Monday, September 8, 2025
HomeUncategorizedಇಂದಿನಿಂದ ಲಾಲ್​ ಭಾಗ್​ ನಲ್ಲಿ ಫಲಪುಷ್ಪ ಪ್ರದರ್ಶನ!

ಇಂದಿನಿಂದ ಲಾಲ್​ ಭಾಗ್​ ನಲ್ಲಿ ಫಲಪುಷ್ಪ ಪ್ರದರ್ಶನ!

ಬೆಂಗಳೂರು : ಲಾಲ್​ಬಾಗ್​ನಲ್ಲಿ ಇಂದಿನಿಂದ ಫ್ಲವರ್ ಶೋ ಆರಂಭವಾಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: ಲೋಕಸಭೆ: ಹೆಚ್ಚು ಸ್ಥಾನ ಗೆಲ್ಲಲು ರಾಜ್ಯದ ಸಂಸದರಿಗೆ ಮೋದಿ ಮಹತ್ವದ ಸಲಹೆ!

ಸ್ವಾತಂತ್ರ್ಯ ದಿನಾಚರಣೆ  ಪ್ರಯುಕ್ತ ಆಯೋಜನೆ ಮಾಡಿರುವ 214ನೇ ಫಲಪುಷ್ಪ ಪ್ರದರ್ಶನವು ಆಗಸ್ಟ್​ 4 ರಿಂದ ಆ.15ರ ವರೆಗೆ ನಡೆಯಲಿದ್ದು ಎರಡು ಕೋಟಿ ವೆಚ್ಚದಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ, ಈ ಫಲಪುಷ್ಪ ಪ್ರದರ್ಶನಲ್ಲಿ ಈ ಬಾರಿ ಕೆಂಗಲ್​ ಹನುಮಂತಯ್ಯ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಥೀಮ್ ನೊಂದಿಗೆ ಹೂವಿನ ಅಲಂಕಾರಗಳು ನೋಡುಗರ ಕಣ್ಮನ ಸೆಳೆಯಲು ನಡೆಯಲಿದೆ.​​​​

ಲಾಲ್​ ಭಾಗ್​ ನಲ್ಲಿ ನಡೆಯಲಿರುವ 214 ನೇ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ರಾಜ್ಯಗಳ ವಿವಿಧ ಮಾದರಿಯ ಹೂಗಳ ಪ್ರದರ್ಶನಕ್ಕೆ ಇಡಲಾಗಿದೆ, ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಆಗಮಿಸುವವರಿಗೆ ದರ ನಿಗದಿಪಡಿಸಿದ್ದು ವಯಸ್ಕರಿಗೆ 70 ರೂಪಾಯಿ, ವಾರಾಂತ್ಯದಲ್ಲಿ ವೀಕ್ಷಣೆಗೆ ಬರುವವರಿಗೆ 80 ರೂಪಾಯಿ ಟಿಕೆಟ್ ದರ ನಿಗಧಿ ಪಡಿಸಲಾಗಿದೆ, ಇನ್ನು, 12 ವರ್ಷದೊಳಗಿನ ಮಕ್ಕಳಿಗೆ 30 ರೂ. ದರ ನಿಗದಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments