Wednesday, September 10, 2025
HomeUncategorizedಪ್ರಿಯಾಂಕ ಗಾಂಧಿ ಪತಿ ರಾರ್ಬಟ್​ ವಾದ್ರಗೆ ED ಸಂಕಷ್ಟ; ಬಿಜೆಪಿ ಮೇಲೆ ವಾಗ್ದಾಳಿ

ಪ್ರಿಯಾಂಕ ಗಾಂಧಿ ಪತಿ ರಾರ್ಬಟ್​ ವಾದ್ರಗೆ ED ಸಂಕಷ್ಟ; ಬಿಜೆಪಿ ಮೇಲೆ ವಾಗ್ದಾಳಿ

ನವದೆಹಲಿ : ಹರಿಯಾಣದ ಶಿಕೋಹ್‌ಪುರದಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯವು ಮಂಗಳವಾರ ಮಂಗಳವಾರ ಪ್ರಿಯಾಂಕ ಗಾಂಧಿ ರಾಬರ್ಟ್ ವಾದ್ರಾ ಅವರಿಗೆ ಸಮನ್ಸ್ ಜಾರಿ ಮಾಡಿದೆ.

56 ವರ್ಷದ ರಾರ್ಬಟ್​ ವಾದ್ರ ಸಂಸದೆ ಪ್ರಿಯಾಂಕ ಗಾಂಧಿ ಅವರ ಪತಿಯಾಗಿದ್ದು. ಇವರಿಗೆ ಅಕ್ರಮ ಹಣವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರೀಲ್​ 8ರಂದು ಇಡಿ ಮೊದಲ ಸಮನ್ಸ್​​ ಜಾರಿ ಮಾಡಿತ್ತು. ಆದರೆ ಅಂದು ವಾದ್ರ ಇಡಿ ಮುಂದೆ ಹಾಜರಾಗಲು ವಿಫಲರಾಗಿದ್ದರು. ಇಂದು ED ಮತ್ತೊಂದು ಸಮನ್ಸ್​ ನೀಡಿದ್ದು. ಎರಡನೇ ಸಮನ್ಸ್​ ಸ್ವೀಕರಿಸಿದ ವಾದ್ರ ಇಡಿ ಕಛೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ :ಕತ್ತು ಹಿಸುಕಿ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ ಪತಿ

ರಾರ್ಬಟ್​ ವಾದ್ರ ತಮ್ಮ ನಿವಾಸದಿಂದ ನಡೆದುಕೊಂಡೆ ದೆಹಲಿಯಲ್ಲಿರುವ ಇಡಿ ಕಚೇರಿಗೆ ಬಂದಿದ್ದು. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು ‘ಬಿಜೆಪಿ ರಾಜಕೀಯ ದ್ವೇಷಕ್ಕಾಗಿ ಇಡಿಯನ್ನು ದುರುಪಯೋಗ ಪಡೆಸುಕೊಳ್ಳುತ್ತಿದೆ ಎಂದು ಹೇಳಿದರು.

ಈ ಕುರಿತು ಮಾತನಾಡಿದ ರಾರ್ಬಟ್​ ವಾದ್ರ ‘ ಪ್ರತಿ ಬಾರಿ ಜನರಿಗೆ ಬೆಂಬಲವಾಗಿ ಮಾತನಾಡಿದಾಗ ಅಥವಾ ಏನಾದರೂ ಮಾಡಿದಾಗಲೂ ಆಡಳಿತ ಪಕ್ಷದಿಂದ ಒತ್ತಡ ಎದುರಿಸಬೇಕಾಗುತ್ತದೆ. ಪ್ರತಿಪಕ್ಷಗಳು ತನ್ನನ್ನು ಗುರಿಯಾಗಿಸಲು ತನಿಖಾ ಸಂಸ್ಥೆಗಳನ್ನು ಬಳಸುತ್ತಿವೆ. ಆದರೆ ನಾನು ಅದಕ್ಕೆ ಹೆದರಲ್ಲ. ಇಡಿಗೆ ಸಹಕರಿಸಿ ಎಲ್ಲವನ್ನು ಹೆದರಿಸುತ್ತೇನೆ’ ಎಂದು ಹೇಳಿದರು. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments