Monday, August 25, 2025
Google search engine
HomeUncategorizedಪೈಂಟ್‌ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆಯ ತಲೆ ಕಟ್‌

ಪೈಂಟ್‌ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆಯ ತಲೆ ಕಟ್‌

ಬೆಂಗಳೂರು: ಕೆಲಸಕ್ಕಾಗಿ ಉದ್ಯಮಕ್ಕೆ ಹೋಗುವ ಹೆಣ್ಣುಮಕ್ಕಳು ಎಷ್ಟೇ ಕಾಳಜಿಯಿಂದ ಎಚ್ಚರ ವಹಿಸಿ ಕೆಲಸ ಮಾಡಿದರು ಸಾಕಾಗುವುದಿಲ್ಲ. ಅವರು ಧರಿಸುವ ಬಟ್ಟೆ, ತಲೆ ಕೂದಲು, ವೇಲುಗಳೇ ಅವರಿಗೆ ಅಪಾಯ ತಂದು ಅವರ ಸಾವಿಗೂ ಕಾರಣವಾಗಬಹುದು.

ಹೌದು, ರಾಜ್ಯದ ರಾಜಧಾನಿ ಬೆಂಗಳೂರಿನ ಒಂದು ಕಾರ್ಖಾನೆಯಲ್ಲಿ ಅಂತಹುದೇ ಘಟನೆ ನಡೆದಿದೆ. ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್ ಗೆ (Paint Mixer) ಕೂದಲು ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ನೆಲಗದರನಹಳ್ಳಿಯ ಶ್ರೀ ಪೇಯಿಂಟ್ಸ್ ಕಾರ್ಖಾನೆಯಲ್ಲಿ (Sri Paints Factory) ಇಂತಹ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಶ್ವೇತಾ (34) ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇದೊಂದು ಪೈಂಟ್‌ ಮಿಕ್ಸಿಂಗ್‌ ಕಾರ್ಖಾನೆಯಾಗಿದ್ದು, ಇಲ್ಲಿ ಒಂದು ಗ್ರೈಂಡರ್‌ನಲ್ಲಿ ಪೌಡರ್‌ ಮತ್ತು ಇತರ ಸಾಮಗ್ರಿಗಳನ್ನು ಹಾಕಿ ಬಣ್ಣವನ್ನು ತಯಾರಿಸಲಾಗುತ್ತದೆ.

ಘಟನೆ ವಿವರ

ಗ್ರೈಂಡರ್‌ನ ಒಳಗೆ ಬಣ್ಣ ಗಟ್ಟಿಯಾಗಿತ್ತು. ಅದನ್ನು ಚೆಕ್‌ ಮಾಡಲೆಂದು ಒಳಗೆ ಬಗ್ಗಿದಾಗ ಒಮ್ಮೆಗೇ ತಲೆಕೂದಲು ಸಿಕ್ಕಿಹಾಕಿಕೊಂಡಿದೆ. ಆಗ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ, ಗ್ರೈಂಡರ್‌ ಸದ್ದಿನಿಂದಾಗಿ ಅವರ ಕೂಗು ಯಾರಿಗೂ ಕೇಳಿಸಲಿಲ್ಲ. ಕೊನೆಗೆ ಉಳಿದ ಕೆಲಸಗಾರರು ಬಂದು ನೋಡಿದಾಗ ಶ್ವೇತಾ ಸತ್ತುಬಿದ್ದಿದ್ದು ಕಂಡುಬಂತು.

ತಲೆಕೂದಲು ಸಿಕ್ಕಿಕೊಂಡ ಬಳಿಕ ಬ್ಲೇಡ್‌ಗಳು ಆಕೆಯ ಕೊರಳನ್ನೇ ಕತ್ತರಿಸಿದ್ದವು. ಆಗ ಆಕೆ ಹೊರಕ್ಕೆ ಎಸೆಯಲ್ಪಟ್ಟರು.

ಶ್ವೇತಾ ಅವರು ತಮ್ಮ ಗಂಡ ಮತ್ತು ಮಗನ ಜೊತೆ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಪ್ರಕರಣಕ್ಕೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments