Thursday, August 28, 2025
HomeUncategorizedನಮ್ಮ ಮೆಟ್ರೋಗೆ ಪೂರ್ಣಾವಧಿ MD ನೇಮಕ

ನಮ್ಮ ಮೆಟ್ರೋಗೆ ಪೂರ್ಣಾವಧಿ MD ನೇಮಕ

ಬೆಂಗಳೂರು : ನಮ್ಮ ಮೆಟ್ರೋ ನೂತನ ಆಡಳಿತ ನಿರ್ದೇಶಕರಾಗಿ ಮಹೇಶ್ವರ ರಾವ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಇವರು BMRCLಗೆ ಪೂರ್ಣಾವಧಿ ಎಂ.ಡಿ. ಆಗಿದ್ದಾರೆ. ನಮ್ಮ ಮೆಟ್ರೋ ಫೇಸ್‌ 2 ಕಾಮಗಾರಿಗಳು ವಿಳಂಬವಾಗುತ್ತಿವೆ. ಇದಕ್ಕೆ ಪೂರ್ಣಾವಧಿ ಎಂ.ಡಿ. ಇಲ್ಲದೇ ಇರುವುದೇ ಕಾರಣ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಆರೋಪಿಸಿದ್ದರು. ಅವರ ಮನವಿ ಮೇರೆಗೆ ಇದೀಗ ಪೂರ್ಣಾವಧಿ ಎಂ.ಡಿ. ನೇಮಕ ಮಾಡಲಾಗಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಮ್ಮ ಮೆಟ್ರೋ ನೂತನ ಆಡಳಿತ ನಿರ್ದೇಶಕರಾಗಿ ಮಹೇಶ್ವರ್ ರಾವ್​ ಅವರನ್ನು ನೇಮಕ ಮಾಡಿದೆ.ಅಲ್ಲದೆ, ಕೇಂದ್ರದ ಒಪ್ಪಿಗೆಯಿಲ್ಲದೆ BMRCL ಎಂಡಿಗೆ ಹೆಚ್ಚುವರಿ ಹುದ್ದೆ ನೀಡುವಂತಿಲ್ಲ ಅಂತ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಸಂಸದ ತೇಜಸ್ವಿ ಸೂರ್ಯ ಸಂತಸ

ನಮ್ಮ ಮೆಟ್ರೋಗೆ ಪೂರ್ಣ ಪ್ರಮಾಣದ ಎಂ.ಡಿಯನ್ನು ಪಡೆಯಲಾಗಿದೆ. ನಗರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತವಾಗಿ ನೇಮಕ ಮಾಡಿದಕ್ಕಾಗಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಗೆ ಧನ್ಯವಾದ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಪೂರ್ಣ ಸಮಯದ ನಿರ್ದೇಶಕರ ನೇಮಕದೊಂದಿಗೆ, ನಮ್ಮ ನಗರದ ಉನ್ನತ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳು ಅವರ ಗಮನಕ್ಕೆ ಬರುತ್ತವೆಂದು ನಾವು ಭಾವಿಸುತ್ತೇವೆ ಎಂದು ಟ್ವೀಟ್‌ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments