Sunday, August 24, 2025
Google search engine
HomeUncategorizedಕೇರಳ 'ಮಿನಿ ಪಾಕಿಸ್ತಾನವಾಗಿದೆ' ಅದಕ್ಕೆ ಅಲ್ಲಿ ರಾಹುಲ್​, ಪ್ರಿಯಾಂಕ ಗೆದ್ದಿದ್ದಾರೆ : ನಿತೀಶ್​ ರಾಣೆ

ಕೇರಳ ‘ಮಿನಿ ಪಾಕಿಸ್ತಾನವಾಗಿದೆ’ ಅದಕ್ಕೆ ಅಲ್ಲಿ ರಾಹುಲ್​, ಪ್ರಿಯಾಂಕ ಗೆದ್ದಿದ್ದಾರೆ : ನಿತೀಶ್​ ರಾಣೆ

ಪುಣೆ: ಮಹರಾಷ್ಟ್ರದ ಮೀನುಗಾರಿಕೆ ಸಚಿವ ನಿತೇಶ್​ ರಾಣೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು. ದಕ್ಷಿಣ ರಾಜ್ಯ ಕೇರಳವನ್ನು ಮಿನಿ ಪಾಕಿಸ್ತಾನ ಎಂದು ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​​ ಸಚಿವ ನಿತೀಶ್​ ರಾಣೆ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿ ಅಫ್ಜಲ್ ಖಾನ್ ಎದುರು ಛತ್ರಪತಿ ಶಿವಾಜಿಯ ಗೆಲುವಿನ ವರ್ಷಾಚರಣೆ ವೇಳೆ ಮಾತನಾಡಿದ ರಾಣೆ ‘ಕೇರಳ ಮಿನಿ ಪಾಕಿಸ್ತಾನವಾಗಿದೆ. ಅದಕ್ಕಾಗಿಯೇ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅಲ್ಲಿಂದ ಆಯ್ಕೆಯಾಗಿದ್ದಾರೆ. ಎಲ್ಲಾ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ. ಇದು ಸತ್ಯ. ಇವರೆಲ್ಲಾ ಭಯೋತ್ಪಾದಕರ ನೆರವಿನಿಂದ ಸಂಸದರಾಗಿದ್ದಾರೆ” ಎಂದು ರಾಣೆ ಹೇಳಿದ್ದಾರೆ.

ಇದನ್ನೂ ಓದಿ : ಸಚಿನ್​​ ಪಾಂಚಾಳ್​ ಆತ್ಮಹತ್ಯೆ ಪ್ರಕರಣ : ಬೃಹತ್​ ಪ್ರತಿಭಟನೆಯ ಎಚ್ಚರಿಕೆ ನೀಡಿದ ಬಿ.ವೈ ವಿಜಯೇಂದ್ರ !

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ‘ನಿತೇಶ್ ರಾಣೆ ಅವರಿಂದ ಇನ್ನೇನು ನಿರೀಕ್ಷಿಸಬಹುದು? ಅವರು ಇದನ್ನು ಮಾಡಲು ಮಾತ್ರ ಸಚಿವರಾಗಿದ್ದಾರೆ. ಆದರೆ, ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ದೇವೇಂದ್ರ ಫಡ್ನವಿಸ್ ಅವರನ್ನು ಕೇಳಲು ಬಯಸುತ್ತೇನೆ. ಸಚಿವರಾಗಿರುವ ವ್ಯಕ್ತಿ(ರಾಣೆ) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾರತದ ಸಾರ್ವಭೌಮತ್ವ ಮತ್ತು ಐಕ್ಯತೆಯನ್ನು ಕಾಪಾಡಬೇಕಾದ ಸಚಿವರು ದೇಶದ ಒಂದು ರಾಜ್ಯವನ್ನು ಪಾಕಿಸ್ತಾನಕ್ಕೆ ಹೋಲಿಸಿ, ಅಲ್ಲಿನ ಮತದಾರರನ್ನು ‘ಭಯೋತ್ಪಾದಕರು’ ಎಂದು ಕರೆದಿದ್ದಾರೆ. ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕ ಹಕ್ಕಿದೆಯೇ? ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಟೀಕೆಗಳು ಹೆಚ್ಚಾದ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ ನಿತೀಶ್​ ರಾಣೆ  ‘ ಕೇರಳ ಭಾರತದ ಭಾಗವಾಗಿದೆ, ನಾನು ಅಲ್ಲಿ ನಡೆಯುತ್ತಿರುವ ಲವ್​ ಜಿಹಾದ್​ ಮತ್ತು ಧಾರ್ಮಿಕ ಮತಾಂತರವನ್ನು ಉಲ್ಲೇಖಿಸಿ ಮಾತನಾಡಿದೆ ಎಂದು ಸ್ಪಷ್ಟನೆ ನೀಡಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments