Thursday, September 11, 2025
HomeUncategorizedಕೊರೋನಾಗೆ ಬಿಜೆಪಿ ಮುಖಂಡ ಬಲಿ

ಕೊರೋನಾಗೆ ಬಿಜೆಪಿ ಮುಖಂಡ ಬಲಿ

ಕೊಪ್ಪಳ : ಕೊಪ್ಪಳದ ಗಂಗಾವತಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಜೆಪಿ ಹಿರಿಯ ಮುಖಂಡ ಸೋಮಶೇಖರಗೌಡ ಅವರ ಅಂತ್ಯಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​​ಐ) ಸಂಘಟನೆ ಸದಸ್ಯರು ನೆರವೇರಿಸಿ ಗಮನ ಸೆಳೆದರು. 54 ವರ್ಷದ ಬಿಜೆಪಿ ಹಿರಿಯ ಮುಖಂಡ ಸೋಮಶೇಖರಗೌಡ ಅವರಿಗೆ ಕಳೆದ ವಾರವಷ್ಟೇ ಕೊರೊನಾ ಸೊಂಕು ದೃಢಪಟ್ಟಿತ್ತು ಈ ಹಿನ್ನಲೆ ಚಿಕಿತ್ಸೆಗಾಗಿ ಕೊಪ್ಪಳದ ಕೊವಿಡ್19 ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಮೃತರ ಕುಟುಂಬ ಸದಸ್ಯರ ಅನುಮತಿ ಹಾಗೂ ಜಿಲ್ಲಾಡಳಿತದ ಸೂಚನೆ ಮೇರೆಗೆ ಕೋವಿಡ್ ವಿಧಾನಗಳನ್ನು ಅನುಸರಿಸಿ ಗಂಗಾವತಿಯ ವೀರಶೈವ ಲಿಂಗಾಯಿತ ರುದ್ರಭೂಮಿಯಲ್ಲಿ ಕೇವಲ ಆಯ್ದ ಸಂಖ್ಯೆಯ ಜನರ ಮಧ್ಯೆ ಸಂಘಟನೆಯ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನೆರವೇರಿಸಿದರು. ಕೊಪ್ಪಳ ಜಿಲ್ಲಾಡಳಿತದ ಸೂಚನೆ ಹಿನ್ನೆಲೆ ಬಿಜೆಪಿ ಪ್ರಮುಖರು, ಕುಟುಂಬ ಸದಸ್ಯರು ಹಾಗೂ ಮೃತರ ಆತ್ಮೀಯರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಪಾಲ್ಗೊಂಡಿದ್ದರು. ಸೋಂಕಿತರ ಅಂತ್ಯಕ್ರಿಯೆಗೆ ಬಹುತೇಕ ಕುಟುಂಬಗಳು ಹಿಂದೇಟು ಹಾಕುತ್ತಿರುವ ಈ ಸನ್ನಿವೇಶದಲ್ಲಿ ಪಿಎಫ್​ಐ ಸಂಘಟನೆಯ ಪದಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಶುಕ್ರಾಜ ಕುಮಾರ್ ಪವರ್ ಟಿವಿ ಕೊಪ್ಪಳ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments