Friday, August 29, 2025
HomeUncategorizedಪುಡಿರೌಡಿಗಳ ಪುಂಡಾಟ : ಬಂಧಿಸಬೇಕಿದ್ದ ಪೋಲಿಸರೇ ರಾಜಿ ಮಾಡಿದ್ದಾರೆ

ಪುಡಿರೌಡಿಗಳ ಪುಂಡಾಟ : ಬಂಧಿಸಬೇಕಿದ್ದ ಪೋಲಿಸರೇ ರಾಜಿ ಮಾಡಿದ್ದಾರೆ

ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಪುಡಿರೌಡಿಗಳ ಅಟ್ಟಹಾಸ ಮಿತಿ ಮೀರಿದ್ದು. ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದ್ದು. ಅಸಭ್ಯ ಪದಗಳಿಂದ ಪರಸ್ಪರರನ್ನು ನಿಂದಿಸಿಕೊಂಡು ಹಲ್ಲೆ ಮಾಡಿದ್ದಾರೆ. ಇವರನ್ನು ಬಂಧಿಸಬೇಕಿದ್ದ ಪೋಲಿಸರು ಇವರೆಲ್ಲರನ್ನು ಕರೆಸಿ ರಾಜಿ ಮಾಡಿ ಕಳುಹಿಸಿರುವು ವಿಪರ್ಯಾಸವೇ ಸರಿ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಸ್ಮೂಕಾ ಲಾಂಜ್ ಬಾರ್​ನಲ್ಲಿ ಎರಡು ಪ್ರತ್ಯೇಕ ರೌಡಿ ಗುಂಪುಗಳು ಮಧ್ಯರಾತ್ರಿಯವರೆಗೆ ಪ್ರತ್ಯೇಕವಾಗಿ ಪಾರ್ಟಿ ಮಾಡಿದ್ದಾರೆ. ಒಂದು ಟೇಬಲಿನಲ್ಲಿ ರೌಡಿಶೀಟರ್ ದರ್ಶನ್, ಪ್ರಸನ್ನ, ಸಾಗರ್, ಕಿರಣ್, ವಿನಯ್, ಮಣಿ, ನಿಖಿತ್ ಮತ್ತು ಮತ್ತೊಂದು ಟೇಬಲ್ಲಿನಲ್ಲಿ ಕುಳಿತಿದ್ದ‌ ರೌಡಿಶೀಟರ್ ಚಂದ್ರ, ಗಣೇಶ್, ಚೇತನ್, ಮಂಜ, ಮುಜಾಮಿಲ್, ನದೀಮ್ ಪಾರ್ಟಿ ಮಾಡುತ್ತಿದ್ದರು ಎಂದು ಮಾಹಿತಿ ದೊರೆತಿದೆ.

ಪಾರ್ಟಿ ಮುಗಿದ ನಂತರ ದರ್ಶನ್ & ಟೀಂ ಬಿಲ್ ಕೊಡುವಾಗ, ರೌಡಿಶೀಟರ್​ ಗಣೇಶ್ & ಟೀಂ ಕ್ಷುಲ್ಲಕ ಕಾರಣಕ್ಕೆ ಖ್ಯಾತೆ ತೆಗೆದು ಜಗಳ ಆರಂಭಿಸಿದೆ. ಈ ವೇಳೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿಯಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ರೌಡಿಶೀಟರ್​ ಗಣೇಶ್​​, ದರ್ಶನ್​ ಮೇಲೆ ಬಿಯರ್​ ಬಾಟೆಲ್​ ಎಸೆದು ಹಲ್ಲೆ ಮಾಡಲು ಯತ್ನಿಸಿದ್ದಾನೆ.

ಸ್ಮೂಕಾ ಲಾಂಜ್​ ಬಾರ್​​ನಲ್ಲಿ ಗಲಾಟೆ ನಡೆದ ನಂತರವು  ಹೊರಗೆ ಬಂದ ಪುಡಿರೌಡಿಗಳು ಮತ್ತೆ ಜಗಳ ಮಾಡಿದ್ದು. ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕಾದ ಪೋಲಿಸರೆ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು, ಎರಡು ಗುಂಪುಗಳನ್ನು ಠಾಣೆಗೆ ಕರೆಸಿ ರಾಜಿ ಮಾಡಿ ಕಳುಹಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಶ್ರೀರಂಗಪಟ್ಟಣ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments