Thursday, September 18, 2025
HomeUncategorizedಸಿಎಂ ಬಿ.ಎಸ್ ಯಡಿಯೂರಪ್ಪ  ಹುಚ್ಚಾಸ್ಪತ್ರೆಯ ಸ್ಪೆಷಲ್ ವಾರ್ಡ್ ನ ಪೇಷೆಂಟ್ : ವಾಟಾಳ್ ನಾಗರಾಜ್

ಸಿಎಂ ಬಿ.ಎಸ್ ಯಡಿಯೂರಪ್ಪ  ಹುಚ್ಚಾಸ್ಪತ್ರೆಯ ಸ್ಪೆಷಲ್ ವಾರ್ಡ್ ನ ಪೇಷೆಂಟ್ : ವಾಟಾಳ್ ನಾಗರಾಜ್

ರಾಮನಗರ: ಮರಾಠ ಪ್ರಾಧಿಕಾರ ರಚನೆ ಮಾಡಿರುವ ರಾಜ್ಯ ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿ ರಾಮನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದರು.

ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ಮಾಡಿದ ವಾಟಾಳ್ ನೇತೃತ್ವದ ತಂಡ ರಾಜ್ಯ ಸರ್ಕಾರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಇದೇ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯ ಸರ್ಕಾರಕ್ಕೆ ಬುದ್ಧಿ ಹಾಗೂ ತಲೆ ಎರಡು ಇಲ್ಲ. ಸಿಎಂ ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಸ್ಪೇಷಲ್ ವಾರ್ಡ್ ನಲ್ಲಿ ಇರಬೇಕಾಗಿತ್ತು. ಅದರ ಬದಲು ವಿಧಾನಸೌಧದಲ್ಲಿ ಯಡಿಯೂರಪ್ಪ ಇದ್ದಾರೆ. ವಿಧಾನಸೌಧ ಯಡಿಯೂರಪ್ಪಗೆ ಹುಚ್ಚಾಸ್ಪತ್ರೆಯಾಗಿದೆ. ಬಿಜೆಪಿ ಪಕ್ಷದಲ್ಲಿ ಎಲ್ಲರೂ ದಿಕ್ಕು ತಪ್ಪು ಹೋಗಿದ್ದಾರೆ. ಅತಿ ಹೀನಾಯವಾದ ಸರ್ಕಾರ ಯಡಿಯೂರಪ್ಪನ ಸರ್ಕಾರ. ಆಡಳಿತ ಸಂಪೂರ್ಣವಾಗಿ ಕುಲಗೆಟ್ಟು ಹೋಗಿದೆ. ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಸದಸ್ಯರನ್ನು ಪೌರಕಾರ್ಮಿಕರಿಗಿಂತ ಕೀಳಾಗಿ ನೋಡಲಾಗುತ್ತಿದೆ ಎಂದು ಆರೋಪಿಸಿದರು.

ಇನ್ನೂ ಇದೇ ತಿಂಗಳು 6 ರಂದು ಬಸವಕಲ್ಯಾಣದಲ್ಲಿ ಬಸವಣ್ಣನವರ ಅನುಭವಮಂಟಪ್ಪವನ್ನು ಮಾಡಲು ಶಂಕು ಸ್ಥಾಪನೆ ಮಾಡುತ್ತಿದ್ದಾರೆ. ಬಂದು ವರ್ಷಗಳೇ ಕಳೆದರೂ ಬಸವಕಲ್ಯಾಣ ಕಡೆ ತಿರುಗಿನೋಡದ ಯಡಿಯೂರಪ್ಪ ಇದೀಗ ಬಸವಣ್ಣನ ಧ್ಯಾನ ಮಾಡುತ್ತಿದ್ದಾರೆ. ಸಿಎಂ ಬಸವಣ್ಣನಿಗೆ ಅಪಚಾರ ಮಾಡಿದ್ದಾರೆ. ಈ ನಡೆಯನ್ನು ಖಂಡಿಸಿ 6 ರಂದು ಬೆಂಗಳೂರಿನ ಬಸವಣ್ಣನ ಪ್ರತಿಮೆ ಮುಂದೆ ಸತ್ಯಾಗ್ರಹ ಮಾಡಲಾಗುವುದು. ಚುನಾವಣೆ ಮುಂದೆ ಇಟ್ಟುಕೊಂಡು ಈ ರೀತಿ  ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments