Wednesday, August 27, 2025
Google search engine
HomeUncategorizedಎಲ್ಲೆಂದರಲ್ಲಿ ನಿದ್ದೆಗೆ ಜಾರುವುದು ಸಿದ್ದುಗೆ 'ಸಿದ್ದಿ'ಸಿದೆ : ಬಿಜೆಪಿ ಲೇವಡಿ

ಎಲ್ಲೆಂದರಲ್ಲಿ ನಿದ್ದೆಗೆ ಜಾರುವುದು ಸಿದ್ದುಗೆ ‘ಸಿದ್ದಿ’ಸಿದೆ : ಬಿಜೆಪಿ ಲೇವಡಿ

ಬೆಂಗಳೂರು : ಗಾಢ ನಿದ್ರೆಯೇ ಪ್ರಧಾನಿ ಮೋದಿಯವರ ಮಂತ್ರ ಎಂದು ಹಾಸ್ಯ ಭರಿತ ಪೋಸ್ಟರ್​ ಮೂಲಕ ಲೇವಡಿ ಮಾಡಿದ್ದ ಸಿಎಂ ಸಿದ್ದರಾಮಯ್ಯರಿಗೆ ಬಿಜೆಪಿ ಟಾಂಗ್ ಕೊಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿಗಳನ್ನು ಸೃಷ್ಟಿಸುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿಯೇ ‘ಸಿದ್ದಿ’ಸಿದೆ ಎಂದು ಕುಟುಕಿದೆ.

ನಕಲಿ ಸುದ್ದಿಗಳನ್ನು ರಚಿಸುತ್ತಾ ಕಾಲಹರಣ ಮಾಡುವ ಬದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಯೋಚಿಸಿದ್ದರೆ, ರೈತರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ. ಮಹಿಳೆಯರ ಮೇಲೆ ಹಲ್ಲೆ, ಮಾನಭಂಗಗಳು ನಡೆಯುತ್ತಿರಲಿಲ್ಲ ಎಂದು ಛೇಡಿಸಿದೆ.

ಸದಾ ನಿದ್ದೆಗೆ ಜಾರುವುದು ನೀವು

ಎಲ್ಲೆಂದರಲ್ಲಿ ಸದಾ ನಿದ್ದೆಗೆ ಜಾರುವುದು ನೀವು ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿ ಮೋದಿಯವರನ್ನು ಅವಹೇಳನ ಮಾಡಿದರೆ ಜನ ನಂಬುತ್ತಾರೆ ಎಂಬ ಭ್ರಮೆಯಿಂದ ಆದಷ್ಟು ಬೇಗ ಹೊರ ಬನ್ನಿ. ಸರ್ಕಾರವನ್ನು ಪ್ರಧಾನಿ ಮೋದಿ ಮಾದರಿಯಲ್ಲಿ ಮುನ್ನಡೆಸಿ ಜನರ ಸಮಸ್ಯೆಯನ್ನು ಬಗೆಹರಿಸಿ ಎಂದು ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದೆ‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments