Saturday, August 23, 2025
Google search engine
HomeUncategorizedಸಭೆ ಕರೆದವರು ಟೈಮ್ ಸರಿಯಾಗಿ ಬರಬೇಕು, ಜವಾಬ್ದಾರಿ ಇರಬೇಕು : ಅಶ್ವತ್ಥನಾರಾಯಣ ಕಿಡಿ

ಸಭೆ ಕರೆದವರು ಟೈಮ್ ಸರಿಯಾಗಿ ಬರಬೇಕು, ಜವಾಬ್ದಾರಿ ಇರಬೇಕು : ಅಶ್ವತ್ಥನಾರಾಯಣ ಕಿಡಿ

ಬೆಂಗಳೂರು : ಸಭೆ ಕರೆದವರು ಸರಿಯಾದ ಸಮಯಕ್ಕೆ ಬರಬೇಕು. ಜವಾಬ್ದಾರಿ ಇರುವುದಕ್ಕೆ ನಾವು ಬಂದಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಟಚಾರಕ್ಕೆ ಸಭೆ ಕರೆದಿದ್ದಾರೆ. ಬೇಜವಾಬ್ದಾರಿಯಿಂದ ಸರಿಯಾದ ಸಮಯಕ್ಕೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ಸಭೆಗೆ ಕರೆದರು ಬಾರದ ಡಿ.ಕೆ ಶಿವಕುಮಾರ್. ಬೆಂಗಳೂರಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಸಲುವಾಗಿ ಸಭೆ ಕರೆಯಲಾಗಿತ್ತು. ನಮಗೆ ಸಭೆಗೆ ಕರೆದು ಒಂದು ಗಂಟೆಯಿಂದ ಡಿ.ಕೆ ಶಿವಕುಮಾರ್ ಕಾಯಿಸಿದ್ದಾರೆ. ಸಭೆಗೆ ತಡವಾಗಿ ಆಗಮಿಸಿದ್ದಾರೆ. ತಡವಾಗಿ ಆಗಮಿಸುವ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಬೇಸರಿಸಿದ್ದಾರೆ.

ಇದು ಬಾಯ್ಕಟ್ಟ ಅಲ್ಲಾ..!

ನಿನ್ನೆ ಸಂಜೆ ವಾಟ್ಸಪ್ ಮೂಲಕ ಸಭೆಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಅವರ ನಡವಳಿಕೆ ಪ್ರದರ್ಶಿಸಿದ್ದಾರೆ. ಹೀಗಾಗಿ, ಸಭೆಯಿಂದ ನಿರ್ಗಮಿಸುತ್ತಿದ್ದೇವೆ. ಇದು ಬಾಯ್ಕಟ್ಟ ಅಲ್ಲಾ. ಸಮಯಕ್ಕೆ ಸರಿಯಾಗಿ ಮೀಟಿಂಗ್ ಮಾಡಿ ಮಿಸ್ಟರ್ ಡಿಸಿಎಂ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ : ಯಾರ ಹೊಟ್ಟೆ ತುಂಬಿಸಲು ಗೋವುಗಳನ್ನು ಕಡಿಯಲು ಪ್ರೇರಣೆ ನೀಡ್ತಿದ್ದೀರಿ? : ಪ್ರಭು ಚೌಹಾಣ್ ಪ್ರಶ್ನೆ

ನಾವು ಮಂತ್ರಿಗಳಾಗಿ ಕೆಲಸ ಮಾಡಿದ್ವಿ

ಶಾಸಕ ಭೈರತಿ ಬಸವರಾಜ ಮಾತನಾಡಿ, ಸಭೆ ಒಂದು ಗಂಟೆ ತಡವಾಗಿದೆ, ನಾವು ಸಹ ಮಂತ್ರಿಗಳಾಗಿ ಕೆಲಸ ಮಾಡಿದವರು. ಅವರು ಹೇಳಿದ ಸಮಯಕ್ಕೆ ಬಂದಿದ್ದೇವೆ. ನಾವು ಸರಿಯಾದ ಸಮಯಕ್ಕೆ ಬಂದಿದ್ದೇವೆ. ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಬಂದಿದ್ದೇವೆ ಎಂದು ಹೇಳಿದ್ದಾರೆ.

ಕಾದು ಕಾದು ಹೊರ ನಡೆದ ಶಾಸಕರು

ಉಪಮುಖ್ಯಮಂತ್ರಿ ಡಿ.ಕೆ‌ ಶಿವಕುಮಾರ್ ತಡವಾಗಿ ಸಭೆಗೆ ಆಗಮಿಸಿದರು. ಹೀಗಾಗಿ, ಕಾದು ಕಾದು ಬೇಸರಗೊಂಡ ಬಿಜೆಪಿ ಶಾಸಕರು ಸಭೆಯಿಂದ ಹೊರ ನಡೆದರು. ಭೈರತಿ ಬಸವರಾಜ, ಎಸ್.ಟಿ ಸೋಮಶೇಖರ್, ಅಶ್ವತ್ಥನಾರಾಯಣ ಸೇರಿ ಹಲವು ಬಿಜೆಪಿ ನಾಯಕರು ಸಭೆಯಿಂದ ಹಿಂದಿರುಗಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments