Thursday, September 11, 2025
HomeUncategorizedಜಾತಿ ಜಾತಿ ಅಂತ ಮಂಗ್ಯಾಗಳ ತರ ಕಿತ್ತಾಡೋದು ಬಿಡಿ, ಹಿಂದುಗಳಾಗಿ ಜಾತಿಗಣತಿ ನೋಡಿ: ಪ್ರತಾಪ್​ ಸಿಂಹ

ಜಾತಿ ಜಾತಿ ಅಂತ ಮಂಗ್ಯಾಗಳ ತರ ಕಿತ್ತಾಡೋದು ಬಿಡಿ, ಹಿಂದುಗಳಾಗಿ ಜಾತಿಗಣತಿ ನೋಡಿ: ಪ್ರತಾಪ್​ ಸಿಂಹ

ಮೈಸೂರು : ಮಾಜಿ ಸಂಸದ ಪ್ರತಾಪ್​ ಸಿಂಹ ಜಾತಿ ಜನಗಣತಿ ಕುರಿತು ಮೈಸೂರಿನಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು. ನಮ್ಮ ಜಾತಿ ಸಂಖ್ಯೆ ಕಡಿಮೆ ಆಯ್ತು ಅಂತ ಮಂಗ್ಯಾಗಳ ರೀತಿ ಕಿತ್ತಾಡೋದನ್ನ ಬಿಡಿ. ಒಗ್ಗಟ್ಟಾಗಿ ಹಿಂದುಗಳಾಗಿ ಜಾತಿ ಬಗಣತಿ ನೀಡಿ ಎಂದು ಹೇಳಿದರು.

ಮೈಸೂರಿನಲ್ಲಿ ಜಾತಿಗಣತಿ ಕುರಿತು ಪ್ರತಾಪ್​ ಸಿಂಹ ಹೇಳಿಕೆ ನೀಡಿದ್ದು. “ಜಾತಿಗಣತಿ ಸಂಖ್ಯೆ ಹೊರ ಹಾಕಿ ಸಿಎಂ ಸಿದ್ದರಾಮಯ್ಯ ತನ್ನ ಪಕ್ಷ ಹಾಗೂ ಪ್ರತಿಪಕ್ಷ ಇಬ್ಬರನ್ನು ಕುರಿ ಮಾಡಿದ್ದಾರೆ.  ವಾಸ್ತವ ವಿಚಾರಗಳನ್ನು ಮರೆ ಮಾಚಲು ಸಿದ್ದರಾಮಯ್ಯ ಜಾತಿ ಜನಗಣತಿಯನ್ನು ಮುನ್ನೆಲೆಗೆ ಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಜಾತಿಗಳನ್ನು ಒಡೆಯುತ್ತಿಲ್ಲ. ಒಟ್ಟಾರೆಯಾಗಿ ಅವರು ಹಿಂದೂ ಧರ್ಮವನ್ನು ಒಡೆಯುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ಪ್ರಿಯಾಂಕ ಗಾಂಧಿ ಪತಿ ರಾರ್ಬಟ್​ ವಾದ್ರಗೆ ED ಸಂಕಷ್ಟ; ಬಿಜೆಪಿ ಮೇಲೆ ವಾಗ್ದಾಳಿ

ಲಿಂಗಾಯತರು, ಒಕ್ಕಲಿಗರು, ಒಬಿಸಿ ಜನಸಂಖ್ಯೆ ಕಡಮೆ ಆಯ್ತು ಅನ್ನೋದಷ್ಟೆ ನೋಡಬೇಡಿ. ಒಟ್ಟಾರೆ ಹಿಂದೂಗಳ ಸ್ಥಿತಿ ಏನಾಗಿದೆ ನೋಡಿ.  ನಮ್ಮ‌ ಜಾತಿ‌ ಸಂಖ್ಯೆ ಕಡಿಮೆ ಆಯ್ತು ಅಂತಾ ಪರಸ್ಪರ ಮಂಗ್ಯಾಗಳ ರೀತಿ ಕಿತ್ತಾಡಬೇಡಿ. ಹಿಂದೂಗಳಾಗಿ ಈ ಜಾತಿ ಗಣತಿ ನೋಡಿ. ಯಾರ ಮನೆಗೆ ಬಂದು ಜಾತಿ ಗಣತಿ ಮಾಡಿದ್ದಾರೆ ? ಸಿಎಂ ಎಲ್ಲರನ್ನು ಕುರಿ ಮಾಡುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಆಗ ಅಹಿಂದ ಅಂತಾ ಆಗ ಒಂದು ವರ್ಗ ಒಡೆದರು. ಈಗ ಜಾತಿಗಣತಿ ಹೆಸರಲ್ಲಿ ಇಡೀ ಹಿಂದೂ ಧರ್ಮ ಒಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಲೆ ಏರಿಕೆ ಆಗಿದೆ, ಮುಡಾ ಹಗರಣ, ವಾಲ್ಮೀಕಿ ಹಗರಣ ನಡೆದಿದೆ. ಇವೆಲ್ಲವನ್ನು ಮರೆ ಮಾಚಲು ಜಾತಿಗಣತಿ ಬಿಟ್ಟಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ನಾಟಕ ಇದು. ಕಾಂಗ್ರೆಸ್ ನಲ್ಲಿ 37 ಜನ ವೀರಶೈವ ಶಾಸಕರಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿ ಬಿಟ್ಟು ಕೊಡುತ್ತಾರಾ ? ಲಿಂಗಾಯತರಿಗೆ, ಒಕ್ಕಲಿಗರು, ಒಬಿಸಿ ಎಲ್ಲದರೂ ಉಪ ಜಾತಿ ಲೆಕ್ಕ ಹಾಕಲಾಗಿದೆ.

ಇದನ್ನೂ ಓದಿ :ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

ಆದರೆ ಮುಸ್ಲಿಂ, ಕ್ರಿಶ್ಚಿಯನ್​ನರಲ್ಲಿ ಯಾಕೆ ಉಪ ಜಾತಿ ಯಾಕೆ ಲೆಕ್ಕ ಹಾಕಿಲ್ಲ?. ನಿಮ್ಮ ಪಕ್ಷದಲ್ಲೇ ಜಾತಿಗಣತಿ ಗೊಂದಲ ಇದೆ. ಒಂದು ಕಡೆ ಡಿಕೆ ಶಿವಕುಮಾರ್ ಒಕ್ಕಲಿಗ ಶಾಸಕರ ಸಭೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಶ್ಯಾಮನೂರು ಶಿವಶಂಕರಪ್ಪ ಲಿಂಗಾಯತರ ಸಭೆ ಕರೆದಿದ್ದಾರೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments