Tuesday, September 9, 2025
HomeUncategorizedಮೊಬೈಲ್​ ವಿಚಾರಕ್ಕೆ ಜಗಳ; ತಂದೆಯ ಎದೆಗೆ ಚೂರಿ ಹಾಕಿದ ಮಗ

ಮೊಬೈಲ್​ ವಿಚಾರಕ್ಕೆ ಜಗಳ; ತಂದೆಯ ಎದೆಗೆ ಚೂರಿ ಹಾಕಿದ ಮಗ

ಮೈಸೂರು : ಮೊಬೈಲ್​ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು. ಕ್ರೂರಿ ಮಗನೊಬ್ಬ ಸ್ವಂತ ತಂದೆಯನ್ನೆ ಪರಲೋಕಕ್ಕೆ ಕಳುಹಿಸಿದ್ದಾರೆ. ಮೃತವ್ಯಕ್ತಿಯನ್ನು 35 ವರ್ಷದ ಸೈಯದ್​ ಮುತ್ತಿಫ್​ ಎಂದು ಗುರುತಿಸಿದ್ದು. ತಂದೆಯನ್ನೆ ಕೊಲೆ ಮಾಡಿದ ಕಿರಾತಕನನ್ನು 21 ವರ್ಷದ ಮತೀನ್​ ಎನ್ನಲಾಗಿದೆ. ಇದನ್ನೂ ಓದಿ : ಮೂತ್ರ ವಿಸರ್ಜನೆಗೆ ಎಂದು ಹೋಗಿದ್ದ ಯುವಕನನ್ನು ಅಟ್ಟಾಡಿಸಿದ ಒಂಟಿಸಲಗ

ಮೈಸೂರಿನ ಶಾಂತಿ ನಗರದ ಬಿಳಿ ಕಾಲೋನಿಯಲ್ಲಿ ಘಟನೆ ನಡೆದಿದ್ದು. ಕೊಲೆಯಾದ ಸೈಯದ್​ ಮುತ್ತಿಫ್​ಗೆ ಇಬ್ಬರು ಪತ್ನಿಯರಿದ್ದರು. ಮೊದಲ ಹೆಂಡತಿಗೆ ಇಬ್ಬರು ಮಕ್ಕಳುಮ ಮತ್ತು ಎರಡನೇ ಹೆಂಡತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಇವರಲ್ಲಿ ಮತೀನ್​ ಕೂಡ ಒಬ್ಬ. ರಂಜಾನ್​ ಸಮಯದಲ್ಲಿ ತಂದೆ ಸೈಯದ್ ಮತ್ತು ಮತೀನ್​ ನಡುವೆ ಮೊಬೈಲ್​ ವಿಚಾರಕ್ಕೆ ಜಗಳವಾಗಿತ್ತು. ಇದೇ ವಿಚಾರಕ್ಕೆ ಇದೀಗ ಕೊಲೆಯಾಗಿಗೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಸಪ್ತಪದಿ ತುಳಿಯಲು ಸಜ್ಜಾದ ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ

2ನೇ ಹೆಂಡತಿ ಪುತ್ರನಾದ ಮತೀನ್‌ ಮನೆಗೆ ಬರುವಂತೆ ತಂದೆಗೆ ಕರೆ ಮಾಡಿದ್ದಾನೆ. ಆದರೆ ತಂದೆ ಮನೆಗೆ ಬರ್ತಿದಂತೆ ಎದೆಗೆ ಚೂರಿಯಿಂದ ಚುಚ್ಚಿ ಕೊಲೆ ಮಾಡಿ, ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. ಸೈಯದ್ ಶವವನ್ನು ಶವಗಾರಕ್ಕೆ ರವಾನಿಸಿದ್ದು. ಶವಗಾರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments