Monday, September 1, 2025
HomeUncategorizedಕನ್ನಡಿಗರ ರಕ್ಷಣೆಯಲ್ಲಿ, ಕರ್ನಾಟಕ ಸರ್ಕಾರ ಸ್ವಂದಿಸಿದ ರೀತಿ ಶ್ಲಾಘನೀಯ: ಥಾವರ್​ ಚಂದ್​ ಗೆಹ್ಲೋಟ್​

ಕನ್ನಡಿಗರ ರಕ್ಷಣೆಯಲ್ಲಿ, ಕರ್ನಾಟಕ ಸರ್ಕಾರ ಸ್ವಂದಿಸಿದ ರೀತಿ ಶ್ಲಾಘನೀಯ: ಥಾವರ್​ ಚಂದ್​ ಗೆಹ್ಲೋಟ್​

ಬೆಂಗಳೂರು : ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಭರತ್​ ಭೂಷಣ್​ ಸಾವನ್ನಪ್ಪಿದ್ದು. ಇಂದು ಮುಂಜಾನೆ ಭರತ್​ ಭೂಷಣ್​ ಪಾರ್ಥಿವ ಶರೀರ ಬೆಂಗಳೂರಿಗೆ ತಲುಪಿದೆ. ಮತ್ತಿಕೆರೆಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು. ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದ್ದಾರೆ,

ಭರತ್​ ಭೂಷಣ್​​ಗೆ ಅಂತಿಮ ನಮನ ಸಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿದ ಥಾವರ್​ ಚಂದ್​ ಗೆಹ್ಲೋಟ್​ ‘ಕಾಶ್ಮೀರದಲ್ಲಿ ನಡೆದಿರುವ ಘಟನೆ ಖಂಡನೀಯ, ಘಟನೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಈ ಘಟನೆಯಿಂದ ದೇಶ ಸಿಟ್ಟಿನಲ್ಲಿದೆ, ಕೇಂದ್ರ ಸರ್ಕಾರ ಕಠಿಣವಾದ ಪಾಠ ಕಲಿಸುವ ವಿಶ್ವಾಸವಿದೆ. ಮುಂದೆ ಈ ರೀತಿಯ ಘಟನೆ ಆಗದಂತೆ ಪಾಠ ಕಲಿಸಬೇಕಿದೆ.

ಇದನ್ನೂ ಓದಿ :ಸಿಗರೇಟ್​ ಸೇದಬೇಡಿ ಎಂದಿದ್ದಕ್ಕೆ RSS ಮುಖಂಡನ ಮೇಲೆ ಅನ್ಯಕೋಮಿಯ ಯುವಕರಿಂದ ಹಲ್ಲೆ

ಕಾಶ್ಮೀರದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಥಾವರ್​​ ಚಂದ್ ಗೆಹ್ಲೋಟ್​ ಪ್ರಶಂಸೆ ವ್ಯಕ್ತಪಡಿಸಿದ್ದು. ‘ ಉಗ್ರ ದಾಳಿಯ ಸಂದಂರ್ಭದಲ್ಲಿ ಕರ್ನಾಟಕ ಸರ್ಕಾರ ಸ್ವಂದಿಸಿದ ರೀತಿ ಶ್ಲಾಘನೀಯವಾಗಿದೆ. ಘಟನೆ ಗುಪ್ತಚರ ವೈಪಲ್ಯದ ಬಗ್ಗೆ ಒಂದಲ್ಲ ಒಂದು ಲೋಪ ಆಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಪಾಠ ಕಲಿಸಲಿದೆ. ನಿನ್ನೆ ನಡೆದ ಸಭೆಯಲ್ಲಿ ಕೆಲವು ಕಠಿಣ ನಿರ್ಧಾರಗಳ ಈಗಾಗಲೇ ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಹೇಳಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments