Wednesday, August 27, 2025
HomeUncategorizedಮುಂಡಗಾರು ಲತಾ ಸೇರಿದಂತೆ 6 ನಕ್ಸಲರು ಶರಣಾಗತಿಗೆ ಒಪ್ಪಿಗೆ !

ಮುಂಡಗಾರು ಲತಾ ಸೇರಿದಂತೆ 6 ನಕ್ಸಲರು ಶರಣಾಗತಿಗೆ ಒಪ್ಪಿಗೆ !

ಚಿಕ್ಕಮಗಳೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಲ್ಲಿ ಖಾಕಿಗಳು ಮಾಡಿದ ಒಂದೇ ಒಂದು ಎನ್​ಕೌಂಟರ್​ಗೆ ಕೆಂಪುಉಗ್ರರಲ್ಲಿ ನಡುಕ ಹುಟ್ಟಿಸಿದೆ. ಎರಡು ದಶಕಗಳ ಕಾಲ ಹೋರಾಡ್ದೋರು-ಹಾರಾಡ್ದೋರು ಒಂದೇ ಒಂದು ಎನ್ ಕೌಂಟರ್ ಗೆ ಫುಲ್ ಸೈಲೆಂಟ್​ ಆಗಿದ್ದಾರೆ. ಇದರಿಂದ ಹೆದರಿರುವ ಮೋಸ ವಾಂಟೆಡ್​ ನಕ್ಸಲ್​ ಮುಂಡಗಾರು ಲತಾ ಸೇರಿದಂತೆ 6 ಜನ ಸಮಾಜದ ಮುಖ್ಯ ವಾಹಿನಿಗೆ ಬರಲು ಒಪ್ಪಿಕೊಂಡಿದ್ದು. ನಾಳೆ ಶರಣಾಗಲಿದ್ದಾರೆ.

ಇದನ್ನೂ ಓದಿ : ಮಂಗಳೂರು ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಕೇರಳದಿಂದ ಬಂದಿದ್ದ ನಕ್ಸಲರು ಚಿಕ್ಕಮಗಳೂರು-ಉಡುಪಿ ಭಾಗವನ್ನ ಮುಂಡಗಾರು ಲತಾ-ವಿಕ್ರಂ ಗೌಡ ನಾಯಕತ್ವ ವಹಿಸಿದ್ದರು. ಆದರೆ, ಉಡುಪಿ ಕಾಡಲ್ಲಿ ಪೊಲೀಸರ ತುಪಾಕಿ ನಳಿಕೆಯಿಂದ ಹಾರಿದ ಗುಂಡು ವಿಕ್ರಂಗೌಡನ ಎದೆ ಸೀಳಿತ್ತು.ಇದರಿಂದ ಮುಂಡಗಾರು ಲತಾ ತಂಡ ಫುಲ್ ಸೈಲೆಂಟ್ ಆಗಿತ್ತು. ಆದರೆ ಎ.ಎನ್.ಎಫ್. ಪೊಲೀಸರು ಕೂಂಬಿಂಗ್ ಮಾತ್ರ ನಿಲ್ಲಿಸಿರಲಿಲ್ಲ ಮತ್ತಷ್ಟು ಆಕ್ಟೀವ್ ಆಗಿದ್ದರು. ಆದರೆ ನಕ್ಸಲರು ಪತ್ತೆಯಂತು ಆಗಿರಲಿಲ್ಲ. ಆದರೆ ಇದೀಗ ನಕ್ಸಲರು ಶರಣಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ನಕ್ಸಲರು ಶರಣಾಗತಿಗೆ ಸಿಎಂ ಸಿದ್ದರಾಮಯ್ಯ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರ ಬೆನ್ನಲ್ಲೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಕೂಡ ಅದನ್ನೇ ಪುನರುಚ್ಚರಿಸಿದ್ದರು.ಇವಲ್ಲದರ ನಡುವೆಯೆ ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರೆಪ್ಪ ಅರೋಲಿ, ವಸಂತ್, ಜೀಶ್ ಎಂಬವವರು ಶರಣಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆ, ಕರ್ನಾಟಕದಲ್ಲಿ ಇದ್ದದ್ದೇ ಎಂಟತ್ತು ನಕ್ಸಲರು. ಅವರು ಕೇರಳ ಹೋದ ಮೇಲೆ ಕಾಡು ಕ್ಲೀನ್ ಆಗಿತ್ತು. ಇದೀಗ ಮತ್ತೆ ಬಂದ ಬಳಿಕ ಒಂದು ಎನ್ ಕೌಂಟರ್ ಆಗಿದೆ. ಜನರ ಬೆಂಬಲವೂ ಇಲ್ಲ. ಕೂಂಬಿಂಗ್ ಚುರುಕು ಅನ್ನೋ ಕಾರಣಕ್ಕೆ ಭವಿಷ್ಯ ಇಲ್ಲ ಅಂತ ನಕ್ಸಲರಿಗೆ ಅನ್ನಿಸಿದ ನಕ್ಸಲರು ಶರಣಾಗತಿಯೇ ಕೊನೆಯ ಆಯ್ಕೆಯೆಂದು ಅರಿತು ಶರಣಾಗಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments