Wednesday, September 10, 2025
HomeUncategorizedಬದುಕಿರುವಾಗಲೇ ತನ್ನ ಅಂತಿಮ ವಿಧಿವಿಧಾನವನ್ನು ತಾನೇ ಮಾಡಿದ ಮಹಿಳೆ

ಬದುಕಿರುವಾಗಲೇ ತನ್ನ ಅಂತಿಮ ವಿಧಿವಿಧಾನವನ್ನು ತಾನೇ ಮಾಡಿದ ಮಹಿಳೆ

ಕ್ಯಾನ್ಸರ್​.. ದೇಹದೊಳಗೆ ಗುಪ್ತವಾಗಿದ್ದು, ಅದರ ಅರಿವು ಬರುವ ಮೊದಲೇ ಅನೇಕ ಜನರನ್ನು ಆಹುತಿ ತೆಗೆದುಕೊಳ್ಳುತ್ತಿರುವ ಮಾರಕ ಖಾಯಿಲೆ. ಈ ಖಾಯಿಲೆಯಿಂದ ಪ್ರಪಂಚದಲ್ಲಿ ಪ್ರತಿ ವರ್ಷವೂ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ. ಈ ಖಾಯಿಲೆ ಬಂದು ನರಳುತ್ತಿರುವ ಜನರು ದಿನಗಳನ್ನು ಎಣಿಸುತ್ತಾ, ಹೇಗಾದರೂ ಮಾಡಿ ಬದುಕಬೇಕು ಎಂದು ದೇವರ ಬಳಿ ಮೊರೆ ಇಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಮಹಿಳೆಯೊಬ್ಬರು ಕ್ಯಾನ್ಸರ್​ನಿಂದ ಬಳಲುತ್ತಿದ್ದು. ಸಾಯುವುದು ಖಚಿತ ಎಂಬುದು ತಿಳಿಯುತ್ತಿದ್ದಂತೆ ತನ್ನ ಅಂತಿಮ ವಿಧಿ ವಿಧಾನಗಳನ್ನು ತಾನೇ ಮಾಡಿ ಮುಗಿಸಿದ್ದಾಳೆ.

ಚೀನಾದ 30 ವರ್ಷದ ಮಹಿಳೆ ತನಗೆ ಕ್ಯಾನ್ಸರ್​​​ ಇದೆ. ಇನ್ನು ಸ್ವಲ್ಪ ದಿನ ಬದುಕಿರುವುದು ಎಂದು ತನ್ನ ಎಲ್ಲ ಸಂಬಂಧಿಕರನ್ನು ಕರೆದು ತನ್ನ ಅಂತ್ಯಸಂಸ್ಕಾರವನ್ನು ಜೀವಂತ ಇರುವಾಗಲೇ ಮಾಡಿದ್ದಾಳೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ ಈ ಬಗ್ಗೆ ಒಂದು ವರದಿಯನ್ನು ಮಾಡಿದೆ. ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಜಿಯಾಂಗ್ ಯಿ ಎಂಬ ಮಹಿಳೆಗೆ ಮೂರು ತಿಂಗಳ ಹಿಂದೆ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆಕೆ ಇನ್ನು ಎರಡು ತಿಂಗಳು ಮಾತ್ರ ಬದುಕುವುದು ಎಂದು ವೈದ್ಯರು ಹೇಳಿದರು.

ಇದನ್ನೂ ಓದಿ : 14 ವರ್ಷಗಳಿಂದ ಪಾದರಕ್ಷೆ ಧರಿಸದೆ ಓಡಾಡುತ್ತಿದ್ದ ಅಭಿಮಾನಿ ಕಾಲಿಗೆ ಶೂ ತೊಡಿಸಿದ ಮೋದಿ

ಈ ವಿಚಾರ ಆಕೆಗೆ ಸೇರಿದಂತೆ, ಅವಳ ಮನೆಯವರಿಗೂ ದುಃಖ ಉಂಟು ಮಾಡಿತ್ತು. ಆದರೆ ಆಕೆ ಮಾತ್ರ ಗಟ್ಟಿ ನಿರ್ಧಾರ ಮಾಡಿಕೊಂಡು ಛಲದಿಂದ ಬದುಕುತ್ತಿದ್ದಾಳೆ. ಜೀವಂತವಾಗಿರುವಾಗ ಜಗತ್ತಿಗೆ ಮತ್ತು ತನ್ನ ಸ್ನೇಹಿತರಿಗೆ ವಿದಾಯ ಹೇಳಬೇಕು ಎಂಬುದು ಆಕೆಯ ಆಸೆಯಾಗಿತ್ತು. ಅದಕ್ಕಾಗಿ ತನ್ನ ಮನೆಗೆ ಎಲ್ಲರನ್ನೂ ಕರೆದು ತನ್ನ ಅಂತಿಮ ವಿಧಿ ವಿಧಾನಗಳು ಅಥವಾ ಸತ್ತ ನಂತರ ಮಾಡಬೇಕಾದ ಕಾರ್ಯಗಳನ್ನು ತನ್ನ ಮುಂದೆಯೇ ಮಾಡುವಂತೆ ಕೇಳಿಕೊಂಡಿದ್ದಾಳೆ.

ಗಂಡ ಮತ್ತು ಮಗುವಿನ ಮುಂದೆಯೇ, ತನ್ನ ಅಂತಿಮ ಕ್ರಿಯೆಯನ್ನು ಮಾಡಿದ್ದಾಳೆ. ಇದಕ್ಕಾಗಿ ತನ್ನ ಭಾವಚಿತ್ರವನ್ನು ತಾನೇ ಚಿತ್ರಿಸಿ, ಹೂವಿನ ಹಾರ ಹಾಕಿದ್ದಾಳೆ. ಇನ್ನು ಮನೆಗೆ ಬರುವವರಿಗೆ ಒಂದು ಕಾರ್ಡ್​​​ ಕೂಡ ನೀಡಿದ್ದಾಳೆ. ಅದರಲ್ಲಿ ನಮಸ್ತೆ! “ನಾನು ದುರಾದೃಷ್ಟವಂತನಲ್ಲದಿದ್ದರೆ… ಮುಂದಿನ ಎರಡು ವರ್ಷಗಳಲ್ಲಿ ನಾನು ದೇವತೆಯಾಗುತ್ತೇನೆ.. ಖಂಡಿತವಾಗಿಯೂ ನನಗೆ ನಿಮ್ಮ ಆಶೀರ್ವಾದವನ್ನು ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments