Monday, August 25, 2025
Google search engine
HomeUncategorized52 ಸೀಟ್, 6 ಮೊಬೈಲ್ ಚಾರ್ಜ್ ಪಾಯಿಂಟ್ : ಅಶ್ವಮೇಧ ಬಸ್​ಗಳ ವಿಶೇಷತೆಗಳಿವು

52 ಸೀಟ್, 6 ಮೊಬೈಲ್ ಚಾರ್ಜ್ ಪಾಯಿಂಟ್ : ಅಶ್ವಮೇಧ ಬಸ್​ಗಳ ವಿಶೇಷತೆಗಳಿವು

ಬೆಂಗಳೂರು : ಕೆಎಸ್ಸಾರ್ಟಿಸಿಗೆ ಹೊಸದಾಗಿ 800 ಬಸ್​ಗಳು ಸೇರಲಿದ್ದು, ಇಂದು ಮೊದಲ‌ ಹಂತದಲ್ಲಿ 100 ಬಸ್​ಗಳ ಸಂಚಾರಕ್ಕೆ ಗ್ರೀನ್‌ಸಿಗ್ನಲ್ ಸಿಕ್ಕಿದೆ. ಈ‌ ಮೂಲಕ ರಾಜ್ಯ ಸರ್ಕಾರ ಅಶ್ವಮೇಧಯಾಗ ಶುರುಮಾಡಿದೆ.

ಶಕ್ತಿ ಯೋಜನೆ ಆರಂಭವಾದ ದಿನದಿಂದ ತುಂಬಿ ತುಳುಕಿದ ಬಸ್​ಗಳು ಈಗಲೂ ರಶ್ ಆಗಿಯೇ ಓಡಾಡ್ತಿವೆ. ನಿತ್ಯ ಪ್ರಯಾಣಿಕರ ಗೋಳಾಟ, ನಿರ್ವಾಹಕರ ಪರದಾಟ, ಗದ್ದಲ, ಗೊಂದಲ, ಗಲಾಟೆಗಳು ಸಾರಿಗೆ ಸಂಸ್ಥೆಗೆ ತಲೆನೋವು ತರಿಸಿದೆ. ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ಅಶ್ವಮೇಧಯಾಗ ಶುರುಮಾಡಿದೆ.

ವಿಧಾನಸೌಧದ ಮುಂಭಾಗದ ನೂರು ಬಸ್​ಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಹಸಿರು ನಿಶಾನೆ ತೋರಿದ್ರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ‌ ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್ ಶ್ರೀನಿವಾಸ್ ಸಾಥ್ ನೀಡಿದ್ರು.

ಇನ್ನೂ ಈ ಹೊಚ್ಚ ಹೊಸ ನೂರು ಬಸ್ಸುಗಳಿಗೆ ಇಂದು ಚಾಲನೆ ಸಿಕ್ಕಿದೆ. ಹಾಗಾದ್ರೆ ಈ ಅಶ್ವಮೇಧ ಬಸ್ಸಿನ ವಿಶೇಷತೆ ಏನು ಅಂತಾ ನೋಡೋದಾದ್ರೆ.

  • ಹಿಂದಿನ ಹಾಗೂ ಮುಂದಿನ ಗ್ಲಾಸ್ ಗಳು ತುಂಬಾ ದೊಡ್ಡದಿದೆ
  • ಗುಣಮಟ್ಟದ ಕುಷನ್ ಹಾಗೂ ರೆಕ್ಸಿನ್ ಒಳಗೊಂಡ 52 ಸೀಟ್ ವ್ಯವಸ್ಥೆ
  • ಬಸ್ ನಲ್ಲಿ ಮೊಬೈಲ್ ಚಾರ್ಜ್ ಮಾಡಲು 6 ಪಾಯಿಂಟ್ ಅಳವಡಿಕೆ
  • ಬಸ್ ವಿಂಡೋ ಪ್ರೇಮ್ ಹಾಗೂ ಗ್ಲಾಸ್ ಸಾಮಾನ್ಯ ಸಾರಿಗೆ ಬಸ್ ಕ್ಕಿಂತ ದೊಡ್ಡದಿದೆ
  • ಪ್ರಯಾಣಿಕರು ನಿಂತಾಗ ಆಧಾರಕ್ಕೆ ಎರಡು ಸಾಲು ಗ್ರಾಬ್ ರೈಲ್ ಅಳವಡಿಕೆ
  • ಬಸ್ ಹಿಂದೆ ಹಾಗೂ ಮುಂದೆ ಎಲ್ಇಡಿ ಮಾರ್ಗಫಲಕ‌ ಅಳವಡಿಕೆ
  • ಬಸ್ ಮುಂದೆ ಹಾಗೂ ಹಿಂದೆ ಎರಡು ಹೈ ಕ್ವಾಲಿಟಿ ಕ್ಯಾಮರ ಅಳವಡಿಕೆ
  • ಜಿಪಿಎಸ್ ಟ್ರ್ಯಾಂಕಿಗ್ ಹಾಗೂ ಪ್ರಯಾಣಿಕರಿಗಾಗಿ ಪ್ಯಾನಿಕ್ ಬಟನ್ ಅಳವಡಿಕೆ
  • ಮುಂದಿನ ನಿಲ್ದಾಣ ಮಾಹಿತಿ ನೀಡುವ ಧ್ವನಿವರ್ಧಕ ಅಳವಡಿಕೆ
  • ಗಾಟ್ ನ ತಿರುವುಗಳಲ್ಲಿ ಬಸ್ ಸ್ವಯಂಚಾಲಿತ ಬ್ರೇಕ್ ಕಂಟ್ರೋಲ್ ವ್ಯವಸ್ಥೆ

ಮೂರು ತಿಂಗಳಲ್ಲಿ 140 ಬಸ್

ಸದ್ಯ 100 ಬಸ್ಸಗಳಿಗೆ ಚಾಲನೆ ಸಿಕ್ಕಿದೆ. ಮುಂದಿನ ಎರಡು ತಿಂಗಳೊಳಗಾಗಿ ಎಲ್ಲಾ ಬಸ್ಸುಗಳನ್ನ ರಸ್ತೆಗಿಳಿಸಲು ಪ್ಲಾನ್ ಆಗಿದೆ. ಇದರ ಮಧ್ಯೆ 100 ಪಲ್ಲಕ್ಕಿ ಬಸ್, 20 ಐರಾವತ, ರಾಜಹಂಸ ಡಬಲ್ ಡಕ್ಕರ್ ಬಸ್ಸನ್ನು ಒಳಗೊಂಡಂತೆ 140 ಬಸ್​ಗಳನ್ನ ಮುಂದಿನ ಮೂರು ತಿಂಗಳಲ್ಲಿ ಬರುತ್ತೆವೆ ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments