ಮೀರದ ಕಣಿವೆಯಲ್ಲಿ ಉಗ್ರರ ಅಟ್ಟಹಾಸ; ಸತ್ಯವಾದ ಭವಿಷ್ಯವಾಣಿ
ಆದರೆ ಇದೀಗ ಈ ನಿರ್ಲಕ್ಷವೇ ಅನುಪಮಳ ಸಾವಿಗೆ ಕಾರಣವಾಗಿದ್ದು. ಅನುಪಮಳ ಗಂಡ ನಾಗರಾಜ್ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿ. ನೇಣು ಬಿಗಿದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಘಟನೆ ಸಂಬಂಧ ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ನಾಗರಾಜ ಹಾಗೂ ಅವರ ತಂದೆ ತಾಯಿ ಸೇರಿದಂತೆ ಆರು ಜನರ ಮೇಲೆ ಪ್ರಕರಣ ದಾಖಲಾಗಿದ್ದು. ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.