Sunday, August 24, 2025
Google search engine
HomeUncategorizedಇಂದಿನ ರಾಶಿ ಭವಿಷ್ಯ: ಅನಗತ್ಯವಾಗಿ ಇತರರ ಬಗ್ಗೆ ಚರ್ಚೆ ಬೇಡ ಎಚ್ಚರಿಕೆ!

ಇಂದಿನ ರಾಶಿ ಭವಿಷ್ಯ: ಅನಗತ್ಯವಾಗಿ ಇತರರ ಬಗ್ಗೆ ಚರ್ಚೆ ಬೇಡ ಎಚ್ಚರಿಕೆ!

ಜನವರಿ ಮಾಸದ 8ನೇ ತಾರೀಖಿನಂದು ಇಂದಿನ ರಾಶಿಫಲಗಳ ದಿನಭವಿಷ್ಯ ಯಾವರೀತಿ ಇದೆ? ಯಾವ ರಾಶಿಯವರಿಗೆ ಶುಭ ಮತ್ತು ಯಾರಿಗೆ ಅಶುಭ? ಇಂದು ಯಾವ ಯಾವ ರಾಶಿಯವರಿಗೆ ಯಾವ ಸಂಖ್ಯೆ ಅದೃಷ್ಟ ತರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಷ: ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಹಣಗಳಿಸುವ ವಿವಿಧ ಮಾರ್ಗಗಳು ಪುಷ್ಟಿ ನೀಡಲಿವೆ. ಅನಗತ್ಯವಾಗಿ ಇತರರ ಬಗ್ಗೆ ಮನೆಯಲ್ಲಿ ಚರ್ಚಿಸುವುದು ಬೇಡ, ಮನೆಯ ವಾತಾವರಣ ಕೆಡುವ ಸಾಧ್ಯತೆ ಇದೆ .ಉದ್ಯೋಗ ಹಾಗೂ ಆರೋಗ್ಯದಲ್ಲಿ ಸಾಧಾರಣ ಫಲ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9

ವೃಷಭ: ಗತಿಸಿದ ಘಟನೆಗಳ ಬಗ್ಗೆ ಚಿಂತಿಸಿ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ.ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ. ಭೂಮಿ, ಆಸ್ತಿ ಖರೀದಿ ವ್ಯವಹಾರದಲ್ಲಿ ದಿನದ ಮಟ್ಟಿಗೆ ತೊಡಗುವುದು ಬೇಡ. ಖರ್ಚು ಹೆಚ್ಚಾಗಲಿದೆ. ಆರೋಗ್ಯ ಹಾಗೂ ಉದ್ಯೋಗದಲ್ಲಿ ಸಾಧಾರಣ ಫಲ.ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

ಮಿಥುನ: ಅನಿವಾರ್ಯವಾಗಿ ಖರ್ಚು, ಪ್ರಯಾಣ ಮಾಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಯಾವುದೋ ವಿಷಯಕ್ಕೆ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ.ತಾಳ್ಮೆಯಿಂದ ವರ್ತಿಸಿ.ಅರ್ಹ ನೌಕರರಿಗೆ ಇಂದು ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶ ಕೂಡಿಬರಲಿದೆ.ಆರೋಗ್ಯ ಉತ್ತಮ, ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 6

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಸಿಎಂ ಗೆ ಆಹ್ವಾನ ಇಲ್ಲ, ಡಿಸಿಎಂ ಗೆ ಎಲ್ಲಿಂದ ಕೊಡೋದು: ಆರ್​.ಅಶೋಕ್​

ಕಟಕ: ಅತಿಯಾದ ಉತ್ಸಾಹದಲ್ಲಿ ಅತಿರೇಕದ ಮಾತುಗಳು ಬೇಡ, ಭಾವನೆಗಳನ್ನು ನಿಯಂತ್ರಿಸಿ. ಹಣಕಾಸು ಪ್ರಗತಿ ಸಾಧಾರಣವಾಗಿರಲಿದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಗೊತ್ತಿಲ್ಲದಂತೆ ಸಮಯ ವ್ಯರ್ಥವಾಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಮಿಶ್ರಫಲ.
ಅದೃಷ್ಟ ಸಂಖ್ಯೆ: 6

ಸಿಂಹ: ಆರ್ಥಿಕ ಸಮಸ್ಯೆಯಿಂದಾಗಿ ಒತ್ತಡ ಹೆಚ್ಚಾಗಲಿದೆ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲ, ಸ್ನೇಹ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರುವುದು. ವ್ಯಾಪಾರ-ವ್ಯವಹಾರದಲ್ಲಿ ಸಾಧಾರಣ ಪ್ರಗತಿಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

ಕನ್ಯಾ: ಸಕಾರಾತ್ಮಕ ಆಲೋಚನೆಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಅನಿವಾರ್ಯ ಕಾರಣಗಳಿಂದ ಖರ್ಚು ಹೆಚ್ಚಾಗಲಿದೆ. ಮನೆಯ ಸದಸ್ಯರ ವರ್ತನೆ ನಿಮ್ಮನ್ನು ಮಾನಸಿಕವಾಗಿ ತೊಂದರೆಗಳಾಗುವಂತೆ ಮಾಡುವ ಸಾಧ್ಯತೆ ಇದೆ. ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ತುಲಾ: ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳು ನಿಧಾನವಾಗಲಿದೆ. ತಾಳ್ಮೆಯಿಂದ ವರ್ತಿಸಿ, ನೆರೆಹೊರೆಯವರೊಂದಿಗೆ ವಿನಾಕಾರಣ ಜಗಳ ಮಾಡುವುದು ಬೇಡ. ಉದ್ಯೋಗಿಗಳಿಗೆ ಶುಭಫಲ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 5

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ರಾಮಮಂದಿರ ಲೋಕಾರ್ಪಣೆ: ದೆಹಲಿಯಾದ್ಯಂತ ದೇಗುಲಗಳಲ್ಲಿ ನೇರಪ್ರಸಾರ

ವೃಶ್ಚಿಕ: ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತ ಸಂಭವ. ಅವಸರದಲ್ಲಿ ಕೆಲಸ ಮಾಡುವುದು ಬೇಡ.ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ದಿಡೀರ್ ಪ್ರಯಾಣ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.
ಅದೃಷ್ಟ ಸಂಖ್ಯೆ: 2

ಧನಸ್ಸು: ಪ್ರಯತ್ನದಲ್ಲಿ ನಂಬಿಕೆ ಇಟ್ಟು ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಸಿಗಲಿದೆ.ಆರ್ಥಿಕವಾಗಿ ಲಾಭ.ಸಮಾರಂಭಗಳಲ್ಲಿ ಭಾಗವಹಿಸುವ ನಿರೀಕ್ಷೆ.ಜನಪ್ರೀಯತೆ ಹೆಚ್ಚಾಗಲಿದೆ.ಪ್ರವಾಸದ ಕುರಿತು ಚರ್ಚೆ. ಕುಟುಂಬದವರ ಸಹಕಾರ ಸಿಗಲಿದೆ. ಕೊಂಚ ಆರೋಗ್ಯದ ಕಡೆಗೆ ಗಮನ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 7

ಮಕರ: ದಿನದ ಮಟ್ಟಿಗೆ ಅನಿವಾರ್ಯ ಕಾರಣಗಳಿಂದ ಖರ್ಚು. ಆರೋಗ್ಯ ಮಧ್ಯಮ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ. ಮಾತಿನ ಭರದಲ್ಲಿ ಅತಿರೇಕದ ಮಾತುಗಳು ಬೇಡ,ತಾಳ್ಮೆಯಿಂದ ವರ್ತಿಸಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಕುಂಭ: ವಾಹನ ಚಾಲನೆ ಮಾಡುವಾಗ ಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತ ಆಗಬಹುದು. ಅವಸರದಲ್ಲಿ ಕೆಲಸ ಮಾಡುವುದು ಬೇಡ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಸಾಧಾರಣ ಫಲ. ಕೌಟುಂಬಿಕವಾಗಿ ಕನಿಷ್ಠ ಫಲ.
ಅದೃಷ್ಟ ಸಂಖ್ಯೆ: 2

ಮೀನ: ಅನಿವಾರ್ಯ ಪ್ರಸಂಗಗಳು ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಬಹುದು. ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ. ಆರೋಗ್ಯ ಪರಿಪೂರ್ಣ.ಆರ್ಥಿಕವಾಗಿ ಪ್ರಗತಿ, ಹೂಡಿಕೆಯ ಕುರಿತು ಆಲೋಚನೆ. ಹೊಸ ಸ್ನೇಹಿತರ ಪರಿಚಯವಾಗಲಿದೆ. ಉದ್ಯೋಗದ ಕುರಿತು ಆಲೋಚನೆ. ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 4

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments