Thursday, August 28, 2025
HomeUncategorizedಸಿದ್ದರಾಮಯ್ಯನಿಗೆ ಶಕ್ತಿ ನೀಡಿದ ಉಪಚುನಾವಣೆ ಫಲಿತಾಂಶ : ಸಿಎಂ ಕುರ್ಚಿಗೆ ಟವಲ್​ ಹಾಕಿದವರು ಕಕ್ಕಾಬಿಕ್ಕಿ

ಸಿದ್ದರಾಮಯ್ಯನಿಗೆ ಶಕ್ತಿ ನೀಡಿದ ಉಪಚುನಾವಣೆ ಫಲಿತಾಂಶ : ಸಿಎಂ ಕುರ್ಚಿಗೆ ಟವಲ್​ ಹಾಕಿದವರು ಕಕ್ಕಾಬಿಕ್ಕಿ

ಬೆಂಗಳೂರು:  ಬೈ ಎಲೆಕ್ಷನ್ ಫಲಿತಾಂಶದಿಂದ ಸಿಎಂ‌ ಸಿದ್ದರಾಮಯ್ಯನವ್ರು ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ. ಹಳೆ ಮೈಸೂರು ಭಾಗ, ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದಲ್ಲಿ ತಮ್ಮ ಹವಾ ಕಡಿಮೆ ಆಗಿಲ್ಲ ಅಂತಾ ಸಾಭೀತುಪಡಿಸಿದ್ದಾರೆ. ಮೂರೂ ಕ್ಷೇತ್ರಗಳಲ್ಲಿನ ಅಹಿಂದ ವರ್ಗದ ಮತದಾರರು ಸಿದ್ದರಾಮಯ್ಯನವ್ರ ಕೈ ಬಲಪಡಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ತಾವೇ ಸುಪ್ರೀಂ ಎನಿಸಿಕೊಂಡಿದ್ದಾರೆ.

ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದ್ದವರ ಕನಸು ಭಗ್ನವಾದಂತೆ ಕಾಣ್ತಿದೆ.‌ ಬೈ ಎಲೆಕ್ಷನ್ ಫಲಿತಾಂಶ ಸಿದ್ದರಾಮಯ್ಯನವ್ರಿಗೆ ಮತ್ತಷ್ಟು ಶಕ್ತಿ ತುಂಬಿದ್ದು, ವಿರೋಧಿಗಳೆಲ್ಲಾ ಕಕ್ಕಾಬಿಕ್ಕಿಯಾಗಿದ್ದಾರೆ. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರಿನಲ್ಲಿ ಅಹಿಂದ ವರ್ಗದ ಮತದಾರರು ಸಿದ್ದರಾಮಯ್ಯನವ್ರ ಪರ ನಿಂತಿದ್ದು, ಮತ್ತೊಮ್ಮೆ ತಾವು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮಾಸ್ ಲೀಡರ್ ಎಂಬುದ‌ನ್ನ ರುಜುವಾತು ಮಾಡಿದ್ದಾರೆ. ಬಾಕಿ‌ ಮೂರು ವರ್ಷವೂ ಸಿದ್ದರಾಮಯ್ಯನವ್ರೇ ಸಿಎಂ ಆಗಿರಬೇಕು ಅಂತಾ ಕೂಗು ಜೋರಾಗ್ತಿದೆ. ನನಗೆ ಶಕ್ತಿ ತುಂಬಿ ಎಂದು ಉಪ ಚುನಾವಣಾ ಕಣದಲ್ಲಿ ಸಿದ್ದರಾಮಯ್ಯ ಪದೇ ಪದೇ ಹೇಳ್ತಿದ್ರು. ನಾನು ಹಿಂದುಳಿದ ವರ್ಗಕ್ಕೆ ಸೇರಿದವನೆಂದು ನನ್ನ ಟಾರ್ಗೆಟ್ ಮಾಡ್ತಿದ್ದಾರ. ಮುಡಾ, ವಾಲ್ಮೀಕಿ ಹಗರಣದಲ್ಲಿ‌ ಸಿಲುಕಿಸಲು ಷಡ್ಯಂತ್ರ ಮಾಡ್ತಿದ್ದಾರೆ ಅಂತಾ ಭಾವನಾತ್ಮಕವಾಗಿ ಸಿಎಂ ಮಾತನಾಡ್ತಿದ್ರು. ಸಿದ್ದರಾಮಯ್ಯನವ್ರ ಈ ಸೆಂಟಿಮೆಂಟ್ ಅಸ್ತ್ರ ಅಹಿಂದ ವರ್ಗದ ಜನರ ಮನಸ್ಸಿಗೆ ನಾಟಿದ್ರಿಂದ, ಮೂರೂ ಕಡೆ ದೋಸ್ತಿ ನಾಯಕರು ಹಿನ್ನಡೆ ಅನುಭವಿಸಬೇಕಾಯ್ತು.

ಇನ್ನು ಮೂರು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ವಿಪಕ್ಷಗಳ ಯಡವಟ್ಟೇ ಕಾರಣವಾಗಿದೆ.. ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡಿದ್ದೆ ಎನ್‌ಡಿಎಗೆ ಮುಳುವಾಗಿದೆ.. ಮೈಸೂರು ಪಾದಯಾತ್ರೆ ಮೂಲಕ ಸಿದ್ದರಾಮಯ್ಯನವ್ರನ್ನ ಅಣಿಯಲು ಜೆಡಿಎಸ್-ಬಿಜೆಪಿ ನಾಯಕರು ಪ್ಲ್ಯಾನ್ ಮಾಡಿದ್ರು.. ವಕ್ಫ್‌ಬೋರ್ಡ್ ಬೋರ್ಡ್ ಆಸ್ತಿ ವಿವಾದ ಮೂಲಕ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಿದ್ರು.. ಇದನ್ನೇ ಸಿಎಂ ಸಿದ್ದರಾಮಯ್ಯ ಅಸ್ತ್ರವನ್ನಾಗಿ ಮಾಡಿಕೊಂಡು, ಉಪ ಚುನಾವಣಾ ಪ್ರಚಾರದಲ್ಲಿ ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದ್ರು.. ಈ ಫಲಿತಾಂಶದಿಂದ ಬಿಜೆಪಿ ಜೆಡಿಎಸ್ ಗೆ ಮಾತ್ರವಲ್ಲ.. ಸ್ವಪಕ್ಷದಲ್ಲಿನ ವಿರೋಧಿಗಳಿಗೂ ಸಿದ್ದರಾಮಯ್ಯ ಹವಾ ಗೊತ್ತಾಗಿದೆ.. ಸಿದ್ದರಾಮಯ್ಯ ವರ್ಚಸ್ಸು ಕಡಿಮೆ ಆಗಿಲ್ಲ ಅನ್ನೋ ಸಂದೇಶ ಹೈಕಮಾಂಡ್ ಗೂ ರವಾನೆಯಾಗಿದೆ.

ಇನ್ನು ತಮ್ಮ ಮೇಲಿನ‌ ಆಪಾದನೆಗಳ ಬಗ್ಗೆ ಸಿಎಂ ಜನಮನ ಸೆಳೆಯುವಲ್ಲಿಯೂ ಸಕ್ಸಸ್ ಆದ್ರು. ಎಲ್ಲಾ ನ್ಯಾಯಾಲಯಗಳಗಿಂತ ಜನತಾ ನ್ಯಾಯಾಲಯವೇ ಮುಖ್ಯ. ನೀವು ಕೊಡೋ ತೀರ್ಪನ್ನ ತಲೆ ಭಾಗಿ ಸ್ವೀಕರಿಸ್ತೀನಿ ಅಂತಾ ಪ್ರಚಾರ ಮಾಡಿದ್ರು.. ಇದು ಕೂಡ ಸಿದ್ದರಾಮಯ್ಯ ಮೇಲೆ ಸಿಂಪಥಿ ಬರುವಂತೆ ಮಾಡ್ತು. ಸಂಡೂರಿನಲ್ಲಿ ಹಿನ್ನೆಡೆ ಆಗಿದಿದ್ರೆ ಅದು ಸಿದ್ದರಾಮಯ್ಯನವ್ರ ತಲೆಗೆ ಬರ್ತಿತ್ತು. ಅದೇ ರೀತಿ ಚನ್ನಪಟ್ಟಣದಲ್ಲಿ ಸೋತಿದ್ರೂ ಸಿಎಂ ಆಪ್ತ ಜಮೀರ್ ಕಾರಣ.. ಅಹಿಂದ ವರ್ಗ ಕೈ ಹಿಡಿಯಲಿಲ್ಲ.. ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಅನ್ನೋ ಆರೋಪಗಳಿಗೆ ಗುರಿಯಾಗಬೇಕಿತ್ತು.. ಆದ್ರೆ ವಿರೋಧಿಗಳ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದ್ದು, ಸಿದ್ದರಾಮಯ್ಯನವ್ರು ಮಾಸ್ ಲೀಡರ್ ಆಗಿ ಹೊರಹೊಮ್ಮಿದ್ದಾರೆ.. ಈಗ ಉಪಚುನಾವಣೆ ಫಲಿತಾಂಶವನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅತ್ಯಾಪ್ತರು ಹಾಸನದಲ್ಲಿ ಬೃಹತ್ ಸಮಾವೇಶ ಮಾಡೋಕೆ ಹೊರಟಿದ್ದಾರೆ.‌ ಈ ಮೂಲಕ ತಮ್ಮ ಸ್ಥಾನಕ್ಕೆ ಕುಂದು ಬರದಂತೆ ಸಿದ್ದರಾಮಯ್ಯ ನೋಡಿಕೊಳ್ಳಲು ಮುಂದಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments