Monday, September 8, 2025
HomeUncategorizedಈ ಸರ್ಕಾರ ಐದು ವರ್ಷ ನಡೀಬೇಕು : ಸಿ.ಟಿ. ರವಿ

ಈ ಸರ್ಕಾರ ಐದು ವರ್ಷ ನಡೀಬೇಕು : ಸಿ.ಟಿ. ರವಿ

ಮೈಸೂರು : ನನ್ನ ಅಪೇಕ್ಷೆ ಇದೇ.. ಈ ಸರ್ಕಾರ ಐದು ವರ್ಷ ನಡೀಬೇಕು. ಕಾಂಗ್ರೆಸ್​ನ ಅಲ್ಲಾಡಿಸೋ ತಾಕತ್ತು ಯಾರಿಗಿದೆ? ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣೆ ನಂತರ ಶಾಸಕರ ಅಸಹನೆ ಆಕ್ರೋಶ ಯಾವ ರೂಪಕ್ಕೆ ಹೋಗುತ್ತೆ ನೀವೇ ತೋರಿಸುತ್ತೀರಿ ಎಂದು ಮಾಧ್ಯಮಗಳ ಕಡೆ ಬೊಟ್ಟು ಮಾಡಿದರು.

ಎರಡು ತಿಂಗಳಿಗೆ ಹಿರಿಯ ಶಾಸಕರು ಪತ್ರ ಬರೀತಾರೆ ಅಂದ್ರೆ ಏನು? ಎಲ್ಲವೂ ಸರಿಯಿದ್ರೆ ಯಾಕೆ ಹೊರಗೆ ಬರತ್ತೆ? ಅವರು ಪತ್ರ ಬರೆದ ನಂತರ ಶಾಸಕರ ಸಭೆ ನಡೆಸಿದ್ರು. ಒಳಗೆ ಎಲ್ಲವೂ ಸರಿಯಿಲ್ಲ. ಇನ್ನು ಮೂರೇ ತಿಂಗಳು ಅಷ್ಟೇ ಪಾರ್ಲಿಮೆಂಟ್ ಚುನವಣೆ ನಂತರ ಏನಾಗತ್ತೆ ನೋಡ್ತೀರಿ. ನನ್ನ ಅಪೇಕ್ಷೆ ಇದೇ ಈ ಸರ್ಕಾರ ಐದು ವರ್ಷ ನಡೀಬೇಕು ಎಂದು ಗೊಂದಲದ ಹೇಳಿಕೆ ನೀಡಿದರು.

ವಿಪಕ್ಷ ಸ್ಥಾನಕ್ಕೆ ಸಿ.ಟಿ. ರವಿ ಅಂತಿರಾ?

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಆ ರೇಸ್​ನಲ್ಲಿ ಇಲ್ಲ. ಮಾಧ್ಯಮದವರು ಮುಖ್ಯಮಂತ್ರಿ ರೇಸ್​ನಲ್ಲಿ ಸಿ.ಟಿ. ರವಿ, ವಿಪಕ್ಷ ನಾಯಕನ ರೇಸ್​ನಲ್ಲಿ ಸಿ.ಟಿ. ರವಿ ಅಂತ ಹೇಳ್ತೀರಾ. ಈಗ ವಿಪಕ್ಷ ಸ್ಥಾನಕ್ಕೆ ಸಿ.ಟಿ. ರವಿ ಅಂತ ಹೇಳೋಕೆ ಆಗಲ್ಲ ಎಂದು ಕಾಲೆಳೆದರು.

ನಾನು ಪಕ್ಷದ ಕಾರ್ಯಕರ್ತ. ಪಕ್ಷ ಏನು ಹೇಳುತ್ತೋ ಅದನ್ನು ಮಾಡುತ್ತೇನೆ. ಪಕ್ಷ ಏನೇ ಕೆಲಸ ಕೊಟ್ರು ಮಾಡ್ತೀನಿ. ಕಾರ್ಯಕರ್ತನಾಗಿ ನನಗೆ ಬೇರೆ ದಾರಿ ಏನು ಇಲ್ಲ ಎಂದು ಜಾಣ್ಮೆಯ ನಡೆ ಪ್ರದರ್ಶಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments