Friday, August 29, 2025
HomeUncategorizedಜೀರ್ಣೋದ್ದಾರದ ನೆಪದಲ್ಲಿ ಶ್ರೀರಾಮುಲು ಯಡವಟ್ಟು ..?

ಜೀರ್ಣೋದ್ದಾರದ ನೆಪದಲ್ಲಿ ಶ್ರೀರಾಮುಲು ಯಡವಟ್ಟು ..?

ಕೊಪ್ಪಳ : ಜೀರ್ಣೋದ್ದಾರದ ನೆಪದಲ್ಲಿ ರಾಮಾಯಣದ ಕಥೆ ಹೇಳುವ ಸ್ಮಾರಕಗಳನ್ನು ಧ್ವಂಸ ಮಾಡುತ್ತಿರುವ ಪ್ರಕರಣ ಕೊಪ್ಪಳದ ಕಿಷ್ಕಿಂಧೆ ಪ್ರದೇಶ ಅಂದರೆ ಗಂಗಾವತಿ ತಾಲೂಕಿನ ಪಂಪಾ ಸರೋವರದ ಬಳಿ ಘಟನೆ ನಡೆದಿದೆ.

ರಾಮ- ಹನುಮಂತ ಭೇಟಿಯಾದ ಸ್ಥಳ, ಶಬರಿ ಗುಹೆ, ಮಹಾಲಕ್ಷ್ಮಿ ದೇವಾಲಯ, ಪಂಪಾಸರೋವರದ ಸುತ್ತಲೂ ಅನೇಕ ಪೌರಣಿಕ ಕುರುಹುಗಳಿವೆ. ಆದರೆ ಇದೀಗ ಬುಲ್ಡೋಜರ್ ಮೂಲಕ ಸ್ಮಾರಕಗಳನ್ನು ನೆಲಸಮ ಮಾಡಲಾಗುತ್ತಿದೆ. ಇನ್ನು ಈ ಕಾರ್ಯವನ್ನು ರಾಜ್ಯದ ಸಾರಿಗೆ ಸಚಿವರಾದ ಬಿ ಶ್ರೀರಾಮುಲು ಅವರು ಸ್ವತಃ ತಮ್ಮ ಖರ್ಚಿನಲ್ಲಿ ಜೀರ್ಣೋದ್ದಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ನೆಲಸಮಗೊಂಡಿರುವ ಸ್ಮಾರಕಗಳು ಹಂಪಿ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇವುಗಳು ಪಕ್ಕದಲ್ಲಿಯೇ ಅಂಜನಾದ್ರಿ ಬೆಟ್ಟ ಇವೆ. ಅಲ್ಲದೇ ಇಲ್ಲಿಯ ಜನರು ಶೌಚಾಲಯ ನಿರ್ಮಿಸಲು ಸಹ ಪ್ರಾಧಿಕಾರದಿಂದ ಪರವಾನಿಗೆ ಪಡೆಯಬೇಕು, ಆದರೆ ಇಲ್ಲಿ ಬೃಹತ್ ಯಂತ್ರಗಳ ಬಳಕೆ ಮಾಡಿ ಜೀರ್ಣೋದ್ಧಾರ ಕಾರ್ಯ ಮಾಡಲು ಕೈಗೊಂಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.‌

ಮೂಲಗಳ ಪ್ರಕಾರ ರಾಜ್ಯ ಪುರಾತತ್ವ ಇಲಾಖೆಯಿಂದ ಪರವಾನಿಗೆ ನೀಡಲಾಗಿದೆ ಎಂಬ ಮಾಹಿತಿ ಇದ್ದು, ಇವರಿಗೆ ಹೇಗೆ ಅನುಮತಿ ನೀಡಿದ್ದಾರೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ? ಸ್ಮಾರಕಗಳ ಮೂಲ ಸ್ವರೂಪವನ್ನು ಬದಲಾಯಿಸುತ್ತಿರುವುದಕ್ಕೆ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ,ಹಾಗು ಈ ಕೂಡಲೇ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯ ನಿಲ್ಲಿಸುವಂತೆ ಜನರು ಒತ್ತಾಯಿಸಿದ್ದಾರೆ‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments