Friday, September 12, 2025
HomeUncategorizedಬಿಜೆಪಿ ಅಧಿಕಾರಕ್ಕೆ SDPI, PFI'ಗೆ ಕುಮ್ಮಕ್ಕು, ಈ ಬಗ್ಗೆ ಧ್ವನಿ ಎತ್ತಿದ್ದೇನೆ: ಚಕ್ರವರ್ತಿ ಸೂಲಿಬೆಲೆ

ಬಿಜೆಪಿ ಅಧಿಕಾರಕ್ಕೆ SDPI, PFI’ಗೆ ಕುಮ್ಮಕ್ಕು, ಈ ಬಗ್ಗೆ ಧ್ವನಿ ಎತ್ತಿದ್ದೇನೆ: ಚಕ್ರವರ್ತಿ ಸೂಲಿಬೆಲೆ

ವಿಜಯಪುರ: ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆ ಬಗ್ಗೆ ಜೋರಾಗಿ ಧ್ವನಿ ಎತ್ತಿದ್ದೀನಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ನಾನೇ ಸಾವರ್ಕರ್ ಸಂವಾದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಗೆ ಬಿಜೆಪಿಯೇ ತಮ್ಮ ಅಧಿಕಾರಕ್ಕೆ ಎಸ್​ಡಿಪಿಐ, ​​ಪಿಎಫ್ಐಗೆ ಕುಮ್ಮಕ್ಕು ನೀಡಿ ಹಿಂದೂ ಕಾರ್ಯಕರ್ತ ಕೊಲೆ ಮಾಡಿಸ್ತಿದ್ದಾರೆ ಅನ್ನೋ ಅನುಮಾನ ಬರ್ತಿದೆ ಎಂದು ಸೂಲಿಬೆಲೆಗೆ ಪ್ರಶ್ನೆ ಮಾಡಿದ, ಈ ಕುರಿತು ಉತ್ತರಿಸಿದ ಸೂಲಿಬೆಲೆ, ಈ ಬಗ್ಗೆ ನಾನು
ಆಗಬೇಕಿರುವ ಬದಲಾವಣೆ ಬಗ್ಗೆ ನಿನಗಿಂತ ಜೋರಾಗಿ ಧ್ವನಿ ಎತ್ತಿದ್ದೀನಿ ಎಂದರು.

ನನ್ನ ಧನಿಯನ್ನ ಎಲ್ಲಿಗೆ ಮುಟ್ಟಿಸಬೇಕು ಅಲ್ಲಿಗೆ ಸಮರ್ಥವಾಗಿ ಮುಟ್ಟಿಸಿದ್ದೇನೆ. ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರದಲ್ಲಿ ಎಲ್ಲಿಗೆ ಧ್ವನಿ ತಲುಪಿಸಬೇಕೋ ಅಲ್ಲಿಗೆ ತಲುಪಿಸಿದ್ದೇನೆಂದ ಎಂದು ಸೂಲಿಬೆಲೆ ಹೇಳಿದರು.

ನೀವು ಬಿಜೆಪಿ ನಾಯಕರು ಬಂದಾಗ ಈ ಪ್ರಶ್ನೆ ಕೇಳಿ. ಇದಕ್ಕಿಂತ ಹೆಚ್ಚಿನ ಉತ್ತರ ನಾನು ಕೊಡಲಾಗಲ್ಲ. ಸಾವರ್ಕರ್ ನಿಂದಿಸುವವರ ವಿರುದ್ಧ ನಮ್ಮ ಹೋರಾಟ ಎನ್ನುವ ಚಿಂತನೆ ಇಟ್ಟುಕೊಂಡು ಹೋಗಬೇಕಿದೆ. ಸಾವರ್ಕರ್ ರನ್ನ ನಿಂದಿಸೋರು ಯಾವುದೇ ಪಕ್ಷ, ಯಾವುದೇ ಜಾತಿ, ಯಾವುದೇ ಧರ್ಮದವನಾದರು ಸಹಿಸಿಕೊಳ್ಳಲ್ಲ ಎಂದು ಸೂಲಿಬೆಲೆ ಮಾತನಾಡಿದರು.

RELATED ARTICLES
- Advertisment -
Google search engine

Most Popular

Recent Comments