Sunday, August 24, 2025
Google search engine
HomeUncategorizedPowertv Impact: ಬಿಟ್ ಕಾಯಿನ್ ಹಗರಣದಲ್ಲಿ ಇಬ್ಬರು ಪೊಲೀಸರ ಬಂಧನ!

Powertv Impact: ಬಿಟ್ ಕಾಯಿನ್ ಹಗರಣದಲ್ಲಿ ಇಬ್ಬರು ಪೊಲೀಸರ ಬಂಧನ!

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತನಿಖೆ ನಡೆಸುತ್ತಿರುವ ಎಸ್​ಐಟಿ ವಿಚಾರಣೆಗೆ ಕರೆದವರನ್ನೆಲ್ಲಾ ನಿನ್ನೆ ವಶಕ್ಕೆ ಪಡೆದಿತ್ತು. ಈ ಪೈಕಿ ಇಬ್ಬರು ಪೊಲೀಸರಿದ್ದರು ಎಂದು ತಿಳಿದುಬಂದಿದೆ.

ಪೊಲೀಸ್ ಇನ್ಸ್​ಪೆಕ್ಟರ್​​ ಪ್ರಶಾಂತ್ ಬಾಬು ಹಾಗೂ ಸೈಬರ್ ಎಕ್ಸ್​​ಪರ್ಟ್ ಸಂತೋಷ್ ಎಂಬವರನ್ನು ನಿನ್ನೆ ವಶಕ್ಕೆ ಪಡೆಯಲಾಗಿದ್ದು, ಇಂದು ಮಧ್ಯಾಹ್ನ ಮೂರು ಘಂಟೆಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಎಸ್​ಐಟಿ ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ:ನಿವೃತ್ತಿಯಾದರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದ 2000 IAS, KAS ಅಧಿಕಾರಿಗಳಿಗೆ ಗೇಟ್ ಪಾಸ್​!

ಎಸ್ಐಟಿ ರಚನೆಯಾಗಿ ಆರು ತಿಂಗಳು ಕಳೆದಿದ್ದರೂ ಇದುವರೆಗೆ ಯಾರನ್ನೂ ಅರೆಸ್ಟ್ ಮಾಡಿರಲಿಲ್ಲ. ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಅರೋಪ ಮಾಡಿತ್ತು. ಆದರೆ ಈಗ ತನಿಖೆ ವೇಳೆ ಕೇವಲ ಮೂರೂವರೆ ಲಕ್ಷ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆಯಾಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಒಂದೇ ಒಂದು ಬಿಟ್ ಕಾಯಿನ್​ನ್ನು ಎಸ್​ಐಟಿ ವಶಕ್ಕೆ ಪಡೆದುಕೊಂಡಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments